ಕೆಂಜಗಾಪುರದಲ್ಲಿ ವೀರಭದ್ರೇಶ್ವರ ರಥೋತ್ಸವ

14-ANP-P2 RATHA
ಆನಂದಪುರ ಸಮೀಪದ ಕೆಂಜಗಾಪುರ ಶ್ರೀ ವೀರಭದ್ರೇಶ್ವರ ಸ್ವಾಮಿ ದೇವಾಲಯದಲ್ಲಿ ಮಹಾರಥೋತ್ಸವ ಜರುಗಿತು.
Published on

ಆನಂದಪುರ: ಸಮೀಪದ ಕೆಂಜಗಾಪುರದ ಇತಿಹಾಸ ಪ್ರಸಿದ್ಧ ಶ್ರೀ ವೀರಭದ್ರೇಶ್ವರ ಸ್ವಾಮಿ ದೇವಾಲಯದಲ್ಲಿ ವೈಭವದ ರಥೋತ್ಸವ ನಡೆಯಿತು.

ಪ್ರತಿ ವರ್ಷ ಹೋಳಿ ಹುಣ್ಣಿಮೆ ದಿನ ರಥೋತ್ಸವ ಆಚರಿಸುವ ಸಂಪ್ರದಾಯವಿದೆ. ವಿಜಯ ನಗರದ ಅರಸರು ಮತ್ತು ನಂತರ ಕೆಳದಿ ಅರಸರ ಕಾಲದಲ್ಲಿ ಮಹಾರಥೋತ್ಸವ ನಡೆದ ದಾಖಲೆ ದೇಗುಲದಲ್ಲಿದೆ. ಬೆಳಗ್ಗೆ ಶ್ರೀ ದೇವರಿಗೆ ರುದ್ರಾಭಿಷೇಕ, ಅಷ್ಟೋತ್ತರ ಸೇವೆ, ಕೆಂಡಾರ್ಚನೆ ನಡೆಯಿತು. ವೀರಗಾಸೆ ನರ್ತನದೊಂದಿಗೆ ದೇವರ ಉತ್ಸವ ಮೂರ್ತಿಯನ್ನು ಹೊತ್ತು ನಡೆಸುವ ಕೆಂಡಾರ್ಚನೆ ಭಕ್ತಿ ಭಾವ ಹೆಚ್ಚಿಸಿತು.

ಉತ್ಸವ ಮೂರ್ತಿ ರಥಾರೋಹಣ, ಹಣ್ಣು ಕಾಯಿ ನೈವೇದ್ಯ, ಮಹಾಮಂಗಳಾರತಿ ನಡೆಯಿತು. ರಥ ಬೀದಿಯಲ್ಲಿ ರಥವನ್ನು ಎಳೆದು ಭಕ್ತರು ಕೃತಾರ್ಥರಾದರು. ಮಧ್ಯಾಹ್ನ ಧಾರ್ಮಿಕ ಸಭಾ ಕಾರ್ಯಕ್ರಮ ಮತ್ತು ಮಹಾ ದಾಸೋಹ ನಡೆಯಿತು. ಸಾವಿರಾರು ಭಕ್ತರು ಸೇರಿದ್ದರು. ದೇವಾಲಯ ಜಾತ್ರಾ ಸಮಿತಿ ಪದಾಧಿಕಾರಿಗಳು ವಿವಿಧ ಜವಾಬ್ದಾರಿ ನಿರ್ವಹಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net