

Asia Cup: ಇತ್ತೀಚೆಗೆ ಏಷ್ಯಾಪಕ್ಗೆ ಆಯ್ಕೆ ಸಮಿತಿ ಅಧ್ಯಕ್ಷ ಅಜಿತ್ ಅಗರ್ಕರ್ ಪ್ರಕಟಿಸಿದ ಬಳಿಕ, ಮಾಜಿ ಕ್ರಿಕೆಟಿಗ ಆಕಾಶ್ ಚೋಪ್ರಾ ತಮ್ಮ ಪರ್ಯಾಯ ತಂಡ ಪ್ರಕಟಿಸಿದ್ದು, ಇದಕ್ಕೆ ಶ್ರೇಯಸ್ ಅಯ್ಯರ್ ಅವರನ್ನು ನಾಯಕರನ್ನಾಗಿ ಆಯ್ಕೆ ಮಾಡಲಾಗಿದೆ.
ಆಗಸ್ಟ್ 19 ರಂದು ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿಯು ಏಷ್ಯಾಕಪ್ಗೆ 15 ಸದಸ್ಯರ ತಂಡ ಮತ್ತು ಐದು ಮೀಸಲು ಆಟಗಾರರನ್ನು ಘೋಷಿಸಿತ್ತು. ಈ ತಂಡದಿಂದ ಪ್ರಮುಖ ಬ್ಯಾಟ್ಸ್ಮನ್ ಶ್ರೇಯಸ್ ಅಯ್ಯರ್ ಅವರನ್ನು ಕೈ ಬಿಡಲಾಗಿತ್ತು, ಈ ವಿಷಯವಾಗಿ ಅನೇಕ ಹಿರಿಯ ಕ್ರಿಕೆಟಿಗರು ಅಸಮಧಾನ ವ್ಯಕ್ತಪಡಿಸಿದ್ದರು.
ಇದನ್ನೂ ಓದಿ:ದೇಸಿ ಅಕ್ಕಿ ಬಳಸಿ ಆರೋಗ್ಯಯುತವಾಗಿರಿ
ಆರಂಭಿಕ ಆಟಗಾರನಾಗಿ ಯಶಸ್ವಿ ಜೈಸ್ವಾಲ್ ಅವರನ್ನು ಆಯ್ಕೆ ಮಾಡಲಾಗಿದ್ದು, ಅವರೊಂದಿಗೆ ರುತುರಾಜ್ ಗಾಯಕ್ವಾಡ್ ಇನ್ನಿಂಗ್ಸ್ ಆರಂಭಿಸಲಿದ್ದಾರೆ. 3 ನೇ ಕ್ರಮಾಂಕಕ್ಕೆ ವಿಕೆಟ್ ಕೀಪರ್ ಬ್ಯಾಟ್ಸ್ಮನ್ ಕೆಎಲ್ ರಾಹುಲ್ ಅವರನ್ನು ಹೆಸರಿಸಲಾಗಿದೆ, ಅದೇ ರೀತಿ ನಾಯಕನಾಗಿ ಮತ್ತು 4 ನೇ ಕ್ರಮಾಂಕಕ್ಕೆ ಶ್ರೇಯಸ್ ಅಯ್ಯರ್ ಅವರನ್ನು ಆಯ್ಕೆ ಮಾಡಲಾಗಿದೆ. 5 ನೇ ಕ್ರಮಾಂಕದಲ್ಲಿ ರಿಷಭ್ ಪಂತ್, ಇನ್ನೋರ್ವ ಕೀಪರ್-ಬ್ಯಾಟರ್ ಆಗಿ ಇರಿಸಿಕೊಂಡಿದ್ದು, 6ನೇ ಕ್ರಮಾಂಕದಲ್ಲಿ ನಿತೀಶ್ ಕುಮಾರ್ ರೆಡ್ಡಿ, 7 ನೇ ಮತ್ತು 8 ನೇ ಕ್ರಮಾಂಕದಲ್ಲಿ, ಕೃನಾಲ್ ಪಾಂಡ್ಯ ಮತ್ತು ವಾಷಿಂಗ್ಟನ್ ಸುಂದರ್, 9 ನೇ ಕ್ರಮಾಂಕದಲ್ಲಿ ರವಿ ಬಿಷ್ಣೋಯ್, 10 ಮತ್ತು 11 ನೇ ಕ್ರಮಾಂಕದಲ್ಲಿ, ಪ್ರಸಿದ್ಧ್ ಕೃಷ್ಣ ಮತ್ತು ಮೊಹಮ್ಮದ್ ಸಿರಾಜ್ ಅವರನ್ನು ಆಯ್ಕೆ ಮಾಡಿದ್ದಾರೆ.
ಸಾಯಿ ಸುದರ್ಶನ್, ಧ್ರುವ್ ಜುರೆಲ್, ರಿಯಾನ್ ಪರಾಗ್, ಯುಜ್ವೇಂದ್ರ ಚಾಹಲ್ ಮತ್ತು ಖಲೀಲ್ ಅಹ್ಮದ್ 15 ಸದಸ್ಯರ ತಂಡದಲ್ಲಿನ ಉಳಿದ ಆಟಗಾರರು ಎಂದು ಚೋಪ್ರಾ ತಿಳಸಿದರು.
ಯಶಸ್ವಿ ಜೈಸ್ವಾಲ್, ರುತುರಾಜ್ ಗಾಯಕ್ವಾಡ್, ಕೆಎಲ್ ರಾಹುಲ್, ಶ್ರೇಯಸ್ ಅಯ್ಯರ್ (ನಾಯಕ), ರಿಷಭ್ ಪಂತ್, ನಿತೀಶ್ ರೆಡ್ಡಿ, ಕೃನಾಲ್ ಪಾಂಡ್ಯ, ವಾಷಿಂಗ್ಟನ್ ಸುಂದರ್, ರವಿ ಬಿಷ್ಣೋಯ್, ಪ್ರಸಿದ್ಧ್ ಕೃಷ್ಣ, ಮೊಹಮ್ಮದ್ ಸಿರಾಜ್ (ಏಜೆನ್ಸೀಸ್)