ಮಕ್ಕಳ ಕಳ್ಳ ಸಾಗಣೆ ಹೆಚ್ಚಳ ಆತಂಕಕಾರಿ

30 HHR P 06
ಹೊಳೆಹೊನ್ನೂರಿನ ಸರ್ಕಾರಿ ಪ್ರಥಮದರ್ಜೆ ಕಾಲೇಜಿನಲ್ಲಿ ಏರ್ಪಡಿಸಿದ್ದ ಮಾನವ ಕಳ್ಳ ಸಾಗಣೆ ತಡೆ ದಿನಾಚರಣೆ ಕಾರ್ಯಕ್ರಮವನ್ನು ಪ್ರಾಚಾರ್ಯೆ ಡಾ. ಕೆ.ಆರ್.ಪ್ರತಿಭಾ ಉದ್ಘಾಟಿಸಿದರು. ರುದ್ರಮುನಿ, ಡಾ. ನಾಗರಾಜ್ ನಾಯಕ್ ಇತರರಿದ್ದರು.
Published on

ಹೊಳೆಹೊನ್ನೂರು: ಇತ್ತೀಚಿನ ದಿನಗಳಲ್ಲಿ ಮಕ್ಕಳ ಕಳ್ಳ ಸಾಗಣೆ ಹೆಚ್ಚಾಗುತ್ತಿರುವುದು ಆತಂಕಕಾರಿ ಬೆಳವಣಿಗೆ ಎಂದು ಸರ್ಕಾರಿ ಪ್ರಥಮದರ್ಜೆ ಕಾಲೇಜಿನ ಪ್ರಾಚಾರ್ಯೆ ಡಾ. ಕೆ.ಆರ್.ಪ್ರತಿಭಾ ಹೇಳಿದರು.

ಸರ್ಕಾರಿ ಪ್ರಥಮದರ್ಜೆ ಕಾಲೇಜಿನಲ್ಲಿ ರಾಜ್ಯಶಾಸ್ತ್ರ ವಿಭಾಗದ ಮಾನವ ಹಕ್ಕುಗಳ ವೇದಿಕೆ ಹಾಗೂ ರಾಷ್ಟ್ರೀಯ ಸೇವಾ ಯೋಜನೆ ಆಶ್ರಯದಲ್ಲಿ ಏರ್ಪಡಿಸಿದ್ದ ಮಾನವ ಕಳ್ಳ ಸಾಗಣೆ ತಡೆ ದಿನಾಚರಣೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ಮಾನವ ಕಳ್ಳ ಸಾಗಣೆ ಪಿಡುಗನ್ನು ತಡೆಯಲು ಸ್ಥಳೀಯ ಮಟ್ಟದಲ್ಲೇ ವ್ಯಾಪಕ ಪ್ರಚಾರ ಮತ್ತು ಅರಿವು ಮೂಡಿಸಬೇಕು ಎಂದು ತಿಳಿಸಿದರು.

ಸಂತ್ರಸ್ತರಿಗೆ ಪುನರ್ವಸತಿ ಕಲ್ಪಿಸುವುದರಲ್ಲಿ ನಾಗರಿಕರ ಹಾಗೂ ಸರ್ಕಾರದ ಜವಾಬ್ದಾರಿ ಇದೆ. ಮಾನವ ಕಳ್ಳ ಸಾಗಣೆಯು ಮಹಿಳೆಯರ ಮತ್ತು ಮಕ್ಕಳ ದೈಹಿಕ ಶೋಷಣೆ, ಬಲವಂತ ದುಡಿಮೆ, ಬಾಲಕಾರ್ಮಿಕ, ಲೈಂಗಿಕ ದೌರ್ಜನ್ಯ, ಬಲವಂತದ ಬಾಲ್ಯವಿವಾಹ, ದತ್ತು ಸ್ವೀಕಾರ, ಅಂಗಾಂಗ ಕಸಿಯುವುದು ಮುಂತಾದ ಸಂಗತಿಗಳಿಗೆ ಕಾರಣವಾಗಿದೆ. ಇದರಿಂದ ಮಾನವ ಹಕ್ಕುಗಳ ಉಲ್ಲಂಘನೆ ಆಗುತ್ತಿದೆ ಎಂದರು. ಉಪನ್ಯಾಸಕ ರುದ್ರಮನಿ, ಡಾ. ನಾಗರಾಜ್ ನಾಯಕ್, ರವಿ, ಆಸ್ಮಾ ಮೇಲಿನಮನಿ, ಸುರೇಶ್ ಸಾಗರ್, ತ್ರಿಶೂಲ್, ವಿಶ್ವನಾಥ್ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net