ಅಭಿವೃದ್ಧಿಯಲ್ಲಿ ಯುವಶಕ್ತಿ ಪಾತ್ರ ಅಪಾರ

25sor3
ಸೊರಬದ ಕೈಸೋಡಿ ಗ್ರಾಮದಲ್ಲಿ ಪಟ್ಟಣದ ಪದವಿಪೂರ್ವ ಕಾಲೇಜಿನ ಎನ್‌ಎಸ್‌ಎಸ್ ಶಿಬಿರವನ್ನು ಗ್ರಾಪಂ ಅಧ್ಯಕ್ಷೆ ಸರಸ್ವತಿ ಉದ್ಘಾಟಿಸಿದರು. ಎಂ.ಸುರೇಶಪ್ಪ, ನಾಗರಾಜ್ ಜೈನ್, ಪ್ರಶಾಂತ್ ಇತರರಿದ್ದರು.
Published on

ಸೊರಬ: ದೇಶದ ಅಭಿವೃದ್ಧಿಯಲ್ಲಿ ಯುವಶಕ್ತಿ ಪಾತ್ರ ಅಪಾರ ಎಂದು ಸರ್ಕಾರಿ ಪದವಿಪೂರ್ವ ಕಾಲೇಜಿನ ಪ್ರಾಚಾರ್ಯ ಎಂ.ಸುರೇಶಪ್ಪ ಹೇಳಿದರು.

ತಾಲೂಕಿನ ಕೈಸೋಡಿ ಗ್ರಾಮದಲ್ಲಿ ಪಟ್ಟಣದ ಪದವಿಪೂರ್ವ ಕಾಲೇಜಿನ ರಾಷ್ಟ್ರೀಯ ಸೇವಾಯೋಜನೆ ವಿದ್ಯಾರ್ಥಿಗಳಿಂದ ಏಳು ದಿನಗಳವರೆಗೆ ನಶಾಮುಕ್ತ ಭಾರತ ಅಭಿಯಾನ ಶೀರ್ಷಿಕೆಯಡಿ ಆಯೋಜಿಸಿದ್ದ ವಾರ್ಷಿಕ ವಿಶೇಷ ಸೇವಾ ಶಿಬಿರದಲ್ಲಿ ಮಾತನಾಡಿ, ವಿದ್ಯಾರ್ಥಿಗಳು ಶ್ರಮದಾನದ ಜತೆಯಲ್ಲಿ ಗ್ರಾಮದ ಆಚಾರ, ವಿಚಾರ ಹಾಗೂ ಸಂಸ್ಕೃತಿ ಅರಿತುಕೊಳ್ಳಲು ಎನ್‌ಎಸ್‌ಎಸ್ ವೇದಿಕೆ ಒದಗಿಸುತ್ತದೆ ಎಂದು ತಿಳಿಸಿದರು.

ಕಾಲೇಜು ಅಭಿವೃದ್ಧಿ ಸಮಿತಿ ಉಪಾಧ್ಯಕ್ಷ ನಾಗರಾಜ್ ಜೈನ್ ಮಾತನಾಡಿ, ರಾಷ್ಟ್ರೀಯ ಸೇವಾ ಯೋಜನೆಯು ಪ್ರತಿಯೊಬ್ಬ ವಿದ್ಯಾರ್ಥಿ ಉತ್ತಮ ವ್ಯಕ್ತಿತ್ವ ರೂಪಿಸಿಕೊಳ್ಳಲು ನೆರವಾಗುತ್ತದೆ. ಗ್ರಾಮೀಣ ಜನರ ಜೀವನ ಅರ್ಥಮಾಡಿಕೊಳ್ಳಬಹುದು ಎಂದರು.

ಉಳವಿ ಗ್ರಾಪಂ ಅಧ್ಯಕ್ಷೆ ಸರಸ್ವತಿ, ಸದಸ್ಯ ಪ್ರಶಾಂತ್, ಬಿಳಿಯಪ್ಪ, ಮುಖ್ಯಶಿಕ್ಷಕ ಜೆ.ಶಿವಪ್ಪ, ಯೋಜನಾಧಿಕಾರಿ ಉಮೇಶ್ ಭದ್ರಾಪುರ, ರವಿ, ಬಸವರಾಜ್, ರೇವಣಪ್ಪ, ಗ್ರಾಮಾಭಿವೃದ್ಧಿ ಸಮಿತಿ ಅಧ್ಯಕ್ಷ ಕೆ.ಇ.ಕೆರಿಯಪ್ಪ, ಡಾಕಪ್ಪ, ಮಂಜುನಾಥ ನಾಯ್ಕ, ಡಿ.ವಿ.ಚಿದಾನಂದ, ಸುಚೇತ್ ಜಿ. ಪಾಟೀಲ್ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net