ಸರ್ಕಾರಿ ಯೋಜನೆ ಸದ್ಬಳಕೆ ಮಾಡಿಕೊಳ್ಳಿ

25sor1
ಸೊರಬದ ಪುರಸಭೆಯಿಂದ ಫಲಾನುಭವಿಗಳಿಗೆ ಅನಿಲ ಸ್ಟೌ ಮತ್ತು ಸಿಲಿಂಡರ್ ವಿತರಿಸಲಾಯಿತು. ಪ್ರಭು ಮೇಸ್ತ್ರಿ, ಶ್ರೀರಂಜಿನಿ, ಪ್ರೇಮಾ, ಜಯಲಕ್ಷ್ಮೀ, ಚಂದನ್ ಇತರರಿದ್ದರು.
Published on

ಸೊರಬ: ಬಡವರಿಗಾಗಿ ಸರ್ಕಾರ ಜಾರಿಗೊಳಿಸಿರುವ ಯೋಜನೆಗಳನ್ನು ಫಲಾನುಭವಿಗಳು ಸದ್ಬಳಕೆ ಮಾಡಿಕೊಳ್ಳಬೇಕು ಎಂದು ಪುರಸಭೆ ಅಧ್ಯಕ್ಷ ಪ್ರಭು ಮೇಸ್ತ್ರಿ ಹೇಳಿದರು.

ಪಟ್ಟಣದ ಅಂಬೇಡ್ಕರ್ ಭವನದಲ್ಲಿ ಪುರಸಭೆಯಿಂದ ವಿಕಲಚೇತನ ಕಲ್ಯಾಣ ಯೋಜನೆ ಹಾಗೂ ಪರಿಶಿಷ್ಟ ಜಾತಿ ಕಲ್ಯಾಣ ಯೋಜನೆಯಡಿ ಆಯ್ಕೆಯಾದ ಫಲಾನುಭವಿಗಳಿಗೆ ಗ್ಯಾಸ್ ಸ್ಟೌ ಮತ್ತು ಸಿಲಿಂಡರ್ ವಿತರಿಸಿ ಮಾತನಾಡಿ, ಸಮಾಜದಲ್ಲಿ ಆರ್ಥಿಕವಾಗಿ ಹಿಂದುಳಿದವರಿಗೆ ನೀಡುವ ಸವಲತ್ತುಗಳನ್ನು ಫಲಾನುಭವಿಗಳು ಬೇರೆಯವರಿಗೆ ಪರಾಭಾರೆ ಮಾಡದೆ ಕುಟುಂಬ ನಿರ್ವಹಣೆಗೆ ಉಪಯೋಗ ಮಾಡಿಕೊಳ್ಳಬೇಕು. ಯೋಜನೆಗಳ ಲಾಭ ಪಡೆದು ದುರ್ಬಳಕೆ ಕಂಡುಬಂದಲ್ಲಿ ಅಂಥವರ ವಿರುದ್ಧ ಕ್ರಮ ಜರುಗಿಸಲು ಹಿಂಜರಿಯುದಿಲ್ಲ ಎಂದು ತಿಳಿಸಿದರು.

ಮುಖ್ಯಾಧಿಕಾರಿ ಚಂದನ್ ಮಾತನಾಡಿ, ಸರ್ಕಾರ ಬಡವರಿಗೆ ಶೇ.5ರ ಅನುದಾನದಲ್ಲಿ ನೀಡಲ್ಪಡುವ ವಿಶೇಷ ಯೋಜನೆಯಲ್ಲಿ ಮನೆ ಬಳಕೆಗೆ ಅನಿಲ ಸವಲತ್ತುಗಳನ್ನು ಪುರಸಭೆ ವ್ಯಾಪ್ತಿ 42 ಜನ ಬಡವರು ಹಾಗೂ ವಿಕಲಚೇತನರನ್ನು ಗುರುತಿಸಿ ವಿತರಿಸಲಾಗುತ್ತಿದೆ. ಸರ್ಕಾರದ ಯೋಜನೆ ದುರುಪಯೋಗ ಆಗಬಾರದು ಎಂದರು. ಉಪಾಧ್ಯಕ್ಷೆ ಶ್ರೀರಂಜಿನಿ, ಸದಸ್ಯರಾದ ಪ್ರೇಮಾ, ಜಯಲಕ್ಷ್ಮೀ, ನಟರಾಜ ಉಪ್ಪಿನ, ಅನ್ಸರ್ ಅಹ್ಮದ್, ಆಫ್ರೀನಾ ಬಾನು, ಪ್ರಸನ್ನಕುಮಾರ್, ಯೋಜನಾಧಿಕಾರಿ ಶಿವಪ್ಪ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net