ಸರ್ಕಾರ ಕೆಲಸಗಾರರ ಹಿತ ಕಾಪಾಡಲಿ

1sor3
ಸೊರಬ ತಾಲೂಕಿನ ಯಲಸಿಯ ಯುಬಿಸ್ ಕ್ಯಾನಿಂಗ್ ಪಿವಿಟಿ ಎಲ್‌ಟಿಡಿ ಫ್ಯಾಕ್ಟರಿಯಲ್ಲಿ ಕನ್ನಡ ಸಾಹಿತ್ಯ ಸಾಂಸ್ಕೃತಿಕ ವೇದಿಕೆಯಿಂದ ಹಮ್ಮಿಕೊಂಡಿದ್ದ ಕಾರ್ಮಿಕರ ದಿನಾಚರಣೆಯಲ್ಲಿ ಕಾರ್ಮಿಕರನ್ನು ಸನ್ಮಾನಿಸಲಾಯಿತು. ಡಿ.ಎಸ್.ಶಂಕರ್ ಶೇಟ್, ಪ್ರಭು ಮೇಸ್ತ್ರಿ, ವಿಕ್ರಮ್ ಮೇಸ್ತ್ರಿ ಇತರರಿದ್ದರು.
Published on

ಸೊರಬ: ರಾಷ್ಟ್ರದ ಅಭಿವೃದ್ಧಿಯಲ್ಲಿ ಕಾರ್ಮಿಕರ ಪಾತ್ರ ಮಹತ್ತರವಾಗಿದ್ದು, ಕೈಗಾರಿಕೆ ಮತ್ತು ಮಾಲೀಕರು ಪ್ರಗತಿ ಹೊಂದಲು ಕಾರಣರಾಗುವ ಕಾರ್ಮಿಕರಿಗೆ ಹೆಚ್ಚಿನ ಸೌಲಭ್ಯಗಳನ್ನು ಒದಗಿಸುವ ಅಗತ್ಯವಿದೆ ಎಂದು ಕನ್ನಡ ಸಾಹಿತ್ಯ ಸಾಂಸ್ಕೃತಿಕ ವೇದಿಕೆ ಅಧ್ಯಕ್ಷ ಡಿ.ಎಸ್.ಶಂಕರ್ ಶೇಟ್ ಹೇಳಿದರು.

ತಾಲೂಕಿನ ಯಲಸಿಯ ಯುಬಿಸ್ ಕ್ಯಾನಿಂಗ್ ಪಿವಿಟಿ ಎಲ್‌ಟಿಡಿ ಫ್ಯಾಕ್ಟರಿಯಲ್ಲಿ ಕನ್ನಡ ಸಾಹಿತ್ಯ ಸಾಂಸ್ಕೃತಿಕ ವೇದಿಕೆಯಿಂದ ಹಮ್ಮಿಕೊಂಡಿದ್ದ ಕಾರ್ಮಿಕರ ದಿನಾಚರಣೆ ಮತ್ತು ಕಾರ್ಮಿಕರಿಗೆ ಸನ್ಮಾನ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ಕಾರ್ಮಿಕರ ಹಿತ ಕಾಪಾಡಲು ಸರ್ಕಾರಗಳು ಮುಂದಾಗಬೇಕು ಎಂದು ತಿಳಿಸಿದರು.

ಪುರಸಭೆ ಅಧ್ಯಕ್ಷ ಪ್ರಭು ಮೇಸ್ತ್ರಿ ಮಾತನಾಡಿ, ಕಾರ್ಮಿಕರು ದೇಶದ ನಿಜವಾದ ಶ್ರಮಿಕರಾಗಿದ್ದು, ಅವರನ್ನು ಗೌರವಿಸಬೇಕು ಎಂದರು. ತಾಲೂಕು ಕಟ್ಟಡ ಕಾರ್ಮಿಕರ ಸಂಘದ ಅಸಂಘಟಿತ ಕಾರ್ಮಿಕರ ಒಕ್ಕೂಟದ ಅಧ್ಯಕ್ಷ ವಿಕ್ರಮ್ ಮೇಸ್ತ್ರಿ ಮಾತನಾಡಿ, ಕಾರ್ಮಿಕರು ಕೆಲಸ ಮಾಡುವ ಸಂದರ್ಭದಲ್ಲಿ ಜಾಗರೂಕತೆ ವಹಿಸಬೇಕು ಎಂದರು.

ಕಾರ್ಮಿಕರಾದ ಶಾರದಾ, ಮಂಜುಳಾ, ಅನೂಸೂಯಾ, ಪೀಟರ್, ಅಮೀದಾ ಅವರನ್ನು ಸನ್ಮಾನಿಸಲಾಯಿತು. ಅಸಂಘಟಿತ ಕಾರ್ಮಿಕರ ಒಕ್ಕೂಟದ ಇರ್ಫಾನ್, ಇಫ್ತಿಕಾರ್, ಪ್ರಮೀಳಾ, ಸಮೀರ್ ಅಹಮದ್, ಶಿಕ್ಷಕ ರಾಘವೇಂದ್ರ ಹಾಗೂ ಕಾರ್ಮಿಕರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net