ಕಣ್ಣಿನ ರಕ್ಷಣೆ ಜಾಗೃತಿ ಹೆಚ್ಚಾಗಲಿ

29hos1p
ಹರಿದ್ರಾವತಿ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಆಯೋಜಿಸಿದ್ದ ಉಚಿತ ನೇತ್ರ ಶಿಬಿರವನ್ನು ಗ್ರಾಪಂ ಅಧ್ಯಕ್ಷ ಕೆ.ಆರ್.ಮಂಜುನಾಥ್ ಉದ್ಘಾಟಿಸಿದರು. ಪೂರ್ಣಿಮಾ, ಡಾ. ಗೌತಮ್, ಡಾ. ಸಮ್ಯಕ್ ಇತರರಿದ್ದರು.
Published on

ಹೊಸನಗರ: ಹಿರಿಯ ನಾಗರಿಕರಲ್ಲಿ ಕಣ್ಣಿನ ರಕ್ಷಣೆ ಕುರಿತು ಜಾಗೃತಿ ಹೆಚ್ಚಾಗಬೇಕು ಎಂದು ಹರಿದ್ರಾವತಿ ಗ್ರಾಪಂ ಅಧ್ಯಕ್ಷ ಕೆ.ಆರ್.ಮಂಜುನಾಥ್ ಹೇಳಿದರು.

ಹರಿದ್ರಾವತಿ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಬಟ್ಟೆಮಲ್ಲಪ್ಪದ ಶ್ರೀ ಬಸವನ ಬ್ಯಾಣದ ಅಯ್ಯಪ್ಪ ಮೆಮೋರಿಯಲ್ ಟ್ರಸ್ಟ್, ಶ್ರೀ ವ್ಯಾಸ ಮಹರ್ಷಿ ಗುರುಕುಲ ಆಶ್ರಯದಲ್ಲಿ ಮಣಿಪಾಲದ ಆಸ್ಪತ್ರೆ ಆಯೋಜಿಸಿದ್ದ ಉಚಿತ ನೇತ್ರ ತಪಾಸಣೆ ಶಿಬಿರ ಉದ್ಘಾಟಿಸಿ ಮಾತನಾಡಿದರು.

ಹಿರಿಯರು ಗೌರವಯುತ ಬದುಕು ಸಾಗಿಸಲು ಕಣ್ಣು ಬಹಳ ಅಗತ್ಯ. ಅವರ ಕನಿಷ್ಠ ಕೆಲಸಗಳನ್ನು ಮಾಡಿಕೊಳ್ಳಲು ಸಾಧ್ಯವಾಗುತ್ತದೆ. ಹಿರಿಯರು ಸ್ವಯಂ ಪ್ರೇರಣೆಯಿಂದ ಮುಂದೆ ಬಂದು ಇಂತಹ ಕಾರ್ಯಕ್ರಮಗಳ ಪ್ರಯೋಜನ ಪಡೆಯಬೇಕು ಎಂದು ತಿಳಿಸಿದರು.

ಸಂಸ್ಥೆ ಅಧ್ಯಕ್ಷ ಮಂಜುನಾಥ್ ಬ್ಯಾಣದ, ವೈದ್ಯಾಧಿಕಾರಿ ಡಾ. ಗೌತಮ್, ಡಾ. ಸಮ್ಯಕ್, ಡಾ. ದೀಕ್ಷಾ, ನೇತ್ರಾಧಿಕಾರಿ ಡಾ. ಕೃಷ್ಣರಾಜ್, ಗ್ರಾಪಂ ಸದಸ್ಯರಾದ ಪೂರ್ಣಿಮಾ ಲಕ್ಷ್ಮಣ್, ಸೀತಾ ಸಂತೋಷ, ಪಿಡಿಒ ರಾಘವೇಂದ್ರ, ಆರೋಗ್ಯಾಧಿಕಾರಿ ಸದಾಶಿವಪ್ಪ, ಪ್ರಭಾಕರ್ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net