ಚಂದ್ರಗುತ್ತಿ ರೇಣುಕಾಂಬೆ ಕಾಣಿಕೆ ಹಣ ಎಣಿಕೆ

2sor3
ಸೊರಬ ಚಂದ್ರಗುತ್ತಿ ಶ್ರೀ ರೇಣುಕಾಂಬೆ ದೇವಸ್ಥಾನದಲ್ಲಿ ಕಾಣಿಕೆ ಹುಂಡಿ ಹಣದ ಎಣಿಕೆ ಮಾಡುತ್ತಿರುವುದು.
Published on

ಸೊರಬ: ಚಂದ್ರಗುತ್ತಿಯ ಶ್ರೀ ರೇಣುಕಾಂಬೆ ದೇವಸ್ಥಾನದ ಕಾಣಿಕೆ ಹುಂಡಿ ಹಣದ ಎಣಿಕೆ ಕಾರ್ಯವು ದೇವಸ್ಥಾನದ ಆಡಳಿತ ಮಂಡಳಿ ಕಚೇರಿಯಲ್ಲಿ ನಡೆಯಿತು. ದೇವಸ್ಥಾನಕ್ಕೆ ಹುಣ್ಣಿಮೆ ಮತ್ತು ವಿಶೇಷ ದಿನಗಳಲ್ಲಿ ಭಕ್ತರ ಮೂಲಕ ಕಾಣಿಕೆ ಹುಂಡಿಯಲ್ಲಿ ಸಂಗ್ರಹವಾದ ಹಣದ ಎಣಿಕೆಯನ್ನು ತಹಸೀಲ್ದಾರ್ ಮಂಜುಳಾ ಹೆಗಡಾಳ್ ಸಮ್ಮುಖದಲ್ಲಿ ಮಾಡಲಾಯಿತು. ಹುಂಡಿಯಲ್ಲಿ 35,07,240 ರೂ. ಕಾಣಿಕೆ ಸಂಗ್ರಹವಾಗಿತ್ತು.

2024ರ ಅಕ್ಟೋಬರ್‌ನಲ್ಲಿ ಕಾಣಿಕೆ ಹಣ ಎಣಿಸಿದಾಗ 43,15,460 ರೂ. ಸಂಗ್ರಹವಾಗಿತ್ತು. ನವೆಂಬರ್ ತಿಂಗಳಿನಲ್ಲಿ ಕಾಣಿಕೆ ಹುಂಡಿ ನಾಣ್ಯವನ್ನು ಎಣಿಸಿದಾಗ 4,99,108 ರೂ. ಸಂಗ್ರಹವಾಗಿತ್ತು. ಎಣಿಕೆ ಕಾರ್ಯ ನಡೆಯುವ ಕೊಠಡಿ ಸುತ್ತ ಸಿಸಿ ಕ್ಯಾಮರಾ ಅಳವಡಿಸಲಾಗಿತ್ತು. ಪೊಲೀಸ್ ಬಂದೋಬಸ್ತ್ ಮಾಡಲಾಗಿತ್ತು.

ಎಣಿಕೆ ಕಾರ್ಯದಲ್ಲಿ ದೇವಸ್ಥಾನದ ಇಒ ಜಿ.ಕೆ.ಪ್ರಮೀಳಾಕುಮಾರಿ, ಶಿರಸ್ತೇದಾರ್ ಎಸ್.ನಿರ್ಮಲಾ, ನಾಡಕಚೇರಿ ಉಪತಹಸೀಲ್ದಾರ್ ಲಲಿತಾ, ತಾಲೂಕು ಪ್ರಭಾರ ರಾಜಸ್ವ ನಿರೀಕ್ಷಕ ವಿನೋದ್, ಮುಜರಾಯಿ ಇಲಾಖೆ ವಿಷಯ ನಿರ್ವಾಹಕಿ ಎಂ.ಶ್ರುತಿ, ಕೆನರಾ ಬ್ಯಾಂಕ್ ಶಾಖೆ ಸಹಾಯಕ ವ್ಯವಸ್ಥಾಪಕ ಸಂಜಯ್ ಕಾಟೆ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net