

ಬೆಂಗಳೂರು: ಕರುನಾಡ ಚಕ್ರವರ್ತಿ, ಹ್ಯಾಟ್ರಿಕ್ ಹೀರೋ ಶಿವರಾಜ್ಕುಮಾರ್(Shiva Rajkumar) ತೆಲುಗು ಚಿತ್ರರಂಗಕ್ಕೆ ಪಾದಾರ್ಪಣೆ ಮಾಡಿದ್ದು, ಅಖಂಡ ಆಂಧ್ರ ಪ್ರದೇಶದಲ್ಲಿ 5 ಬಾರಿ ಶಾಸಕರಾಗಿದ್ದ ಗುಮ್ಮಡಿ ನರಸಯ್ಯ ಜೀವನಾಧಾರಿತ ಚಿತ್ರದಲ್ಲಿ ನಾಯಕ ನಟನಾಗಿ ಅಭಿನಯಿಸಲಿದ್ದಾರೆ. ಇಂದು(ಅ. 22) ಚಿತ್ರದ ಮೊದಲ ಪೋಸ್ಟರ್ ಬಿಡುಗಡೆ ಮಾಡಲಾಗಿದೆ.
ನಿರ್ದೇಶಕ ಪರಮೇಶ್ವರ್ ಹಿವ್ರಾಲೆ ತಮ್ಮ ಇನ್ಸ್ಟಾಗ್ರಾಂನಲ್ಲಿ ಪೋಸ್ಟರ್ ವಿಡಿಯೋ ಬಿಡುಗಡೆ ಮಾಡಿದ್ದು, ಅದರಲ್ಲಿ ಡಾ. ಬಿ.ಆರ್. ಅಂಬೇಡ್ಕರ್ ಮತ್ತು ಮಹಾತ್ಮ ಗಾಂಧಿಯವರ ಪ್ರತಿಮೆಗಳ ಚಿತ್ರಬಿದೆ. ಜೊತೆಗೆ ಭಾರತದ ಸಂವಿಧಾನ ಮತ್ತು ಆಂಧ್ರಪ್ರದೇಶ ವಿಧಾನಸಭೆಯನ್ನು ತೋರಿಸಲಾಗಿದೆ. ಈ ಬಯೋಫಿಕ್ ಅನ್ನು ಪ್ಯಾನ್-ಇಂಡಿಯನ್ ಸಿನಿಮಾವಾಗಿ ತೆರೆಗೆ ತರಲಿದ್ದು, ಶೀಘ್ರದಲ್ಲೇ ಚಿತ್ರೀಕರಣ ಪ್ರಾರಂಭವಾಗಲಿದೆ ಎನ್ನಲಾಗಿದೆ.
ಗುಮ್ಮಡಿ ನರಸಯ್ಯ ಯಾರು?
ಅಖಂಡ ಆಂಧ್ರ ಪ್ರದೇಶ ಇದ್ದ ಸಮಯದಲ್ಲಿ ತೆಲಂಗಾಣದ ಯೆಲಾಂಡು ಕ್ಷೇತ್ರದಿಂದ ಭಾರತೀಯ ಕಮ್ಯುನಿಸ್ಟ್ ಪಕ್ಷ (ಮಾರ್ಕ್ಸ್ವಾದಿ-ಲೆನಿನಿಸ್ಟ್) ದಿಂದ ಐದು ಬಾರಿ ಶಾಸಕರಾಗಿರುವ ಗುಮ್ಮಡಿ ನರಸಯ್ಯ ಅವರು ತಮ್ಮ ಸರಳತೆ ಮತ್ತು ತಳಮಟ್ಟದ ಕ್ರಿಯಾಶೀಲತೆಯಿಂದ ಅಪಾರ ಖ್ಯಾತಿಗಳಿಸಿದ್ದಾರೆ. ಅಂಚಿನಲ್ಲಿರುವ ಸಮುದಾಯಗಳ, ವಿಶೇಷವಾಗಿ ಬುಡಕಟ್ಟು ಮತ್ತು ಕಾರ್ಮಿಕ ವರ್ಗದ ಜನರ ಹಕ್ಕುಗಳಿಗಾಗಿ ದಶಕಗಳ ಕಾಲ ಹೋರಾಟ ಮಾಡಿದ್ದಾರೆ.
ಐದು ಬಾರಿ ಶಾಸಕರಾಗಿದ್ದ ಅವರು ವಿಧಾನಸಭೆ ಸೈಕಲ್ನಲ್ಲೇ ಬರುತ್ತಿದ್ದರು. ಅದರಿಂದಲೇ ಕ್ಷೇತ್ರದ ಜನರೊಂದಿಗೆ ಸಂಪರ್ಕ ಇಟ್ಟುಕೊಂಡಿದ್ದರು. ಐದು ಬಾರಿ ಶಾಸಕರಾದ್ರೂ ಆಸ್ತಿ ಮಾಡದೇ, ಐಷಾರಾಮಿ ಜೀವನ ನಡೆಸದೇ ಅವರ ಈ ನಿಸ್ವಾರ್ಥ ಸಾಮಾಜಿಕ ಜೀವನ ಮತ್ತು ರಾಜಕೀಯ ಪ್ರಯಾಣ ಅವರನ್ನು ತೆಲಂಗಾಣ ಮತ್ತು ಹಿಂದಿನ ಆಂಧ್ರಪ್ರದೇಶದಲ್ಲಿ ಜನರ ಮನಸ್ಸಿನಲ್ಲಿ ಅವರ ಬಗ್ಗೆ ಒಂದು ಗೌರವ ಇದೆ. (ಏಜೆನ್ಸೀಸ್)