ಕರಾವಳಿ ಜಾನಪದ ಅಧ್ಯಯನಕ್ಕೆ ಶಿವರಾಮ ಕಾರಂತರ ಕೊಡುಗೆ ಅಪಾರ

udp-16-karantha
Published on

ಉಡುಪಿ: ಕರಾವಳಿ ಜಾನಪದವನ್ನು ಕೇಂದ್ರವಾಗಿಟ್ಟುಕೊಂಡು ಡಾ. ಶಿವರಾಮ ಕಾರಂತರು ಸಾಹಿತ್ಯ ರಚನೆ ಮಾಡಿದ್ದಾರೆ. ಈ ನಿಟ್ಟಿನಲ್ಲಿ ಸ್ಥಳಿಯ ಜಾನಪದ ಅಧ್ಯಯನಕ್ಕೆ ಕಾರಂತರ ಕೊಡುಗೆ ಅಪಾರ ಎಂದು ಜಾನಪದ ಸಂಶೋಧಕ ಪ್ರೊ. ಎಸ್​.ಎ. ಕೃಷ್ಣಯ್ಯ ಹೇಳಿದರು.

ಬ್ರಹ್ಮಗಿರಿಯ ರೆಡ್​ಕ್ರಾಸ್​ ಭವನದ ಹೆನ್ರಿ ಡ್ಯುನಾಂಟ್​ ಸಭಾಭವನದಲ್ಲಿ ಕೋಟ ಶಿವರಾಮ ಕಾರಂತ ಟ್ರಸ್ಟ್​ ಹಾಗೂ ಅಜ್ಜರಕಾಡು ಮಹಿಳಾ ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಹಾಗೂ ಸ್ನಾತ್ತಕೋತ್ತರ ಅಧ್ಯಯನ ಕೇಂದ್ರ ಸಂಯುಕ್ತ ಆಶ್ರಯದಲ್ಲಿ ನಡೆದ ಡಾ. ಶಿವರಾಮ ಕಾರಂತರ ಬರಹ ಮತ್ತು ಜಾನಪದ ಅಧ್ಯಯನ ಶಿಬಿರ ಉದ್ಘಾಟಿಸಿ ಮಾತನಾಡಿದರು.

ಡಾ. ಶಿವರಾಮ ಕಾರಂತ ಟ್ರಸ್ಟ್​ನ ಅಧ್ಯಕ್ಷ ಡಾ. ಗಣನಾಥ ಶೆಟ್ಟಿ ಎಕ್ಕಾರು ಮಾತನಾಡಿ, ಡಾ. ಶಿವರಾಮ ಕಾರಂತರು ಸಾಹಿತ್ಯ ಮಾತ್ರವಲ್ಲದೇ, ಪರಿಸರದ ಬಗ್ಗೆ ಹೋರಾಟ ಮಹತ್ತರವಾಗಿದೆ. ದಿಟ್ಟತನ, ಸ್ಪಷ್ಟ ನೇರ ಮಾತು ಅವರಲ್ಲಿ ಕಾಣುತ್ತಿದ್ದು, ವಿಶ್ವದಲ್ಲೇ ಕರಾವಳಿಯ ಹೆಸರನ್ನು ಸಾಹಿತ್ಯದಲ್ಲಿ ಮುಂಚೂಣಿಯಲ್ಲಿ ಇರಿಸುವಲ್ಲಿ ಕಾರಂತರ ಪಾತ್ರ ಪ್ರಮುಖವಾಗಿದೆ ಎಂದರು.

ರಾಜ್ಯ ರೆಡ್​ಕ್ರಾಸ್​ ಸಂಸ್ಥೆಯ ಸಭಾಪತಿ ಬಸ್ರೂರು ರಾಜೀವ ಶೆಟ್ಟಿ ಮಾತನಾಡಿದರು. ಮಹಿಳಾ ಸರ್ಕಾರಿ ಪ್ರಥಮ ಕಾಲೇಜು ಪ್ರಾಂಶುಪಾಲ ಪ್ರೊ. ಶ್ರೀಧರ್​ ಪ್ರಸಾದ್​ ಕೆ. ಅಧ್ಯಕ್ಷ್ಯತೆ ವಹಿಸಿದ್ದರು. ಈ ಸಂದರ್ಭದಲ್ಲಿ ಶಿಬಿರದಲ್ಲಿ ಭಾಗವಹಿಸಿದ ಶಿಬಿರಾರ್ಥಿಗಳಿಗೆ ಪ್ರಮಾಣಪತ್ರವನ್ನು ವಿತರಿಸಲಾಯಿತು. ಇತ್ತೀಚೆಗೆ ನಿಧನರಾದ ಪ್ರೊ. ಹೇರಂಜೆ ಕೃಷ್ಣ ಭಟ್​ ಹಾಗೂ ನಂದಳಿಕೆ ಬಾಲಚಂದ್ರ ರಾವ್​ ಅವರಿಗೆ ಶ್ರದ್ಧಾಂಜಲಿ ಅರ್ಪಿಸಲಾಯಿತು. ಕನ್ನಡ ವಿಭಾಗದ ಮುಖ್ಯಸ್ಥೆ ಪ್ರೊ. ನಿಕೇತನಾ, ಸಹ ಪ್ರಾಧ್ಯಾಪಕ ಡಾ. ಪ್ರಸನ್ನ ಪಿ.ಬಿ., ಪ್ರಾಧ್ಯಾಪಕಿ ಹೇಮಾವತಿ ಮತ್ತಿತತರು ಉಪಸ್ಥಿತರಿದ್ದರು. ಕಾರಂತ ಟ್ರಸ್ಟ್​ನ ಸದಸ್ಯ ಕಾರ್ಯದರ್ಶಿ ಪೂರ್ಣಿಮಾ ಪ್ರಾಸ್ತಾವಿಕವಾಗಿ ಮಾತನಾಡಿ ಸ್ವಾಗತಿಸಿ, ತ್ರಿವೇಣಿ ನಿರೂಪಿಸಿ, ಶಿವರಾಮ ಕಾರಂತ ಟ್ರಸ್ಟ್​ನ ಸದಸ್ಯ ಜಿ.ಎಂ. ಶರೀಫ್​ ವಂದಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net