ಎಚ್‌ಎಸ್‌ವಿ ಅಗಲಿಕೆ ತುಂಬಲಾರದ ನಷ್ಟ

18hos2p hsv
ಹೊಸನಗರ ಸಮೀಪದ ಕಾರಣಗಿರಿಯಲ್ಲಿಎಚ್‌ಎಸ್‌ವಿ ಗೀತಗಾಯನದಲ್ಲಿ ಭಾಗವಹಿಸಿದ್ದ ಕಲಾವಿದರು.
Published on

ಹೊಸನಗರ: ಕವಿ ಎಚ್.ಎಸ್.ವೆಂಕಟೇಶಮೂರ್ತಿ ಅಗಲಿಕೆ ಕನ್ನಡ ಸಾಹಿತ್ಯ ಲೋಕಕ್ಕೆ ತುಂಬಲಾರದ ನಷ್ಟ ಎಂದು ಹಿರಿಯ ಸಾಹಿತಿ, ಲೇಖಕ ಡಾ. ಶಾಂತಾರಾಮ ಪ್ರಭು ಹೇಳಿದರು.

ಕಾರಣಗಿರಿಯ ಸಿದ್ಧಿವಿನಾಯಕ ಸಭಾಭವನದಲ್ಲಿ ಗ್ರಾಮಭಾರತಿ ಟ್ರಸ್ಟ್, ರಾಷ್ಟ್ರೋತ್ಥಾನ ಬಳಗದಿಂದ ಏರ್ಪಡಿಸಿದ್ದ ಎಚ್.ಎಸ್.ವೆಂಕಟೇಶಮೂರ್ತಿ ಸ್ಮರಣೆಗಾಗಿ ಭಾವನಮನ ಕಾರ್ಯಕ್ರಮದಲ್ಲಿ ಮಾತನಾಡಿ, ಕನ್ನಡ ಸಾಹಿತ್ಯಕ್ಕೆ ಅಪಾರ ಕೊಡುಗೆ ನೀಡಿದ್ದಾರೆ ಎಂದು ತಿಳಿಸಿದರು.

ವಿವಿಧ ಕಲಾವಿದರಿಂದ ಎಚ್‌ಎಸ್‌ವಿ ಅವರು ರಚಿಸಿದ ಹಾಡುಗಳ ಗಾಯನ ಕಾರ್ಯಕ್ರಮ ನಡೆಯಿತು. ಪಕ್ಕ ವಾದ್ಯದಲ್ಲಿ ಸಾಗರದ ಪುಟ್ಟು, ಸುನಿಲ್ ಉಡುಪ ಸಹಕರಿಸಿದರು. ಕನ್ನಡ ಸಾಹಿತ್ಯ ಪರಿಷತ್ ತಾಲೂಕು ಅಧ್ಯಕ್ಷ ಗಣೇಶಮೂರ್ತಿ ನಾಗರಕೋಡಿಗೆ, ರಾಷ್ಟ್ರೋತ್ಥಾನ ಬಳಗದ ತಾಲೂಕು ಅಧ್ಯಕ್ಷ ನಳಿನಚಂದ್ರ, ಗ್ರಾಮಭಾರತಿ ಟ್ರಸ್ಟ್ ತಾಲೂಕು ಅಧ್ಯಕ್ಷ ಹನಿಯ ರವಿ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net