ಶಿವಸಿಂಪಿ ಸಮಾಜದಿಂದ ಪುರಸ್ಕಾರ

Published on

ಹುಬ್ಬಳ್ಳಿ: ಅಖಿಲ ಭಾರತ ವೀರಶೈವ ಲಿಂಗಾಯತ ಶಿವಸಿಂಪಿ ಸಂಘದ ವತಿಯಿಂದ ನಗರ ವ್ಯಾಪ್ತಿಯ ಸಮಾಜದ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರಕ್ಕಾಗಿ ಅರ್ಜಿ ಆಹ್ವಾನಿಸಲಾಗಿದೆ.

ದಿ. ಗುರುಸಿದ್ದಪ್ಪ ನಾಗಪ್ಪ ಲಕ್ಕಿಮರ ಮತ್ತು ಜಯಶೀಲ ಮತ್ತು ಶರ್ಬುಲಿಂಗಪ್ಪ ಲಕ್ಕಿಮರ ಅವರ ದತ್ತಿ ಶಿಕ್ಷಣ ನಿಧಿಯಿಂದ ನಗದು ಪುರಸ್ಕಾರ ನೀಡಲಾಗುವುದು.

2025ನೇ ಸಾಲಿನ ಎಸ್ಎಸ್ಎಲ್ಸಿ ಮತ್ತು ಪಿಯುಸಿ ದ್ವೀತಿಯ ಪರೀಕ್ಷೆಯಲ್ಲಿ ಶೇ. 95ಕ್ಕಿಂತ ಹೆಚ್ಚು ಅಂಕ ಪಡೆದ ವಿದ್ಯಾರ್ಥಿಗಳು ಅರ್ಜಿ ಸಲ್ಲಿಸಬಹುದು. ನಿಗದಿತ ಅರ್ಜಿಯೊಂದಿಗೆ ದೃಢೀಕೃತ ಅಂಕಪಟ್ಟಿ, ಇತ್ತೀಚಿನ ಭಾವಚಿತ್ರ ಮತ್ತು ಆಧಾರ್ ಕಾರ್ಡ್ ಜೆರಾಕ್ಸ್ ಪ್ರತಿಗಳೊಂದಿಗೆ ಆ. 20 ರೊಳಗಾಗಿ ವಸಂತಕುಮಾರ ಹೆಗ್ಡಾಳ, ಎಂ.ಜಿ. ಮಾರ್ಕೆಟ್, ಲಕ್ಷ್ಮಿ ಗುಡಿ ಎದುರು ಇಲ್ಲಿಗೆ ಸಲ್ಲಿಸುವಂತೆ ಸಂಘದ ಖಜಾಂಚಿ ಗಂಗಾಧರ ಸಾದರಹಳ್ಳಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net