

ಭದ್ರಾವತಿ: ಬೆಂಗಳೂರಿನ ರಾಜರಾಜೇಶ್ವರಿ ವಿದ್ಯಾಲಯದಲ್ಲಿ ಏರ್ಪಡಿಸಿದ್ದ ರಾಜ್ಯಮಟ್ಟದ ಯೋಗಾಸನ ಸ್ಪರ್ಧೆಯಲ್ಲಿ ನಗರದ ವಿವೇಕಾನಂದ ಯೋಗ ಶಿಕ್ಷಣ ಟ್ರಸ್ಟ್‌ನ ಡಿ.ನಾಗರಾಜ್ ಅವರಿಗೆ ಚಿನ್ನದ ಪದಕ ಲಭಿಸಿದೆ.
ಆಚಾರ್ಯ ಯೋಗ ಯೂತ್ ಕ್ಲಬ್‌ನ 12ನೇ ವಾರ್ಷಿಕೋತ್ಸವ ಪ್ರಯುಕ್ತ ಆಯೋಜಿಸಿದ್ದ ಸ್ಪರ್ಧೆಯಲ್ಲಿ 60 ವರ್ಷ ಮೇಲ್ಪಟ್ಟವರ ವಿಭಾಗದಲ್ಲಿ ಚಿನ್ನದ ಪದಕ ಹಾಗೂ ಚಾಂಪಿಯನ್ ಆಫ್ ಚಾಂಪಿಯನ್ ಅವಾರ್ಡ್ ಲಭಿಸಿದೆ.
ಡಿಸ್ಟ್ರಿಕ್ಟ್ ಯೂತ್ ಆಫೀಸರ್ ಎ.ನಾಗರತ್ನಾ ಅವರು ಟ್ರೋಫಿ ಹಾಗೂ ಪ್ರಶಸ್ತಿ ಪತ್ರ ನೀಡಿ ಗೌರವಿಸಿದರು. ಕ್ಲಬ್ ಅಧ್ಯಕ್ಷ ನಾಗೇಂದ್ರಪ್ಪ, ಕಾರ್ಯದರ್ಶಿ ಎಂ.ನಾಗರಾಜ್ ಆಚಾರಿ, ಎಚ್.ಚಂದ್ರು, ಶ್ರೀನಿವಾಸ್ ಇತರರಿದ್ದರು.