ಅಧ್ಯಾತ್ಮ ಚಿಂತನೆ ಮೂಡಿಸಿದ ಸಾಂಸ್ಕೃತಿಕ ರಾಯಭಾರಿ ಸತ್ಯನಾರಾಯಣ

2sgr1
ಸಾಗರದಲ್ಲಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಶುಂಠಿ ಸತ್ಯನಾರಾಯಣ ಭಟ್ ಕುರಿತ ನೆನಪಿನ ಬುತ್ತಿ ಸಂಕಲನ ಸಾಮ್ರಾಟ್ ಆತ್ಮಕಥನ ಕೃತಿಯನ್ನು ಅಧ್ಯಾತ್ಮ ಚಿಂತಕಿ ಡಾ. ವೀಣಾ ಬನ್ನಂಜೆ ಬಿಡುಗಡೆಗೊಳಿಸಿದರು. ಎಂ.ಆರ್.ಲಕ್ಷ್ಮೀನಾರಾಯಣ ಅಮಚಿ, ಡಾ. ಜಿ.ಎಸ್.ಭಟ್, ಅಶ್ವಿನಿಕುಮಾರ್ ಇತರರರಿದ್ದರು.
Published on

ಸಾಗರ: ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಮುನ್ನಡೆಸುತ್ತ ಜನರನ್ನು ಅಧ್ಯಾತ್ಮದ ಚಿಂತನೆಗೆ ಒಳಪಡಿಸುತ್ತ ಬಂದವರು ಶುಂಠಿ ಸತ್ಯನಾರಾಯಣ ಭಟ್, ಕ್ರಿಯಾಶೀಲ ವ್ಯಕ್ತಿತ್ವ ಹೊಂದಿದ್ದ ಸಾಂಸ್ಕೃತಿಕ ರಾಯಭಾರಿ ಎಂದು ಅಧ್ಯಾತ್ಮ ಚಿಂತಕಿ ಡಾ. ವೀಣಾ ಬನ್ನಂಜೆ ಹೇಳಿದರು.

ಸಾಗರದ ಶ್ರೀ ಶೃಂಗೇರಿ ಶಂಕರಮಠದಲ್ಲಿ ಅಭಿನಂದನಾ ಬಳಗದಿಂದ ಹಮ್ಮಿಕೊಂಡಿದ್ದ ಸಾಂಸ್ಕೃತಿಕ ರಾಯಭಾರಿ ಶುಂಠಿ ಸತ್ಯನಾರಾಯಣ ಭಟ್ಟರ ಅಭಿನಂದನೆ-ಅಭಿವಂದನೆ ಕಾರ್ಯಕ್ರಮದಲ್ಲಿ ಭಟ್ಟರ ಕುರಿತ ನೆನಪಿನ ಬುತ್ತಿ ಸಂಕಲನ ಸಾಮ್ರಾಟ್ ಆತ್ಮಕಥನ ಕೃತಿ ಬಿಡುಗಡೆ ಮಾಡಿ ಮಾತನಾಡಿದರು.

ಉಪನಿಷತ್, ರಾಮಾಯಣ, ಭಾಗವತ, ಮಹಾಭಾರತ ವಿಷಯಗಳ ಬಗ್ಗೆ ಪ್ರವಚನ, ಉಪನ್ಯಾಸಕ್ಕಾಗಿ ಅನೇಕ ವಿದ್ವಾಂಸರನ್ನು ಸಾಗರಕ್ಕೆ ಕರೆಯಿಸುತ್ತಿದ್ದರು. ಸಂಸ್ಕೃತಿ ಪರಂಪರೆ ಬಿತ್ತನೆಯ ಕೊಂಡಿಯಾಗಿ ಕೆಲಸ ಮಾಡಿದ್ದಾರೆ. ಪರಿಶ್ರಮ ವಹಿಸಿ ಸಾಂಸ್ಕೃತಿಕ ಕಾರ್ಯಕ್ರಮ ನಡೆಸುತ್ತಿದ್ದರು ಎಂದು ತಿಳಿಸಿದರು.

ಶುಂಠಿ ಸತ್ಯನಾರಾಯಣ ಭಟ್ ಅವರದು ಮಾದರಿ ವ್ಯಕ್ತಿತ್ವ. ರಾಜಕೀಯ ಬಿಟ್ಟು ಉಳಿದ ಎಲ್ಲ ಕ್ಷೇತ್ರದಲ್ಲಿ ಕೆಲಸ ಮಾಡಿದ್ದಾರೆ. ಹೆಸರಾಂತ ವಿದ್ವಾಂಸರನ್ನು ಕರೆಯಿಸಿ ಜ್ಞಾನ ಪ್ರಭೆ ಹರಡಿದ್ದಾರೆ. ಅವರ ಮನೆಯಲ್ಲಿ ತಾರತಮ್ಯ ಇಲ್ಲ. ಸರಳ ಸಜ್ಜನಿಕೆ ಇರುವ ವ್ಯಕ್ತಿತ್ವ. ಎಂ.ಆರ್.ಲಕ್ಷ್ಮೀನಾರಾಯಣ ಅಮಚಿ ಯಕ್ಷಗಾನ ಅರ್ಥಧಾರಿ

ನಿವೃತ್ತ ಪ್ರಾಚಾರ್ಯ ಡಾ. ಜಿ.ಎಸ್.ಭಟ್ ಮಾತನಾಡಿ, ಯಕ್ಷಗಾನ ಸಂಘಟನೆ, ನಿರ್ವಣೆಯಲ್ಲಿ ಸತ್ಯನಾರಾಯಣ ಭಟ್ಟರು ಪ್ರಾಥಮಿಕ ಹಂತದಿಂದ ಬೆಳೆದವರು. ಘಟಾನುಘಟಿಗಳನ್ನು ಸೇರಿಸಿ ತಾಳಮದ್ದಲೆ ಮಾಡಿಸಿದ್ದಾರೆ. ಅಮೇತೇಶ್ವರಿ ಮೇಳದ ಕ್ಯಾಂಪ್ ಮ್ಯಾನೇಜರ್ ಆಗಿ ಸವಾಲುಗಳನ್ನು ಎದುರಿಸಿದ್ದಾರೆ. ವ್ಯವಸಾಯಿ ಮೇಳದ ಅಧ್ಯಯನ ಆಗಿದ್ದರೆ ಶುಂಠಿ ಅವರು ಮಾಡಿದ ಕೆಲಸ ಅರ್ಥ ಆಗುತ್ತಿತ್ತು. ಜಾಣ ಕ್ಯಾಂಪ್ ಮ್ಯಾನೇಜರ್ ಆಗಿ ಮೇಳ ಮುನ್ನಡೆಸಿದ್ದರು. ಸಂಕಲನ ಬಚ್ಚಗಾರು ವೇದಿಕೆ ಸ್ಥಾಪಿಸಿ ಸಾಂಸ್ಕೃತಿಕ ಆವರಣ ನಿರ್ಮಾಣ ಮಾಡಿದವರು ಎಂದು ಹೇಳಿದರು.

ಸತ್ಯನಾರಾಯಣ ಭಟ್ ದಂಪತಿಯನ್ನು ಸನ್ಮಾನಿಸಲಾಯಿತು. ಜಾಂಬವತಿ ಕಲ್ಯಾಣ ತಾಳಮದ್ದಳೆ, ವಿದ್ವಾನ್ ದತ್ತಮೂರ್ತಿ ಭಟ್ ನೇತೃತ್ವದ ನಾಟ್ಯಶ್ರೀ ಶಿವಮೊಗ್ಗ ತಂಡದಿಂದ ಶರಸೇತು ಬಂಧ ಯಕ್ಷಗಾನ ಪ್ರದರ್ಶನ ನಡೆಯಿತು. ಶಂಕರ ಮಠದ ಧರ್ಮದರ್ಶಿ ಅಶ್ವಿನಿಕುಮಾರ್, ರವೀಂದ್ರ ಪುಸ್ತಕಾಲಯದ ವೈ.ಎ.ದಂತಿ, ದಿನೇಶಕುಮಾರ್ ಜೋಶಿ, ನಾಗರಾಜ್ ಪೈ, ಜಿ.ಎಸ್.ನಟೇಶ್, ಅಭಿನಂದನಾ ಬಳಗದ ರಘುನಾಥ ಕಲ್ಯಾಣಪುರ, ಶಾಂತಲಾ, ಸವಿತಾ, ಸುರೇಶ್, ಶೀಲಾ ಎಂ.ಎಲ್.ಭಟ್, ಎಸ್.ಆರ್.ಶಾಂತಾರಾಮ್ ಭಟ್, ಮ.ಸ.ನಂಜುಂಡಸ್ವಾಮಿ, ಸರಸ್ವತಿ ನಾಗರಾಜ್, ರವೀಂದ್ರ ಕಟ್ಟಿನಕೆರೆ ಮತ್ತಿತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net