ಒಂದು ಊರಿನಲ್ಲಿ ತಾಯಿ-ಮಗ ವಾಸಿಸುತ್ತಿದ್ದರು. ತಾಯಿಯ ಹೆಸರು ರಾಧಿಕಾ, ಮಗನ ಹೆಸರು ಅಜಯ್. ಅಜಯ್ ತಂದೆ ಅವನು ಬಾಲ್ಯದಲ್ಲಿ ಇರುವಾಗಲೆ ಅಪಘಾತದಲ್ಲಿ ತೀರಿ ಹೋಗಿರುತ್ತಾರೆ. ತಾಯಿ ಮಗನಿಗೆ ಒಳ್ಳೆಯ ವಿದ್ಯೆ ಕಲಿಸಬೇಕು ಎಂದು ಹಗಲು-ಇರುಳು ದುಡಿದು, ಅವನನ್ನು ಆ ಊರಿನಲ್ಲಿರುವ ಶಾಲೆಗೆ ಸೇರಿಸುತ್ತಾರೆ. ಅವನು ಚೆನ್ನಾಗಿ ಓದಿ ಪಿಯುಸಿಯಲ್ಲಿ ರ್ಯಾಂಕ್ ಬರುತ್ತಾನೆ. ಇಂಜಿನಿಯರಿಂಗ್ ಕೋರ್ಸ್ ಮಾಡಬೇಕು ಎಂದು ಬೆಂಗಳೂರಿಗೆ ಹೋಗುತ್ತಾನೆ. ಕಷ್ಟಪಟ್ಟು ಓದಿ ಎಲ್ಲ ಸೆಮಿಸ್ಟರ್ಗಳಲ್ಲೂ ಒಳ್ಳೆಯ ಅಂಕಗಳನ್ನು ಪಡೆಯುತ್ತಾನೆ. ಎರಡು ತಿಂಗಳು ರಜೆಗೆ ಊರಿಗೆ ಬರುತ್ತಾನೆ.
ಒಂದು ದಿನ ಇದ್ದಕಿದ್ದಂತೆ ಅಜಯ್ನಿಗೆ ಒಂದು ಕಂಪನಿಯಿಂದ ಫೋನ್ ಬರುತ್ತದೆ. ನಿಮಗೆ ಕೆಲಸ ಕೊಡುತ್ತೇವೆ, ನೀವು ನಮ್ಮ ಕಂಪನಿಗೆ ಬನ್ನಿ ಎಂದು. ಈ ವಿಷಯ ಕೇಳುತ್ತಿದ್ದಂತೆ ತಾಯಿ-ಮಗ ಬಹಳ ಸಂತೋಷಪಡುತ್ತಾರೆ. ಮರುದಿನ ಅಜಯ್ ಬೆಂಗಳೂರಿಗೆ ಹೋಗುತ್ತಾನೆ. ಅಲ್ಲಿ ಅವನಿಗೆ ಕೆಲಸ ಕೊಡುತ್ತಾರೆ. ಆಗ ಅವನಿಗೆ ದುಡ್ಡಿನ ಮೇಲೆ ಬಹಳ ಆಸೆಯಾಗಿ ಅವನು ಅವನ ತಾಯಿಯನ್ನೇ ಮರೆಯುತ್ತಾನೆ ಮತ್ತು ಅವನ ಕಂಪನಿಯಲ್ಲಿ ಇರುವ ಒಂದು ಹುಡುಗಿಯನ್ನು ಪ್ರೀತಿಸಿ ಮದುವೆಯಾಗುತ್ತಾನೆ. ಅದೇ ಸಂದರ್ಭದಲ್ಲಿ ಅವನ ತಾಯಿ ಬೆಂಗಳೂರಿಗೆ ಬರಲು ಹಠ ಮಾಡುತ್ತಾರೆ.
ಆ ಹಠ ತಡಯಲಾರದೆ ಅವನು, ತನ್ನ ತಾಯಿ ಹತ್ತಿರ ಆಟೋ ಡ್ರೖೆವರ್ ಹತ್ತಿರ ತನ್ನ ನಿವಾಸದ ವಿಳಾಸವನ್ನು ಕಳಿಸುತ್ತೇನೆ ನೀನು ಅವನ ಜತೆ ಬಾ ಎಂದು ಹೇಳುತ್ತಾನೆ. ಆಗ ತಾಯಿ ಮಗನ ಮಾತಿಗೆ ಒಪ್ಪಿಕೊಂಡು ಬೆಂಗಳೂರಿನ ಬಸ್ ಸ್ಟ್ಯಾಂಡ್ ಹತ್ತಿರ ಬರುತ್ತಾಳೆ. ಆಟೋ ಡ್ರೖೆವರ್ ಏನೂ ಮಾತನಾಡದೆ ಅವರ ಮಗ ಬರೆದಿದ್ದ ನಿವಾಸದ ಹತ್ತಿರ ತಂದು ಬಿಡುತ್ತಾನೆ. ಆದರೆ ಮಗ ನೀಡಿದ ವಿಳಾಸ ಅನಾಥಾಶ್ರಮದ್ದಾಗಿರುತ್ತದೆ. ಆಗ ತಾಯಿ ತನ್ನ ಮಗ ಎಲ್ಲೇ ಇರಲಿ ಸುಖವಾಗಿರಲಿ ಎಂದು ಹೇಳುತ್ತಾಳೆ. ಮರುದಿನ ಆಶ್ರಮದಿಂದ ಫೋನ್ ಬರುತ್ತದೆ. ನಿಮ್ಮ ತಾಯಿ ಹೃದಯಘಾತದಿಂದ ತೀರಿಕೊಂಡಿದ್ದಾರೆ ಎಂದು. ಆಗ ಅಜಯ್ ಓಡಿ ಆ ಅನಾಥಾಶ್ರಮಕ್ಕೆ ಬಂದು ಕಣ್ಣೀರಿಡುತ್ತಾನೆ. ಆದರೆ ತಾಯಿಯನ್ನು ಶಾಶ್ವತವಾಗಿ ಕಳೆದುಕೊಂಡಿರುತ್ತಾನೆ.
| ಧನುಷ್ ಎಚ್.ಕೋಟಿಹಾಳ್ 6ನೇ ತರಗತಿ, ಸೊಫ್ರೋಸೈನ್ ಕಾನ್ಸಪ್ಟ್ ಸ್ಕೂಲ್
ಮುಂಗಾರು ಮತ್ತಷ್ಟು ಚುರುಕು: ರಾಜ್ಯದ ಎಲ್ಲೆಲ್ಲಿ ಎಷ್ಟು ದಿನ ಆರೆಂಜ್ ಅಲರ್ಟ್?