

ಬಂಟ್ವಾಳ: ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಶೌರ್ಯ ವಿಪತ್ತು ನಿರ್ವಹಣ ಘಟಕ ಕಲ್ಲಡ್ಕ ಇದರ ಮಾಸಿಕ ಸಭೆ ಹಾಗೂ ಶ್ರಮದಾನ ಸರ್ಕಾರಿ ಪ್ರಾಥಮಿಕ ಶಾಲೆ ಬೋಳಂತೂರಿನಲ್ಲಿ ಭಾನುವಾರ ನಡೆಯಿತು. ಮಾಸಿಕ ಸಭೆಯಲ್ಲಿ ಘಟಕದ ಮುಂದಿನ ಸೇವಾ ಕಾರ್ಯಗಳ ಬಗ್ಗೆ ಚರ್ಚಿಸಲಾಯಿತು.
ಘಟಕದ ಸದಸ್ಯರು ಶ್ರಮದಾನದ ಮೂಲಕ ಬೋಳಂತೂರು ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಆವರಣದ ಒಳಗೆ ಬೆಳೆದ ಗಿಡಗಂಟಿಗಳನ್ನು ಕಡಿದು ಸ್ವಚ್ಛಗೊಳಿಸಿದರು.
ಬೋಳಂತೂರು ಶಾಲಾ ಅಭಿವೃದ್ಧಿ ಸಮಿತಿ ಸದಸ್ಯ ಮಹಮ್ಮದ್ ಕುಂಞಿ, ಮುಖ್ಯಶಿಕ್ಷಕಿ ಗೀತಾ ಎಸ್., ಶಿಕ್ಷಕ ಪರಮೇಶ್ವರಯ್ಯ, ಶಿಕ್ಷಕಿ ಸೌಮ್ಯ, ಗ್ರಾಮಾಭಿವೃದ್ಧಿ ಯೋಜನೆಯ ಬೋಳಂತೂರು ಒಕ್ಕೂಟ ಅಧ್ಯಕ್ಷೆ ಸೀತಾ, ಒಕ್ಕೂಟ ಸೇವಾ ಪ್ರತಿನಿಧಿ ಲೀಲಾವತಿ, ಕಲ್ಲಡ್ಕ ಶೌರ್ಯ ಘಟಕದ ಅಧ್ಯಕ್ಷ ಮಾಧವ ಸಾಲಿಯಾನ್ ಕುದ್ರಬೆಟ್ಟು, ಘಟಕದ ಸಂಯೋಜಕಿ ವಿದ್ಯಾ, ಸದಸ್ಯರಾದ ತುಳಸಿ, ರವಿಚಂದ್ರ, ಮೌರೀಶ್, ವೆಂಕಪ್ಪ, ಸತೀಶ್, ಧನಂಜಯ, ಸಂತೋಷ್ ಬೊಲ್ಪೊಡಿ, ಚಿನ್ನಾ ಕಲ್ಲಡ್ಕ, ಗಣೇಶ್ ನೆಟ್ಲ ಉಪಸ್ಥಿತರಿದ್ದರು.