ಬದ್ಧತೆ ಇದ್ದವರಿಗೆ ಪಕ್ಷದಲ್ಲಿ ಸ್ಥಾನಮಾನ

5bdvt1
ಭದ್ರಾವತಿ ಬಿಜೆಪಿ ಮಂಡಲ ಅಧ್ಯಕ್ಷರಾಗಿ ಆಯ್ಕೆಯಾದ ಜಿ.ಧರ್ಮಪ್ರಸಾದ್ ಅವರನ್ನು ಬಿಜೆಪಿ ಕಾರ್ಯಕರ್ತರು ಸನ್ಮಾನಿಸಿದರು. ಎಚ್.ಎಲ್.ವಿಶ್ವನಾಥ, ಕೆ.ಎಚ್.ತೀರ್ಥಯ್ಯ, ಕೆ.ಎನ್.ಶ್ರೀಹರ್ಷ ಇತರರಿದ್ದರು.
Published on

ಭದ್ರಾವತಿ: ಬಿಜೆಪಿ ಮಂಡಲ ಅಧ್ಯಕ್ಷರಾಗಿ ಮೂರನೇ ಬಾರಿ ಆಯ್ಕೆಯಾದ ಜಿ.ಧರ್ಮಪ್ರಸಾದ್ ಅವರನ್ನು ಬಿಜೆಪಿ ಮಹಾಶಕ್ತಿ ಕೇಂದ್ರದ ಅಧ್ಯಕ್ಷರು, ಬಿಜೆಪಿ ಮುಖಂಡರು ಹಾಗೂ ಕಾರ್ಯಕರ್ತರು ಸನ್ಮಾನಿಸಿದರು.

ಬಿಎಂಎಸ್ ರಾಜ್ಯ ಪ್ರಧಾನ ಕಾರ್ಯದರ್ಶಿ ಎಚ್.ಎಲ್.ವಿಶ್ವನಾಥ ಮಾತನಾಡಿ, ರಾಷ್ಟ್ರೀಯ ವಿಚಾರದಲ್ಲಿ ಬದ್ಧತೆ ಇಟ್ಟು ಕೆಲಸ ಮಾಡುವವರನ್ನು ಸಂಘಟನೆ ಕೈಬಿಡುವುದಿಲ್ಲ. ಮೂರನೇ ಬಾರಿ ಮಂಡಲ ಅಧ್ಯಕ್ಷ ಸ್ಥಾನ ಅಲಂಕರಿಸಿರುವುದು ಹೆಮ್ಮೆಯ ವಿಚಾರ. ವಿದ್ಯಾರ್ಥಿ ಬದುಕಿನಲ್ಲಿ ಎಬಿವಿಪಿ ಸಂಘಟನೆಯಲ್ಲಿ ತೊಡಗಿಕೊಂಡು ಜಮ್ಮು-ಕಾಶ್ಮೀರದ ಶ್ರೀನಗರದ ಲಾಲ್‌ಚೌಕಿಯಲ್ಲಿ ತ್ರಿವರ್ಣ ಧ್ವಜ ಹಾರಿಸಿದ ಹೋರಾಟ, ರಾಮಜನ್ಮಭೂಮಿ ಮುಕ್ತಿಗಾಗಿ ನಡೆದ ಆಂದೋಲನದಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡಿದ್ದ ಹೋರಾಟದ ಗುಣಗಳನ್ನು ಪಕ್ಷ ಗುರುತಿಸಿದೆ ಎಂದು ತಿಳಿಸಿದರು.

ಅಭಿನಂದನೆ ಸ್ವೀಕರಿಸಿ ಮಾತನಾಡಿದ ಜಿ.ಧರ್ಮಪ್ರಸಾದ್, ಸಂಘಟನೆ ಕಾರ್ಯ ನಿರ್ವಹಿಸಲು ಅವಕಾಶ ಸಿಕ್ಕಿದೆ. ನಿಮ್ಮೆಲ್ಲರ ಸಹಕಾರ, ಬೆಂಬಲ, ಆಶೀರ್ವಾದ ಇರಲಿ ಎಂದರು. ಮುಖಂಡರಾದ ಕೆ.ಎಚ್.ತೀರ್ಥಯ್ಯ, ಕೆ.ಎನ್.ಶ್ರೀಹರ್ಷ, ಮೊಸರಳ್ಳಿ ಅಣ್ಣಪ್ಪ, ಚನ್ನೇಶ್, ನಂಜಪ್ಪ, ರಾಜಶೇಖರ್, ಕಾ.ರಾ.ನಾಗರಾಜ್ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net