ಸರ್ಕಾರಿ ಶಾಲೆಗಳಿಗೆ ದಾನಿಗಳು ನೆರವಾಗಲಿ

26HHR4
ಹೊಳೆಹೊನ್ನೂರು ಸಮೀಪದ ಮಾರಶೆಟ್ಟೆಹಳ್ಳಿ ಗ್ರಾಮದ ಶ್ರೀ ಮಂಜುನಾಥ ಪ್ರಾಥಮಿಕ ಶಾಲೆ ಮಕ್ಕಳಿಗೆ ಶಾಸಕಿ ಶಾರದಾ ಪೂರ‌್ಯಾನಾಯ್ಕ ಅವರು ಸ್ವೆಟರ್ ವಿತರಿಸಿದರು. ನಾಗರಾಜ, ಓಂಕಾರಮೂರ್ತಿ, ರಾಮೋಜಿ ಇತರರಿದ್ದರು.
Published on

ಹೊಳೆಹೊನ್ನೂರು: ಸರ್ಕಾರಿ ಶಾಲೆಗಳ ಉಳಿಸಿ ಬೆಳೆಸುವಲ್ಲಿ ಪಾಲಕರು ಮತ್ತು ಸಾರ್ವಜನಿಕರ ಸಹಕಾರ, ಸಹಭಾಗಿತ್ವ ಅಗತ್ಯವಿದೆ ಎಂದು ಶಾಸಕಿ ಶಾರದಾ ಪೂರ‌್ಯಾನಾಯ್ಕಾ ಹೇಳಿದರು.

ಪಟ್ಟಣ ಸಮೀಪದ ಕಲ್ಲಿಹಾಳ್ ಸರ್ಕಾರಿ ಪ್ರೌಢಶಾಲೆ ಹಾಗೂ ಮಾರಶೆಟ್ಟೆಹಳ್ಳಿ ಗ್ರಾಮದ ಶ್ರೀ ಮಂಜುನಾಥ ಪ್ರಾಥಮಿಕ ಶಾಲೆಯಲ್ಲಿ ಏರ್ಪಡಿಸಿದ್ದ ಕಾರ್ಯಕ್ರಮದಲ್ಲಿ ಮಕ್ಕಳಿಗೆ ತಟ್ಟೆ ಮತ್ತು ಸ್ವೆಟರ್ ವಿತರಿಸಿ ಮಾತನಾಡಿ, ಗ್ರಾಮೀಣ ಪ್ರದೇಶದಲ್ಲಿರುವ ಅನೇಕ ಶಾಲೆ ಮಕ್ಕಳಿಗೆ ಮೂಲಸೌಕರ್ಯ ಅಗತ್ಯವಾಗಿರುತ್ತದೆ. ಅದನ್ನು ಪೂರೈಸಲು ಕೆಲ ಪಾಲಕರಿಗೆ ಸಾಧ್ಯವಾಗದೆ ಇರಬಹುದು. ದಾನಿಗಳು ಮಕ್ಕಳ ಶಿಕ್ಷಣಕ್ಕೆ ನೆರವು ನೀಡಬೇಕು ಎಂದು ತಿಳಿಸಿದರು.

ಗೌರಿಬಿದನೂರು ನಾಗರಾಜ ಅವರು 1 ರಿಂದ 7ನೇ ತರಗತಿವರೆಗೆ ಮಕ್ಕಳಿಗೆ ಸ್ವೆಟರ್ ಕೊಡುಗೆ ನೀಡಿದರು. ಸ್ಥಳೀಯ ಮುಖಂಡರಾದ ಎಂ.ಸಿ.ಓಂಕಾರಮೂರ್ತಿ, ರಾಮೋಜಿ, ಮೂರ್ತಣ್ಣ, ಚಂದ್ರಪ್ಪ, ಅಶೋಕರಾವ್, ಗೋರ್ಪಡೆ ರಾಮಚಂದ್ರರಾವ್, ನಾಗರಾಜ್ ರಾವ್, ಪದ್ಮನಾಭ ಶೆಣೈ, ಸಿಬ್ಬಂದಿ ಹಾಗೂ ವಿದ್ಯಾರ್ಥಿಗಳು ಹಾಜರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net