ಪ್ರಯಾಣಿಕರ ತಂಗುದಾಣ ಸ್ವಚ್ಛತಾ ಶ್ರಮದಾನ

02 tth04
ತೀರ್ಥಹಳ್ಳಿಯ ರಾಮಕೃಷ್ಣಾಪುರ ಸಮರ್ಪಣಾ ತಂಡದವರು ಬಸ್ ತಂಗುದಾಣ ಸ್ವಚ್ಛಗೊಳಿಸಿದರು. ನಂದನ್, ಸತೀಶ್, ಮಂಜುನಾಥ್, ರಾಘವೇಂದ್ರ ಭಟ್, ವಿಷ್ಣುಕುಮಾರ ಇದ್ದರು.
Published on

ತೀರ್ಥಹಳ್ಳಿ: ಹೊಸ ವರ್ಷಾಚರಣೆ ಅಂಗವಾಗಿ ತಾಲೂಕಿನ ರಾಮಕೃಷ್ಣಾಪುರದ ಸಮರ್ಪಣಾ ತಂಡದ ಸ್ನೇಹಿತರು ಹೊಲಗೊಡಿಗೆ ಪ್ರಯಾಣಿಕರ ತಂಗುದಾಣ ಸ್ವಚ್ಛಗೊಳಿಸಿ ಸುಣ್ಣ-ಬಣ್ಣಗಳಿಂದ ಸುಂದರವಾಗಿ ನವೀಕರಿಸುವ ಮೂಲಕ ಗ್ರಾಮಸ್ಥರ ಮೆಚ್ಚುಗೆಗೆ ಪಾತ್ರರಾಗಿದ್ದಾರೆ.

ಬಸ್ ನಿಲ್ದಾಣದ ಒಳಭಾಗದಲ್ಲಿ ತಾಲೂಕಿನ ಪ್ರೇಕ್ಷಣೀಯ ಸ್ಥಳಗಳ ಮಾಹಿತಿ, ಕವಿಗಳ ಭಾವಚಿತ್ರ, ಮಾರ್ಗದಲ್ಲಿ ಸಂಚರಿಸುವ ಬಸ್ ವೇಳಾಪಟ್ಟಿ ಸಹ ಹಾಕಿರುವುದು ಪ್ರಯಾಣಿಕರಿಗೆ ಅನುಕೂಲಕರವಾಗಿದೆ.

ನಂದನ್ ಕೆರೆಬೈಲು, ಸತೀಶ್ ಕೋಟೆತೋಟ, ಮಂಜುನಾಥ್ ವಾರಳಿ, ರಾಘವೇಂದ್ರ ಭಟ್, ವಿಷ್ಣುಕುಮಾರ್ ಹೊಲಗೊಡಿಗೆ ಕಾರ್ಯ ನಿರ್ವಹಿಸಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net