ಆಸಿಡ್ ನಾಗನಿಗೆ ಅತ್ಯಾಚಾರ ಆರೋಪಿಗೆ ಆಗುವ ಶಿಕ್ಷೆಯೇ ಆಗಬೇಕು: ಸಚಿವೆ ಶೋಭಾ ಕರಂದ್ಲಾಜೆ

Shobha karandlaje
Published on

ಉಡುಪಿ: ಗಾರ್ಮೆಂಟ್ಸ್ ಯುವತಿ ಮೇಲೆ ಆಸಿಡ್ ದಾಳಿಯನ್ನು ಖಂಡಿಸಿರುವ ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ, ಆರೋಪಿಗೆ ಕಠಿಣ ಶಿಕ್ಷೆ ವಿಧಿಸಬೇಕೆಂದು ಹೇಳಿದ್ದಾರೆ.

ಉಡುಪಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಆಸಿಡ್ ನಾಗನಿಗೆ ಅತ್ಯಾಚಾರ ಆರೋಪಿಗೆ ಆಗುವ ಶಿಕ್ಷೆ ವಿಧಿಸಬೇಕು. ಮುಂದೆ ಈ ರೀತಿಯ ಮಾನಸಿಕತೆ ಸಮಾಜದಲ್ಲಿ ನಿರ್ಮಾಣ ಆಗಬಾರದು. ಇದಕ್ಕಾಗಿ ಇಂತಹ ಕಟುಕರಿಗೆ ಘೋರ ಶಿಕ್ಷೆಯನ್ನೇ ವಿಧಿಸಬೇಕು ಎಂದು ಹೇಳಿದ್ದಾರೆ.

ಆಸಿಡ್ ದಾಳಿಗೊಳಗಾದ ಯುವತಿಯ ಜೀವನವೇ ಹಾಳಾಗಿದೆ. ಆಕೆ ಬದುಕಿದ್ದು ಸತ್ತಂತೆ ಇರುವಂತಹ ಸ್ಥಿತಿಗೆ ದೂಡಿದ ಅವನನ್ನು ಕೊಲೆಗೆ ವಿಧಿಸುವ ಶಿಕ್ಷೆಗೆ ಒಳಪಡಿಸಬೇಕು ಎಂದು ಹೇಳಿದರು.

ದುಷ್ಟರಿಗೆ ಸಮಾಜದಲ್ಲಿ ಭಯ ಬರಿಸಬೇಕು. ನಮ್ಮ ಸಮಾಜದಲ್ಲಿ ಇಂತವರು ಇದ್ದಾರಾ ಅಂತ ಆತಂಕ ಆಗುತ್ತಿದೆ.ಕೇಂದ್ರ ಮತ್ತು ರಾಜ್ಯ ಸರಕಾರಕ್ಕೆ, ಗೃಹ ಸಚಿವರಿಗೆ ಈಗಾಗಲೇ ಈ ಒತ್ತಾಯ ಮಾಡಿದ್ದೇನೆ. ಅವನ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲೇಬೆಕು ಎಂದು ಸಚಿವೆ ಶೋಭಾ ಕರಂದ್ಲಾಜೆ ಹೇಳಿದ್ದಾರೆ. (ದಿಗ್ವಿಜಯ ನ್ಯೂಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net