ಶ್ರೀ ಕೃಷ್ಣ ಎಂ.ಆರ್. ಏಕಾಹ ಭಜನಾ ಸಮಿತಿ ಅಧ್ಯಕ್ಷ

Kdb_Ekaha Bhajan
Published on

ಕಡಬ: ಕಡಬದ ಶ್ರೀ ದುರ್ಗಾಂಬಿಕಾ ಅಮ್ಮನವರ ದೇವಸ್ಥಾನದಲ್ಲಿ ನಡೆಯುವ 64ನೇ ವರ್ಷದ ಏಕಾಹ ಭಜನೆ ಮಹೋತ್ಸವದ ಸಮಿತಿಯ ಅಧ್ಯಕ್ಷರಾಗಿ ಯುವ ಮುಖಂಡ ಶ್ರೀಕೃಷ್ಣ ಎಂ.ಆರ್. ಹಾಗೂ ಕಾರ್ಯದರ್ಶಿಯಾಗಿ ರಾಮಚಂದ್ರ ಗೌಡ ಸನಿಲ ಅವರು ಆಯ್ಕೆಯಾಗಿದ್ದಾರೆ.

ಕೋಶಾಧಿಕಾರಿಯಾಗಿ ಅಶೋಕ್ ಕುಮಾರ್, ಜತೆ ಕಾರ್ಯದರ್ಶಿಯಾಗಿ ಮಹೇಶ್ ಕುಕ್ಕಾಯಿಲ ಆಯ್ಕೆಯಾಗಿದ್ದಾರೆ. ದುರ್ಗಾಂಬಿಕಾ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಚಂದ್ರಶೇಖರ ಕರ್ಕೇರ, ಸದಸ್ಯರಾದ ಕಮಲ ಪಿ.ಪಣೆಮಜಲು, ಗೀತಾ ಲೋಕೇಶ್ ಪಣೆಮಜಲು, ಶೀನ ನಾಯ್ಕ ಬೆದ್ರಾಜೆ, ಪ್ರಮುಖರಾದ ವಿಜಯ ಕುಮಾರ್ ರೈ ಕರ್ಮಾಯಿ, ಕೃಷ್ಣ ಶೆಟ್ಟಿ ಕಡಬ, ಸೋಮಪ್ಪ ನ್ಯಾಕ್, ದುರ್ಗಾಪ್ರಸಾದ್ ಕೆ.ಪಿ., ಸದಾನಂದ ಗೌಡ ಸಾಂತ್ಯಡ್ಕ, ಅಶೋಕ್ ಕುಮಾರ್ ರೈ, ಆರಕ್ಷಕ ಸಿಬ್ಬಂದಿ ಮಹೇಶ್ ಎಚ್. ಬಿ., ರಾಕೇಶ್ ಕಳಾರ, ಸದಾನಂದ ಪಿ., ಪ್ರಕಾಶ್ ಎನ್.ಕೆ., ಸುಖೇಶ್ ಕುಮಾರ್, ಹರಿಪ್ರಸಾದ್ ರೈ, ಯಶೋಧರ ಪಿ., ದಿನೇಶ ರೈ ಕಳಾರ, ಮೋಹನ, ರಕ್ಷಿತ್ ರೈ, ಅಜಿತ್ ರೈ ಅರ್ತಿಲ, ಗಿರೀಶ್ ಎ.ಪಿ. ಆರಿಗ, ಕಿಶನ್ ಕುಮಾರ್ ರೈ ಉಪಸ್ಥಿತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net