ಯುಪಿಐ ಬ್ಯಾಂಕಿಂಗ್ ಸೇವೆ ಶೀಘ್ರ ಆರಂಭ

07SRL02
ಶಿರಾಳಕೊಪ್ಪದ ಬಸವೇಶ್ವರ ಪಟ್ಟಣ ಸಹಕಾರಿ ಬ್ಯಾಂಕ್ ನೂತನ ಅಧ್ಯಕ್ಷರಾಗಿ ಸೂರಣಗಿ ನಟರಾಜ್ ಹಾಗೂ ಉಪಾಧ್ಯಕ್ಷರಾಗಿ ರಾಜೇಶ್ ಅವಿರೋಧವಾಗಿ ಆಯ್ಕೆಯಾದರು. ಸೂರಣಗಿ ಚಂದ್ರಣ್ಣ, ಐ.ಎಂ.ಶಿವಾನಂದ ಸ್ವಾಮಿ ಇತರರಿದ್ದರು.
Published on

ಶಿರಾಳಕೊಪ್ಪ: ಬ್ಯಾಂಕ್‌ಗೆ ಆಧುನಿಕ ಸ್ಪರ್ಶ ನೀಡಲು ಶ್ರಮಿಸಲಾಗುವುದು ಎಂದು ಬಸವೇಶ್ವರ ಪಟ್ಟಣ ಸಹಕಾರಿ ಬ್ಯಾಂಕ್ ನೂತನ ಅಧ್ಯಕ್ಷ ಸೂರಣಗಿ ನಟರಾಜ್ ಹೇಳಿದರು.

ಶತಮಾನ ಪೂರೈಸಿರುವ ಬಸವೇಶ್ವರ ಪಟ್ಟಣ ಸಹಕಾರಿ ಬ್ಯಾಂಕ್ ನೂತನ ಅಧ್ಯಕ್ಷ, ಉಪಾಧ್ಯಕ್ಷರ ಆಯ್ಕೆ ನಂತರ ಪದಗ್ರಹಣ ಸಮಾರಂಭದಲ್ಲಿ ಮಾತನಾಡಿ, ಇಂಟರ್‌ನೆಟ್ ಮತ್ತು ಯುಪಿಐ ಬ್ಯಾಂಕಿಂಗ್ ಸೇವೆಗಳನ್ನು ಶೀಘ್ರದಲ್ಲಿ ಪ್ರಾರಂಭಿಸುವ ಯೋಜನೆ ಇದೆ ಎಂದು ತಿಳಿಸಿದರು.

ಬ್ಯಾಂಕ್‌ನ ಮಾಜಿ ಅಧ್ಯಕ್ಷ ವೇದಮೂರ್ತಿ ಕುಪ್ಪೇಲೂರು ಮಾತನಾಡಿ, ಬ್ಯಾಂಕ್‌ನ ಶತಮಾನೋತ್ಸವ ಆಚರಣೆ ವೇಳೆ ಕೆಲಸ ಮಾಡುವ ಅವಕಾಶ ನನಗೆ ಲಭಿಸಿತ್ತು ಎಂದರು. ಉಪಾಧ್ಯಕ್ಷರಾಗಿ ರಾಜೇಶ್ ಅವಿರೋಧವಾಗಿ ಆಯ್ಕೆಯಾದರು. ಪುರಸಭೆ ಮಾಜಿ ಸದಸ್ಯ ಐ.ಎಂ.ಶಿವಾನಂದ ಸ್ವಾಮಿ, ಸೂರಣಗಿ ಚಂದ್ರಣ್ಣ, ಬ್ಯಾಂಕ್ ನಿರ್ದೇಶಕರು ಭಾಗವಹಿಸಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net