ಸದ್ವಿಚಾರಗಳನ್ನು ಜೀವನದಲ್ಲಿ ಅಳವಡಿಸಿಕೊಳ್ಳಿ

26sor2
ಸೊರಬದ ಜಡೆ ಹೋಬಳಿ ಕೆರೆಹಳ್ಳಿ ಗ್ರಾಮದಲ್ಲಿ ಆಯೋಜಿಸಿದ್ದ ನಮ್ಮ ನಡೆ-ಹಳ್ಳಿಗಳ ಕಡೆ ಶ್ರಾವಣ ಸಂಜೆ ಕಾರ್ಯಕ್ರಮವನ್ನು ಶ್ರೀ ಕುಮಾರಕೆಂಪಿನ ಸಿದ್ಧವೃಷಭೇಂದ್ರ ಸ್ವಾಮೀಜಿ ಉದ್ಘಾಟಿಸಿದರು. ಶ್ರೀ ಪ್ರಭುಲಿಂಗ ದೇವರು, ನಾಗರಾಜ ಗೌಡ, ನಿಂಗಪ್ಪ ಗೌಡ ಇತರರಿದ್ದರು.
Published on

ಸೊರಬ: ಅಧ್ಯಾತ್ಮ ಮತ್ತು ಭಕ್ತಿ ಪರಂಪರೆ ಅನುಸರಿಸುವ ಪವಿತ್ರ ದೇಶ ಭಾರತ. ಶ್ರಾವಣ ಮಾಸದಲ್ಲಿ ಶರಣರ ದರ್ಶನ ಮಾಡುವುದರಿಂದ ಪುಣ್ಯ ಪ್ರಾಪ್ತಿಯಾಗುತ್ತದೆ ಎಂದು ಜಡೆ ಸಂಸ್ಥಾನ ಮಠದ ಶ್ರೀ ಕುಮಾರಕೆಂಪಿನ ಸಿದ್ಧವೃಷಭೇಂದ್ರ ಸ್ವಾಮೀಜಿ ಹೇಳಿದರು.

ತಾಲೂಕಿನ ಜಡೆ ಹೋಬಳಿ ಕೆರೆಹಳ್ಳಿ ಗ್ರಾಮದಲ್ಲಿ ಶ್ರಾವಣ ಮಾಸದ ಅಂಗವಾಗಿ ನಮ್ಮ ನಡೆ-ಹಳ್ಳಿಗಳ ಕಡೆ ಶ್ರಾವಣ ಸಂಜೆ ಕಾರ್ಯಕ್ರಮ ಉದ್ಘಾಟಿಸಿ ಆಶೀರ್ವಚನ ನೀಡಿದ ಅವರು, ಮನುಷ್ಯನ ಬದುಕು ಅರ್ಥಪೂರ್ಣವಾಗಲು ಪ್ರವಚನಗಳಲ್ಲಿ ಭಾಗವಹಿಸಬೇಕು. ಶಿವ ಶರಣರ ಸದ್ವಿಚಾರಗಳನ್ನು ಜೀವನದಲ್ಲಿ ಅಳವಡಿಸಿಕೊಳ್ಳಬೇಕು ಎಂದು ತಿಳಿಸಿದರು.

ಉತ್ತಮ ಸಂಸ್ಕಾರಯುತ ವಿಚಾರಗಳನ್ನು ಮನನ ಮಾಡುವುದೇ ಶ್ರಾವಣ ಮಾಸದ ವಿಶೇಷವಾಗಿದೆ. ಆ.30ರವರೆಗೆ ಪ್ರತಿದಿನ ಸಂಜೆ ಶ್ರಾವಣ ಮಾಸದ ಅಂಗವಾಗಿ ನಮ್ಮ ನಡೆ-ಹಳ್ಳಿಗಳ ಕಡೆ ಶ್ರಾವಣ ಸಂಜೆ ಕಾರ್ಯಕ್ರಮ ಹಮ್ಮಿಕೊಳ್ಳಲಾಗುವುದು ಎಂದರು.

ಶ್ರೀ ಪ್ರಭುಲಿಂಗೆ ದೇವರು ಮಾತನಾಡಿ, ಯೋಗ, ಧ್ಯಾನ, ಪ್ರವಚನ ಮತ್ತು ಪ್ರಾರ್ಥನೆ ಬದುಕಿಗೆ ನೈತಿಕ ಮೌಲ್ಯಗಳನ್ನು ತುಂಬುತ್ತವೆ. ಒಳ್ಳೆಯ ಗುಣಗಳನ್ನು ಹೊಂದಿದವರಲ್ಲಿ ದೈವತ್ವ ಕಾಣಬಹುದು. ನೆಮ್ಮದಿಯ ಬದುಕಿಗೆ ಶರಣರ ಸದ್ವಿಚಾರ ಮುಖ್ಯ ಎಂದರು.

ನಾಗರಾಜ ಗೌಡ ಆಲಹಳ್ಳಿ, ನಿಂಗಪ್ಪಗೌಡ ಹೊಸಕೊಪ್ಪ, ವಿಠಲ್ ರಾಯ್, ಮನೋಹರ ಸ್ವಾಮಿ, ವಿಶ್ವನಾಥ ನಾಡಿಗೇರ್, ಷಣ್ಮುಖ ಗೌಡ, ವಿವೇಕ್ ಕಾಮತ್, ಸಚಿನ್ ಕಾಮತ್, ವೀರಭದ್ರಪ್ಪ, ರಂಗಪ್ಪ ಬಡವಲ್ಲಿ ಭಜನಾ ಮಂಡಳಿ ಸದಸ್ಯರು, ಗ್ರಾಮಸ್ಥರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net