ವಿಶ್ವ ಹಿರಿಯ ನಾಗರಿಕರ ದಿನಾಚರಣೆ ಅ.5ಕ್ಕೆ

19sgr5
ಸಾಗರದಲ್ಲಿ ರಾಜ್ಯ ನಿವೃತ್ತ ನೌಕರರ ಸಂಘದಿಂದ ಹಿರಿಯ ನಾಗರಿಕರಿಗೆ ಆಯೋಜಿಸಿದ್ದ ಕ್ರೀಡಾಸ್ಪರ್ಧೆಯಲ್ಲಿ ಉಮೇಶ್ ಹಿರೇನೆಲ್ಲೂರು, ಎಸ್.ಬಸವರಾಜ್, ನರಹರಿ ಮತ್ತಿತರರಿದ್ದರು.
Published on

ಸಾಗರ: ವಿಶ್ವ ಹಿರಿಯ ನಾಗರಿಕರ ದಿನಾಚರಣೆ ಅ.5ಕ್ಕೆ ನಡೆಯಲಿದ್ದು 60 ವರ್ಷ ಮೇಲ್ಪಟ್ಟವರಿಗೆ ಕ್ರೀಡೆ, ಸಾಂಸ್ಕೃತಿಕ ಸ್ಪರ್ಧೆ ಏರ್ಪಡಿಸಲಾಗಿದೆ ಎಂದು ರಾಜ್ಯ ನಿವೃತ್ತ ನೌಕರರ ಸಂಘದ ತಾಲೂಕು ಅಧ್ಯಕ್ಷ ಉಮೇಶ್ ಹಿರೇನೆಲ್ಲೂರು ಹೇಳಿದರು.

ವಿನೋಬಾನಗರದ ಅಂಬೇಡ್ಕರ್ ಭವನದ ಆವರಣದಲ್ಲಿ ರಾಜ್ಯ ನಿವೃತ್ತ ನೌಕರರ ಸಂಘದಿಂದ ಹಿರಿಯ ನಾಗರಿಕರಿಗೆ ಆಯೋಜಿಸಿದ್ದ ಕ್ರೀಡಾ ಹಾಗೂ ಸಾಂಸ್ಕೃತಿಕ ಸ್ಪರ್ಧೆ ಕಾರ್ಯಕ್ರಮದಲ್ಲಿ ಮಾತನಾಡಿ, ಎರಡು ದಶಕಗಳಿಂದ ಸಂಘದಿಂದ ಸ್ಪರ್ಧೆ ನಡೆಸುತ್ತಿದ್ದು ನೂರಾರು ಹಿರಿಯ ನಾಗರಿಕರು ಆಸಕ್ತಿಯಿಂದ ಪಾಲ್ಗೊಳ್ಳುತ್ತಿದ್ದಾರೆ ಎಂದು ತಿಳಿಸಿದರು.

ಸಂಘದ ಗೌರವಾಧ್ಯಕ್ಷ ಎಸ್.ಬಸವರಾಜ್ ಮಾತನಾಡಿ, ಹಿರಿಯ ನಾಗರಿಕರನ್ನು ಗೌರವದಿಂದ ನೋಡಬೇಕು. ಇಂತಹ ಚಟುವಟಿಕೆಗಳು ಬದುಕಿನ ಉತ್ಸಾಹ ಹೆಚ್ಚಿಸುತ್ತವೆ. ಕೇರಂ, ಚೆಸ್, ಗುಂಡು ಎಸೆತ ಸೇರಿ ವಿವಿಧ ಕ್ರೀಡೆ, ಗಾಯನ ಹಾಗೂ ಹಲವು ಸಾಂಸ್ಕೃತಿಕ ಸ್ಪರ್ಧೆ ಆಯೋಜಿಸಲಾಗಿದೆ ಎಂದರು.

ಸಂಘದ ಹಿರಿಯ ಸದಸ್ಯ ನರಹರಿ, ಎಂ.ಸಿ.ಪರಶುರಾಮಪ್ಪ, ಡಿ.ಗಣಪತಪ್ಪ, ಡಾ. ಕೆಳದಿ ವೆಂಕಟೇಶ್ ಜೋಯ್ಸ, ಸೋಮರಾಜ್, ಸತ್ಯನಾರಾಯಣ, ಸಿದ್ದನಾಯ್ಕ, ಚಂದ್ರಶೇಖರ ಶಿರಿವಂತೆ, ದಮಯಂತಿ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net