ಜೋಗಫಾಲ್ಸ್ ವೀಕ್ಷಣೆಗೆ ಪ್ರವಾಸಿಗರ ದಂಡು

29 kgl joga 2
ಜೋಗ ಜಲಪಾತ
Published on

ಕಾರ್ಗಲ್: ಜೋಗ ಜಲಪಾತ ವೀಕ್ಷಣೆಗೆ ಸಾವಿರಾರು ಪ್ರವಾಸಿಗರು ಭಾನುವಾರ ಆಗಮಿಸಿದ್ದರು. ಪ್ರವಾಸಿ ವಾಹನಗಳು ಕಿಲೋಮೀಟರ್ ದೂರದವರೆಗೆ ಸಾಲುಗಟ್ಟಿ ನಿಂತಿದ್ದು, ಸಂಚಾರ ಸಿಕ್ಕು ಉಂಟಾಗಿತ್ತು.

ಮಳೆ ಜೋರಾಗಿದ್ದು, ಜೋಗ ಜಲಪಾತ ನೋಡಲು ಬರುವ ಪ್ರವಾಸಿಗರ ವೀಕೆಂಡ್ ಟ್ರಿಪ್ ಮುಂದುವರಿದಿದೆ. ಶನಿವಾರ ಮತ್ತು ಭಾನುವಾರ ಪ್ರವಾಸಿಗರ ಸಂಖ್ಯೆ ಹೆಚ್ಚಿತ್ತು. ಭಾನುವಾರ ಮಳೆ ಬಿಡುವಿದ್ದ ಕಾರಣ ಹೆಚ್ಚು ಕಿರಿಕಿರಿಯಾಗಲಿಲ್ಲ. ಜತೆ ಸದಾ ಮಂಜು ಕವಿಯುತ್ತಿದ್ದ ಜಲಪಾತಕ್ಕೆ ಭಾನುವಾರ ಜಲಪಾತ ವೀಕ್ಷಿಸಲು ಪ್ರವಾಸಿಗರಿಗೆ ತೊಡಕಾಗಲಿಲ್ಲ. ಜೋಗ ಜಲಪಾತದ ಸೌಂದರ್ಯವನ್ನು ಸಾವಿರಾರು ಪ್ರವಾಸಿಗರು ಕಣ್ತುಂಬಿಕೊಂಡರು.

ವಾಹನಗಳ ಪಾರ್ಕಿಂಗ್ ವ್ಯವಸ್ಥೆ ಇಲ್ಲದ ಕಾರಣ ಫಾಲ್ಸ್ ಮುಖ್ಯದ್ವಾರದ ಹೊರಭಾಗದ ರಸ್ತೆ ಬದಿಯಲ್ಲಿಯೇ ವಾಹನಗಳನ್ನು ನಿಲ್ಲಿಸಲು ವ್ಯವಸ್ಥೆ ಮಾಡಲಾಗಿತ್ತು. ಇದರಿಂದ ಸಾಕಷ್ಟು ಬಾರಿ ವಾಹನ ದಟ್ಟಣೆ ಉಂಟಾಗಿತ್ತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net