

ನವದೆಹಲಿ: ಸಂಸತ್ ಅಧಿವೇಶನದ ವೇಳೆ ಹೆಸರನ್ನೂ ಕೂಗುತ್ತಾ ಗದ್ದಲ ಎಬ್ಬಿಸುತ್ತಿರುವುದರ ಬಗ್ಗೆ ಮಾಜಿ ಪ್ರಧಾನಿ ಎಚ್.ಡಿ. ದೇವೇಗೌಡ ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಈ ಕುರಿತು ಮಾತನಾಡಿದ ಮಾಜಿ ಪ್ರಧಾನಿ, ರಾಜ್ಯಸಭೆ ಸಂಸದರು ಆಗಿರುವ ಅವರು ಪ್ರತಿಯೊಬ್ಬ ಸದಸ್ಯ ಸಭ್ಯತೆ ಹಾಗೂ ಗಾಂಭೀರ್ಯತೆಯನ್ನು ಕಾಪಾಡಿಕೊಂಡರೆ ಮಾತ್ರ ಸಂವಿಧಾನವನ್ನು ಉಳಿಸಲು ಸಾಧ್ಯ. ಕಲಾಪ ನಡೆಯುತ್ತಿರುವ ವೇಳೆ ಗದ್ದಲ, ಕಿರುಚಾಟ, ಅಡೆ ತಡೆ ಹೆಸರೂ ಕೂಗುತ್ತಿರುವುದಿಂದ ಸಮಯ ವ್ಯರ್ಥವಾಗುತ್ತಿದೆ.
ಅನಾರೋಗ್ಯದ ನಡುವೆಯೂ ನಾನು ಸಂಸತ್ ಕಲಾಪದಲ್ಲಿ ಭಾಗುಯಾಗಿದ್ದೇನೆ. ಆದರೆ, ಇಲ್ಲಿ ನಡೆಯುತ್ತಿರುವ ಘಟನೆಗಳಿಂದ ನನಗೆ ತುಂಬಾ ಬೇಸರವಾಗಿದೆ. ನನ್ನ ಸುದೀರ್ಘ ರಾಜಕೀಯ ಅನುಭವದಲ್ಲಿ ಹೇಳುವುದಾದರೆ ಸಂಸತ್ ಕಲಾಪದ ಗುಣಮಟ್ಟ ಅತ್ಯಂತ ಕೀಳುಮಟ್ಟಕ್ಕೆ ಇಳಿದಿದೆ. ಪ್ರತಿಯೊಬ್ಬ ಸದಸ್ಯ ಘನತೆ ಹಾಗೂ ಸಭ್ಯತೆಯನ್ನು ಕಾಪಾಡಿಕೊಂಡರೆ ಮಾತ್ರ ಪ್ರಜಾಪ್ರಭುತ್ವವನ್ನು ಉಳಿಸಲು ಸಾಧ್ಯ.
ಜೋರಾಗಿ ಕೂಗಾಡುವುದು, ಹೆಸರಿಡಿದು ಕರೆಯುವುದು, ಘೋಷಣೆಗಳಿಂದ ನಮ್ಮ ವ್ಯವಸ್ಥೆಯಲ್ಲಿ ಉಳಿದಿರುವುದನ್ನು ನಾಶಪಡಿಸಲಿದೆ ಎಂದು ಸಂಸತ್ ಕಲಾಪದಲ್ಲಿ ಗದ್ದಲದ ಕುರಿತು ಮಾಜಿ ಪ್ರಧಾನಿ ಎಚ್.ಡಿ. ದೇವೇಗೌಡ ಆಕ್ಷೇಪಿಸಿದ್ದಾರೆ.