

ಭದ್ರಾವತಿ: ಜಾನಪದ ಕಲೆಗಳು ಕನ್ನಡ ನಾಡಿನ ಶ್ರೀಮಂತ ಕಲೆಯಾಗಿದೆ. ಇದನ್ನು ಉಳಿಸಿ ಬೆಳೆಸುವ ಜವಾಬ್ದಾರಿ ನಮ್ಮ ಮೇಲಿದೆ ಎಂದು ಭೂಮಿಕಾ ವೇದಿಕೆ ಅಧ್ಯಕ್ಷ ಡಾ. ಕೃಷ್ಣ ಎಸ್. ಭಟ್ ಹೇಳಿದರು.
ನಗರದಲ್ಲಿ ಭೂಮಿಕಾ ವೇದಿಕೆ ಆಯೋಜಿಸಿದ್ದ ಚೌಡಿಕೆ ಗೊಂದಲಿಗರ ಪದ ಜಾನಪದ ವೈಭವ ಕಾರ್ಯಕ್ರಮದಲ್ಲಿ ಮಾತನಾಡಿ, ಕನ್ನಡ ನಾಡಿನ ಸಂಸ್ಕೃತಿ ಬಿಂಬಿಸುವ ಜಾನಪದ ಕಲೆಗಳು ನಶಿಸಿ ಹೋಗುತ್ತಿವೆ. ಕಲೆಗಳಿಗೆ ಪ್ರೋತ್ಸಾಹ ಸಿಗದಂತಾಗಿದೆ. ಯುವಪೀಳಿಗೆಗೆ ಜಾನಪದ ಕಲೆಗಳನ್ನು ಪರಿಚಯಿಸುವ ಕೆಲಸ ಆಗಬೇಕಿದೆ ಎಂದು ತಿಳಿಸಿದರು.
ಲಕ್ಷ್ಮಣ್‌ರಾವ್ ಬೋರತ್ ಅವರ ತಂಡ ಪ್ರಸ್ತುತಪಡಿಸಿದ ಚೌಡಿಕೆ ಪದಗಳು ಎಲ್ಲರ ಮೆಚ್ಚುಗೆ ಗಳಿಸಿದವು. ವೇದಿಕೆ ಪ್ರಧಾನ ಕಾರ್ಯದರ್ಶಿ ಅಪರಂಜಿ ಶಿವರಾಜ್, ಕೋಶಾಧ್ಯಕ್ಷ ಮುನಿರಾಜ್, ರೂಪಾ ರಾವ್, ಪುಷ್ಪಾ, ಶೋಭಾ ಇತರರಿದ್ದರು.