ಸಾಮಾಜಿಕ ನ್ಯಾಯ ಪ್ರತಿಪಾದಿಸುವ ಸಂವಿಧಾನ

17sgr2
ಸಾಗರದಲ್ಲಿ ಏರ್ಪಡಿಸಿದ್ದ ಕಾರ್ಯಕ್ರಮದಲ್ಲಿ ಹರ್ಷಕುಮಾರ್ ಕುಗ್ವೆ ಅವರ ನಮ್ಮ ಸಂವಿಧಾನ ಪುಸ್ತಕವನ್ನು ಮಾಜಿ ಸಚಿವ ಕಾಗೋಡು ತಿಮ್ಮಪ್ಪ ಬಿಡುಗಡೆಗೊಳಿಸಿದರು. ಕಲಸೆ ಚಂದ್ರಪ್ಪ, ಎಂ.ರಾಘವೇಂದ್ರ ಇತರರಿದ್ದರು.
Published on

ಸಾಗರ: ಭಾರತೀಯ ಸಂವಿಧಾನ ಅತ್ಯಂತ ಶ್ರೇಷ್ಠವಾಗಿದೆ. ಪ್ರತಿಯೊಬ್ಬರೂ ಅದನ್ನು ಓದಿ ಅರ್ಥೈಸಿಕೊಳ್ಳಬೇಕು ಎಂದು ಮಾಜಿ ಸಚಿವ ಕಾಗೋಡು ತಿಮ್ಮಪ್ಪ ಹೇಳಿದರು.

ನಗರಸಭೆ ರಂಗಮಂದಿರದಲ್ಲಿ ಪರಸ್ಪರ ಸಾಹಿತ್ಯ ವೇದಿಕೆ, ತಾಲೂಕು ವಿದ್ಯಾರ್ಥಿ ವೇದಿಕೆ, ಸಮಾಜ ಕಲ್ಯಾಣ ಇಲಾಖೆಯಿಂದ ಏರ್ಪಡಿಸಿದ್ದ ಸಂವಿಧಾನ ಓದು ಅಭಿಯಾನ ಉದ್ಘಾಟನೆ ಮತ್ತು ಹರ್ಷಕುಮಾರ್ ಕುಗ್ವೆ ಬರೆದಿರುವ ನಮ್ಮ ಸಂವಿಧಾನ ಪುಸ್ತಕ ಬಿಡುಗಡೆ ಮಾಡಿ ಮಾತನಾಡಿದರು.

ಸಂವಿಧಾನದ ಆಶಯಕ್ಕೆ ತಕ್ಕಂತೆ ನಾವು ನಡೆದುಕೊಳ್ಳಬೇಕು. ಭಾರತೀಯ ಸಂವಿಧಾನ ಇತರ ದೇಶಗಳ ಸಂವಿಧಾನಕ್ಕಿಂತ ಅತ್ಯಂತ ಉತ್ತಮವಾಗಿ ರಚಿಸಲ್ಪಟ್ಟಿದೆ. ಡಾ. ಬಿ.ಆರ್.ಅಂಬೇಡ್ಕರ್ ಸಂವಿಧಾನ ರಚಿಸಿರುವ ಸಂವಿಧಾನ ಸಾಮಾಜಿಕ ನ್ಯಾಯ ಪ್ರತಿಪಾದಿಸುವ ನಿಟ್ಟಿನಲ್ಲಿ ಗಮನಾರ್ಹ ಎಂದು ತಿಳಿಸಿದರು.

ಲೇಖಕ ಹರ್ಷಕುಮಾರ್ ಕುಗ್ವೆ ಮಾತನಾಡಿ, ಡಾ. ಅಂಬೇಡ್ಕರ್ ರಚಿಸಿರುವ ಸಂವಿಧಾನದಿಂದ ಎಲ್ಲ ವರ್ಗಗಳಿಗೂ ಸಾಮಾಜಿಕ ನ್ಯಾಯ ದೊರೆತಿದೆ. ಸಂವಿಧಾನ ನೀಡಿದ ಶಕ್ತಿಯಿಂದ ನಾವೆಲ್ಲ ಧೈರ್ಯವಾಗಿ ಬರೆಯಬಹುದು. ನಾವು ಯಾವುದೇ ಸ್ಥಾನಕ್ಕೆ ಹೋಗಲು ಸಾಧ್ಯ ಇದೆ ಎಂದರು.

ಚಂದ್ರಪ್ಪ ಕಲಸೆ, ಕೆ.ಸಿ.ಸತ್ಯನಾರಾಯಣ, ಪರಮೇಶ್ವರ ದೂಗೂರು, ಪತ್ರಕರ್ತ ಎಂ.ರಾಘವೇಂದ್ರ, ಮೋಹನ್‌ಮೂರ್ತಿ, ಸುರೇಶ್ ಸಹಾನೆ, ಟಾಕಪ್ಪ, ಜ್ಯೋತಿ ಕುಗ್ವೆ, ಡಾ. ಸರ್ಫ್ರಾಜ್ ಚಂದ್ರಗುತ್ತಿ, ಶಿವಾನಂದ ಕುಗ್ವೆ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net