ವಾಲ್ಮೀಕಿ ಸಮಾಜದ ಸಂಘಟನೆಗೆ ಆದ್ಯತೆ

19 skp 1
ಶಿಕಾರಿಪುರದಲ್ಲಿ ವಾಲ್ಮೀಕಿ ಪತ್ತಿನ ಸಹಕಾರ ಸಂಘದ ನೂತನ ಅಧ್ಯಕ್ಷ ಮಾರ್ವಳ್ಳಿ ಉಮೇಶ್ ಅವರನ್ನು ಸನ್ಮಾನಿಸಲಾಯಿತು. ಎಚ್.ಡಿ.ಮಾದೇವಪ್ಪ, ಹನುಮಂತಪ್ಪ, ಸುರೇಶ್, ಕೆ.ಎಸ್.ಹುಚ್ರಾಯಪ್ಪ ಇತರರಿದ್ದರು.
Published on

ಶಿಕಾರಿಪುರ: ವಾಲ್ಮೀಕಿ ಸಮಾಜದ ಅಭಿವೃದ್ಧಿಗೆ ಪೂರಕವಾಗಿ ಸಂಘಟನೆಗೆ ಆದ್ಯತೆ ನೀಡಬೇಕು ಎಂದು ವಾಲ್ಮೀಕಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷ ಮಾರ್ವಳ್ಳಿ ಉಮೇಶ್ ಹೇಳಿದರು.

ವಾಲ್ಮೀಕಿ ಪತ್ತಿನ ಸಹಕಾರ ಸಂಘದ ಕಚೇರಿಯಲ್ಲಿ ಆಯೋಜಿಸಿದ್ದ ಸಭೆಯಲ್ಲಿ ಅಧ್ಯಕ್ಷರಾಗಿ ಅವಿರೋಧ ಆಯ್ಕೆಯಾದ ಬಳಿಕ ಮಾತನಾಡಿ, ಸಮುದಾಯ ಮೊದಲು ಆರ್ಥಿಕ, ಶೈಕ್ಷಣಿಕ, ರಾಜಕೀಯ ಮತ್ತು ಸಾಮಾಜಿಕವಾಗಿ ಬೆಳೆಯುವ ನಿಟ್ಟಿನಲ್ಲಿ ನಾವೆಲ್ಲರೂ ಒಂದಾಗಿ ಪ್ರಯತ್ನಿಸಬೇಕು ಎಂದು ತಿಳಿಸಿದರು.

ವಾಲ್ಮೀಕಿ ಪತ್ತಿನ ಸಹಕಾರ ಸಂಘದ ಸಂಸ್ಥಾಪಕ ಅಧ್ಯಕ್ಷ ಎಚ್.ಟಿ.ಬಳಿಗಾರ್ ಅವರ ನಿಧನದಿಂದ ತೆರವಾಗಿದ್ದ ಅಧ್ಯಕ್ಷ ಸ್ಥಾನಕ್ಕೆ ನಡೆದ ಚುನಾವಣೆಯಲ್ಲಿ ಅವಿರೋಧವಾಗಿ ಆಯ್ಕೆ ಮಾಡಿದ್ದೀರಿ. ನಿಮ್ಮ ನಿರೀಕ್ಷೆಯಂತೆ ಎಲ್ಲರ ಸಹಕಾರ, ಮಾರ್ಗದರ್ಶನ ಪಡೆದು ಸಂಸ್ಥೆ ಬೆಳೆಸಲು ಶ್ರಮಿಸುತ್ತೇನೆ ಎಂದರು.

ಸಂಘದ ಉಪಾಧ್ಯಕ್ಷ ಎಚ್.ಡಿ.ಮಾದೇವಪ್ಪ, ತಾಲೂಕು ವಾಲ್ಮೀಕಿ ಸಮಾಜದ ಅಧ್ಯಕ್ಷ ಹನುಮಂತಪ್ಪ, ಸುರೇಶ್ ಹೂವಿನ ಮಂಡಿ, ಕೆ.ಎಸ್.ಹುಚ್ರಾಯಪ್ಪ, ಸುರೇಶ್, ಜಗದೀಶ್, ಮಮತಾ ಸಾಲಿ, ಅನ್ನಪೂರ್ಣಮ್ಮ, ಕರಿಬಸಪ್ಪ, ಓಂಕಾರಪ್ಪ, ಸಂಘದ ಕಾರ್ಯದರ್ಶಿ ಕಿರೀಟ ರಾಯ್ಕರ್, ಪ್ರವೀಣ್‌ಕುಮಾರ್, ಅರವಿಂದ್ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net