ಸೊರಬ: ತಾಲೂಕು ಕೃಷಿ ಸಮಾಜದ ಅಧ್ಯಕ್ಷರಾಗಿ ಕೆ.ಜಿ.ಸುರೇಶ್ ಗದಿಗೆಪ್ಪ ಗೌಡ, ಉಪಾಧ್ಯಕ್ಷರಾಗಿ ಎಸ್.ಎಂ ರೇವಣಪ್ಪ ಆಯ್ಕೆಯಾಗಿದ್ದಾರೆ.
ಪ್ರತಿಸ್ಪರ್ಧಿಗಳು ನಾಮಪತ್ರ ಹಿಂಪಡೆದ ಹಿನ್ನೆಲೆಯಲ್ಲಿ ಉಪಾಧ್ಯಕ್ಷ ಎಸ್.ಎಂ.ರೇವಣಪ್ಪ, ಪ್ರಧಾನ ಕಾರ್ಯದರ್ಶಿ ಸ್ಥಾನಕ್ಕೆ ಶಾಂತಮ್ಮ ಅವಿರೋಧ ಆಯ್ಕೆಯಾದರು. ಖಜಾಂಚಿ ಮಂಜುನಾಥ್ ರಾವ್ ಪಾಟೀಲ್, ಜಿಲ್ಲಾ ಪ್ರತಿನಿಧಿ ಎಚ್.ಎನ್.ಉಮೇಶ್ ಪಾಟೀಲ್ ಆಯ್ಕೆಯಾಗಿದ್ದಾರೆ.
ಚುನಾವಣಾಧಿಕಾರಿಯಾಗಿ ಸಹಾಯಕ ಕೃಷಿ ನಿರ್ದೇಶಕ ಕೆ.ಜಿ.ಕುಮಾರ್ ಹಾಗೂ ಕೃಷಿ ತಾಂತ್ರಿಕ ಅಧಿಕಾರಿ ಕಾಂತರಾಜ್ ಕಾರ್ಯ ನಿವರ್ಹಿಸಿದರು. ನಾಗರಾಜ್ ಚಿಕ್ಕಸವಿ, ಜಿಲ್ಲಾ ಹಾಪ್‌ಕಾಮ್ಸ್ ಅಧ್ಯಕ್ಷ ಕೆ.ವಿ.ಗೌಡ, ಮಂಜಪ್ಪ ನೇರಲಗಿ, ಜಯಮಾಲಾ, ಮೋಹನ ಗೌಡ, ವಿರೂಪಾಕ್ಷಪ್ಪ, ಗಂಗಾಧರ ಗೌಡ, ಗುರುಗೌಡ ಬಸೂರು, ಈಶ್ವರಪ್ಪ ಕೊಡಕಣಿ ಇತರರಿದ್ದರು.