ಹಿರಿಯ ನಟಿ ಲೀಲಾವತಿ ಆರೋಗ್ಯ ವಿಚಾರಿಸಿದ ಶಿವರಾಜ್ ​ಕುಮಾರ್​​

lilavati
Published on

 ಬೆಂಗಳೂರು: ಹಿರಿಯ ಕಲಾವಿದೆ ಲೀಲಾವತಿ ಅವರು ಬಹುದಿನಗಳಿಂದ ಹಾಸಿಗೆ ಹಿಡಿದಿದ್ದಾರೆ. ಲೀಲಾವತಿ ಅವರ ಮನೆಗೆ ನಟ ಶಿವರಾಜ್​ ಕುಮಾರ್​​ ಭೇಟಿ ಆರೋಗ್ಯ ವಿಚಾರಿಸಿದ್ದಾರೆ.

ಲೀಲಾವತಿ ಅವರಿಗೆ ಈಗ ಬರೋಬ್ಬರಿ 87 ವರ್ಷ ವಯಸ್ಸು. ವಯೋಸಹಜ ಅನಾರೋಗ್ಯದಿಂದ ಬಳಲುತ್ತಿದ್ದಾರೆ. ಸಿನಿಮಾ ಕಲಾವಿದರು ಹಾಗೂ ಆಪ್ತರು ಲೀಲಾವರಿ ಅವರ ಮನೆಗೆ ಬಂದು ಆರೋಗ್ಯವನ್ನು ವಿಚಾರಿಸಿ ತೆರಳುತ್ತಿದ್ದಾರೆ.

ಬೆಂಗಳೂರು ಗ್ರಾಮಾಂತರ ಜಿಲ್ಲೆಯ ನೆಲಮಂಗಲ ತಾಲೂಕಿನ ಸೋಲದೇವನಹಳ್ಳಿಯ ಲೀಲಾವತಿ ಅವರ ತೋಟದ ಮನೆಯಲ್ಲಿದ್ದಾರೆ. ನಟ ದರ್ಶನ್​, ನಟ ಅರ್ಜುನ್ ಸರ್ಜಾ ಕೆಲವು ದಿನಗಳ ಹಿಂದೆ ಲೀಲಾವತಿ ಅವರ ಆರೋಗ್ಯ ವಿಚಾರಿಸಿದ್ದರು. ಇದೀಗ ನಟ ಶಿವರಾಜ್​ಕುಮಾರ್ ಹಾಗೂ ಗೀರಾ ಶಿವರಾಜ್​ ಕುಮಾರ್​​ ಅವರು​​ ಭೇಟಿ ನೀಡಿ ಬಳಿಕ ಒಂದಷ್ಟು ಹೊತ್ತು ಅವರ ಜತೆಗೆ ಮಾತನಾಡಿದ್ದಾರೆ.

ಮನೆಗೆ ಆಗಮಿಸಿದ್ದ ಶಿವರಾಜ್ ಕುಮಾರ್ ಅವರನ್ನು ಆತ್ಮೀಯವಾಗಿ ಬರಮಾಡಿಕೊಂಡ ವಿನೋದ್ ರಾಜ್ , ಅಮ್ಮನ ಆರೋಗ್ಯದ ಕುರಿತು ಮಾಹಿತಿ ನೀಡಿದರು. ಶಿವಣ್ಣ ಮತ್ತು ವಿನೋದ್ ರಾಜ್ ತಬ್ಬಿಕೊಂಡು ಭಾವುಕ ಕ್ಷಣಕ್ಕೆ ಸಾಕ್ಷಿಯಾದರು.

ಲೀಲಾವತಿ ಅವರು 600ಕ್ಕೂ ಅಧಿಕ ಸಿನಿಮಾಗಳಲ್ಲಿ ನಟಿಸಿದ್ದಾರೆ. ಕನ್ನಡ ಮಾತ್ರವಲ್ಲದೆ ಹಲವು ಭಾಷೆಯ ಸಿನಿಮಾಗಳಲ್ಲೂ ತಮ್ಮ ನಟನೆ ಪ್ರದರ್ಶಿಸಿದ್ದಾರೆ. ಕನ್ನಡದಲ್ಲಂತೂ ಬಹುತೇಕ ಎಲ್ಲ ಸ್ಟಾರ್‌ ನಟರ ಜತೆಗೆ ಸಿನಿಮಾ ಮಾಡಿದ್ದಾರೆ. ಹೀಗಿರುವ ಲೀಲಾವತಿಗೀಗ ಬರೋಬ್ಬರಿ 87 ವರ್ಷ ವಯಸ್ಸು. ವಯೋಸಹಜ ಅನಾರೋಗ್ಯದಿಂದ ಬಳಲುತ್ತಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net