ಕಾಡು ರಕ್ಷಿಸುವುದು ನಮ್ಮೆಲ್ಲರ ಕರ್ತವ್ಯ

20 skp 2
ವಿಶ್ವ ಪರಿಸರ ದಿನಾಚರಣೆ ಅಂಗವಾಗಿ ಶಿಕಾರಿಪುರದಲ್ಲಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಎಂಎಡಿಬಿ ಮಾಜಿ ಅಧ್ಯಕ್ಷ ಕೆ.ಎಸ್.ಗುರುಮೂರ್ತಿ ಸಸಿ ನೆಟ್ಟರು. ಸುಧೀರ್ ಮಾರವಳ್ಳಿ, ರವೀಂದ್ರ ನಾಯ್ಕ, ಚನ್ನವೀರಪ್ಪ ಇತರರಿದ್ದರು.
Published on

ಶಿಕಾರಿಪುರ: ಕಾಡುಗಳು ನಾಶವಾಗಿ ಮಲೆನಾಡು ಬಯಲುಸೀಮೆ ಆಗುತ್ತಿದೆ. ಕಾಡುಗಳನ್ನು ರಕ್ಷಿಸುವ ಜತೆಗೆ ಹೊಸದಾಗಿ ಕಾಡುಗಳನ್ನು ಬೆಳೆಸಬೇಕಾದ ಅಗತ್ಯವಿದೆ ಎಂದು ಎಂಎಡಿಬಿ ಮಾಜಿ ಅಧ್ಯಕ್ಷ ಕೆ.ಎಸ್.ಗುರುಮೂರ್ತಿ ಹೇಳಿದರು.

ಪಟ್ಟಣದಲ್ಲಿ ಟಿಎಪಿಸಿಎಂಎಸ್, ಪರಿಸರ ಮತ್ತು ಪ್ರವಾಸೋದ್ಯಮ ಅಭಿವೃದ್ಧಿ ಸಹಕಾರ ಸಂಘ, ಜಾನಪದ ಕಲಾವಿದರ ಸಹಕಾರ ಸಂಘ, ಬಸವೇಶ್ವರ ಸಹಕಾರಿ ಒಕ್ಕೂಟ ಮತ್ತು ಅರಣ್ಯ ಇಲಾಖೆ ಸಹಯೋಗದಲ್ಲಿ ಆಯೋಜಿಸಿದ್ದ ವಿಶ್ವ ಪರಿಸರ ದಿನ, ವನ ಮಹೋತ್ಸವ ಮತ್ತು ಸಸಿ ವಿತರಣೆ ಕಾರ್ಯಕ್ರಮದಲ್ಲಿ ಮಾತನಾಡಿ, ಹಿರಿಯರು ಕಾಡು ಉಳಿಸಿಕೊಂಡು ಕೃಷಿ ಮಾಡುತ್ತಿದ್ದರು. ಇಂದು ಅಭಿವೃದ್ಧಿ ಹೆಸರಿನಲ್ಲಿ ಕಾಡು ನಾಶವಾಗುತ್ತಿದೆ ಎಂದರು.

ಟಿಎಪಿಸಿಎಂಎಸ್ ಅಧ್ಯಕ್ಷ ಸುಧೀರ್ ಮಾರವಳ್ಳಿ ಮಾತನಾಡಿ, ಪರಿಸರ ನಾಶದಿಂದ ಸರಿಯಾದ ಸಮಯಕ್ಕೆ ಮಳೆಯಾಗದೆ ರೈತರಿಗೆ ತೊಂದರೆಯಾಗುತ್ತಿದೆ. ರೈತರು ಹೊಲಗಳ ಬದುಗಳಲ್ಲಿ ಹೆಚ್ಚು ಗಿಡಗಳನ್ನು ನೆಡಬೇಕು ಎಂದರು.

ಎಸಿಎಫ್ ರವೀಂದ್ರ ನಾಯ್ಕ ಮಾತನಾಡಿ, ಪ್ರತಿ ವರ್ಷ ಮುಂಗಾರಿನಲ್ಲಿ ಇಲಾಖೆಯಿಂದ ವೈವಿಧ್ಯ ಬಹೂಪಯೋಗಿ ಗಿಡಗಳನ್ನು ಬೆಳೆಸಲಾಗುತ್ತದೆ. ಸಾರ್ವಜನಿಕರು, ಸ್ವಯಂಸೇವಾ ಸಂಸ್ಥೆಗಳು ಗಿಡ ನೆಡುವ ಕಾರ್ಯಕ್ರಮಗಳನ್ನು ಹೆಚ್ಚು ಆಯೋಜಿಸಬೇಕು. ಇಲಾಖೆ ಔಷಧ ಸಸ್ಯಗಳನ್ನು ನರ್ಸರಿಯಲ್ಲಿ ಬೆಳೆಸುತ್ತಿದೆ. ವಿನಾಶದ ಅಂಚಿಗೆ ತಲುಪಿರುವ ವಿಶೇಷ ಜಾತಿ ಗಿಡಗಳನ್ನು ಉಳಿಸಬೇಕಿದೆ ಎಂದು ಹೇಳಿದರು.

ವಿವಿಧ ಸಂಘಟನೆಗಳಿಗೆ ಸಸಿಗಳನ್ನು ವಿತರಿಸಲಾಯಿತು. ಡಿಸಿಸಿ ಬ್ಯಾಂಕ್ ಮಾಜಿ ಅಧ್ಯಕ್ಷ ಚನ್ನವೀರಪ್ಪ, ನಿರ್ದೇಶಕ ಡಿ.ಎಲ್.ಬಸವರಾಜ್, ಡಾ. ಬಿ.ಡಿ.ಭೂಕಾಂತ್, ಟಿಎಪಿಸಿಎಂಎಸ್ ಉಪಾಧ್ಯಕ್ಷೆ ಪ್ರೇಮಾ, ಪುರಸಭೆ ಸದಸ್ಯೆ ಫೈರೋಜಾ ಬಾನು, ಕೃಷಿ ಸಹಾಯಕ ನಿರ್ದೇಶಕ ಕಿರಣ್‌ಕುಮಾರ್ ಹರ್ತಿ, ಆರ್‌ಎಫ್‌ಒ ರೇವಣಸಿದ್ದಯ್ಯ, ವಲಯ ಅರಣ್ಯಾಧಿಕಾರಿ ಸುನೀತಾ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net