ಜಾನುವಾರುಗಳಿಗೆ ಸಕಾಲದಲ್ಲಿ ಚಿಕಿತ್ಸೆ ಕೊಡಿಸಿ

14 RPT 2.
ರಿಪ್ಪನ್‌ಪೇಟೆ ಸಮೀಪದ ಗವಟೂರು ಗ್ರಾಮದಲ್ಲಿ ಮಿಶ್ರತಳಿ ಹಾಗೂ ಜಾನುವಾರುಗಳ ತಪಾಸಣೆ ಮಾಡುತ್ತಿರುವುದು.
Published on

ರಿಪ್ಪನ್‌ಪೇಟೆ: ಹೈನುಗಾರಿಕೆ ಲಾಭದಾಯಕ ಉದ್ಯಮವಾಗಿದ್ದು, ರೈತರು ಕೃಷಿ ಜತೆ ಜಾನುವಾರುಗಳ ಪೋಷಣೆಯಲ್ಲಿ ವೈಜ್ಞಾನಿಕ ಪದ್ಧತಿ ಅನುಸರಿಸಿದರೆ ಹೆಚ್ಚಿನ ಲಾಭ ಗಳಿಸಲು ಸಾಧ್ಯ ಎಂದು ತಾಲೂಕು ಪಶುಪಾಲನಾ ಇಲಾಖೆ ಮುಖ್ಯ ವೈದ್ಯಾಧಿಕಾರಿ ಡಾ. ನಟರಾಜ್ ಹೇಳಿದರು.

ಸಮೀಪದ ಗವಟೂರು ಗ್ರಾಮದಲ್ಲಿ ಹೊಸನಗರ ಪಶುಪಾಲನಾ ಇಲಾಖೆ ಮತ್ತು ಪಟ್ಟಣದ ಪಶುಚಿಕಿತ್ಸಾ ಆಸ್ಪತ್ರೆ ಸಹಯೋಗದಲ್ಲಿ ಆಯೋಜಿಸಿದ್ದ ಮಿಶ್ರತಳಿ, ಜಾನುವಾರುಗಳ ತಪಾಸಣೆ ಮತ್ತು ಪ್ರದರ್ಶನ ಶಿಬಿರದಲ್ಲಿ ಮಾತನಾಡಿದರು.

ಪ್ರಕೃತಿ ನಾಶ ಮಾಡದೆ ಸುತ್ತಮುತ್ತಲಿನ ಪರಿಸರ ಸಂರಕ್ಷಣೆ ಮಾಡಿಕೊಂಡು ಜಾನುವಾರುಗಳ ಉತ್ತಮ ಬೆಳವಣಿಗೆಗೆ ಗಮನ ನೀಡಿದರೆ ಆರ್ಥಿಕವಾಗಿ ಸಬಲರಾಗಲು ಸಾಧ್ಯ. ಆದ್ದರಿಂದ ರೈತರು ಜಾನುವಾರುಗಳ ರೋಗಗಳ ಬಗ್ಗೆ ತಜ್ಞ ವೈದ್ಯರಿಂದ ಮಾಹಿತಿ ಪಡೆದು ಸಕಾಲದಲ್ಲಿ ಚಿಕಿತ್ಸೆ ನೀಡಬೇಕು ಎಂದು ತಿಳಿಸಿದರು.

ಗ್ರಾಪಂ ಸದಸ್ಯರಾದ ಮಲ್ಲಿಕಾರ್ಜುನ, ಗಣಪತಿ, ಡಾ. ಕೆ.ಎಂ.ನಾಗರಾಜ್, ಡಾ. ಸಂತೋಷ್‌ಕುಮಾರ್, ಡಾ. ದಯಾನಂದ, ಡಾ. ರವಿಕುಮಾರ್, ಡಾ. ಅರ್ಚನಾ, ಡಾ. ಧನಂಜಯ, ಪಶುಪರಿವೀಕ್ಷಕ ರಂಗಪ್ಪ, ಸಂತೋಷ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net