ಶ್ರೇಷ್ಠ, ಸಂಸ್ಕಾರದ ಶಿಕ್ಷಣ ಆದ್ಯತೆಯಾಗಲಿ

17 skp 4
ಶಿಕಾರಿಪುರದಲ್ಲಿ ಅಂತಾರಾಷ್ಟ್ರೀಯ ಶೈಕ್ಷಣಿಕ ಸಮ್ಮೇಳನವನ್ನು ಲೋಕಸಭಾ ಸದಸ್ಯ ಬಿ.ವೈ.ರಾಘವೇಂದ್ರ ಉದ್ಘಾಟಿಸಿದರು. ಪ್ರೊ. ಶರತ್ ಅನಂತಮೂರ್ತಿ, ಎಂ.ಬಿ.ಶಿವಕುಮಾರ್, ಡಾ. ಶ್ರೀಕಂಠಸ್ವಾಮಿ ಇತರರಿದ್ದರು.
Published on

ಶಿಕಾರಿಪುರ: ಶಿಕ್ಷಣವು ಉದ್ಯೋಗ ಕಲ್ಪಿಸುವ ಜತೆಯಲ್ಲಿ ಉತ್ತಮ ವ್ಯಕ್ತಿತ್ವ ನಿರ್ಮಾಣಕ್ಕೆ ಪೂರಕವಾಗಿರಬೇಕು. ಶ್ರೇಷ್ಠ ಮತ್ತು ಸಂಸ್ಕಾರಯುತ ಶಿಕ್ಷಣ ನಮ್ಮ ಆದ್ಯತೆಯಾಗಬೇಕು ಎಂದು ಲೋಕಸಭಾ ಸದಸ್ಯ ಬಿ.ವೈ.ರಾಘವೇಂದ್ರ ಹೇಳಿದರು.

ಕುಮದ್ವತಿ ಶಿಕ್ಷಣ ಮಹಾವಿದ್ಯಾಲಯದಲ್ಲಿ ಏರ್ಪಡಿಸಿದ್ದ ಅಂತಾರಾಷ್ಟ್ರೀಯ ಶೈಕ್ಷಣಿಕ ಸಮ್ಮೇಳನ ಉದ್ಘಾಟಿಸಿ ಮಾತನಾಡಿ, ವಿದ್ಯಾರ್ಥಿಗಳು ದೃಢಸಂಕಲ್ಪದೊಂದಿಗೆ ಗುರಿ ಸಾಧನೆ ಮಾಡಬೇಕು. ಕಠಿಣ ಸನ್ನಿವೇಶಗಳನ್ನು ಸಮರ್ಥವಾಗಿ ನಿಭಾಯಿಸುವ ಗುಣಗಳನ್ನು ಬೆಳೆಸಿಕೊಳ್ಳಬೇಕು ಎಂದು ತಿಳಿಸಿದರು.

ಐಐಟಿ, ಇಂಜಿನಿಯರಿಂಗ್, ರಾಷ್ಟ್ರೀಯ ಶಿಕ್ಷಾ, ಸ್ವಯಂ, ದೀಕ್ಷಾ ವಿದ್ಯಾನಿಧಿ ಹೀಗೆ ಶಿಕ್ಷಣದಲ್ಲಿ ಡಿಜಿಟಲೀಕರಣ ಕಾರ್ಯಕ್ರಮಗಳು ಶಿಕ್ಷಣಕ್ಕೆ ಪ್ರವೇಶ ಮಾಡುತ್ತಿವೆ. 21ನೇ ಶತಮಾನದ ಶಿಕ್ಷಣದಲ್ಲಿ ಆಮೂಲಾಗ್ರ ಬದಲಾವಣೆ ಬಯಸುವ ಸಂದರ್ಭದಲ್ಲಿ ನಿರಂತರ ನಡೆಯುತ್ತಿರುವ ಸಂಶೋಧನೆಗಳು ಮತ್ತು ಅವುಗಳಿಂದ ಹೊರಬಂದ ಫಲಿತಾಂಶಗಳನ್ನು ವಿದ್ಯಾರ್ಥಿಗಳು ಪರಿಗಣಿಸಬೇಕು ಎಂದರು.

ಪ್ರಸ್ತುತ ಕೃತಕ ಬುದ್ಧಿಮತ್ತೆ ತಂತ್ರಜ್ಞಾನದಿಂದ ಕೆಲಸಗಳು ಕಡಿಮೆಯಾಗುತ್ತವೆ ಎನ್ನಲಾಗುತ್ತಿದೆ. ಆದರೆ ಯಾವುದೇ ತಂತ್ರಜ್ಞಾನ ಬಂದರೂ ಶಿಕ್ಷಕರ ಹೊರತುಪಡಿಸಿ ಪರ್ಯಾಯ ಆಲೋಚನೆ ಮಾಡಲು ಸಾಧ್ಯವಿಲ್ಲ. ಶಿಕ್ಷಕರು ಸಹಾನುಭೂತಿಯಿಂದ ಉದ್ಯೋಗಿಯಾಗಿ, ವ್ಯಕ್ತಿಯಾಗಿ, ಒಬ್ಬ ಆಪ್ತ ಸಮಾಲೋಚಕರಾಗಿ ಕೆಲಸ ನಿರ್ವಹಿಸಬೇಕು ಎಂದು ತಿಳಿಸಿದರು.

ಜ್ಞಾನ ಮತ್ತು ಅರಿವಿನ ಅನಾವರಣವೇ ಶಿಕ್ಷಣ. ಮಕ್ಕಳಲ್ಲಿರುವ ಸಾಮರ್ಥ್ಯವನ್ನು ಗುರುತಿಸಿ ಪ್ರೋತ್ಸಾಹಿಸುವ ಜಾಣ್ಮೆ ಶಿಕ್ಷಕರಲ್ಲಿರುತ್ತದೆ. ಹೊಸ ಆಲೋಚನೆಗಳೊಂದಿಗೆ ಮಕ್ಕಳಿಗೆ ಮಾರ್ಗದರ್ಶನ ನೀಡಬೇಕು. ಪ್ರೊ. ಶರತ್ ಅನಂತಮೂರ್ತಿ ಕುವೆಂಪು ವಿವಿ ಕುಲಪತಿ

ಸಮ್ಮೇಳನ ಕುರಿತ ಸ್ಮರಣ ಸಂಚಿಕೆ ಬಿಡುಗಡೆ ಮಾಡಲಾಯಿತು. ಸ್ವಾಮಿ ವಿವೇಕಾನಂದ ವಿದ್ಯಾಸಂಸ್ಥೆ ಅಧ್ಯಕ್ಷ ಎಂ.ಬಿ.ಶಿವಕುಮಾರ್, ಡಾ. ಶ್ರೀಕಂಠಸ್ವಾಮಿ, ಪ್ರೊ. ಜಿ.ಆರ್.ಅಂಗಡಿ, ಪ್ರಾಚಾರ್ಯ ಡಾ. ಜಿ.ಎಸ್.ಶಿವಕುಮಾರ್ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net