

ಸೊರಬ: ಮಳೆಗಾಲ ಆರಂಭವಾಗುವ ಮುನ್ನ ವಿವಿಧ ಕಾಮಗಾರಿ ಪೂರ್ಣಗೊಳಿಸುವಂತೆ ಸಚಿವ ಮಧು ಬಂಗಾರಪ್ಪ ಸೂಚಿಸಿದರು.
ಪ್ರಗತಿಯಲ್ಲಿರುವ ಸೊರಬ-ಶಿರಾಳಕೊಪ್ಪ ರಸ್ತೆ ಕಾಮಗಾರಿಯನ್ನು ವೀಕ್ಷಿಸಿ ಮಾತನಾಡಿ, ಕಾಮಗಾರಿಗಳಿಗೆ ಅನುದಾನದ ಕೊರತೆ ಇಲ್ಲ. ರಸ್ತೆ ಕಾಮಗಾರಿಗಳು ಶಾಶ್ವತವಾಗಿ ಬಳಕೆಯಾಗುವಂತೆ ಅವುಗಳ ನಿರ್ಮಾಣ ಹೆಚ್ಚು ಗುಣಮಟ್ಟದಿಂದ ಇರಬೇಕು ಎಂದರು.
ಪ್ರತಿ ನಿತ್ಯ ಸಾವಿರಾರು ವಾಹನಗಳು ರಸ್ತೆಯಲ್ಲಿ ಓಡಾಡುವುದರಿಂದ ಗುಣಮಟ್ಟದ ರಸ್ತೆ ಅಗತ್ಯ. ಗುತ್ತಿಗೆದಾರರು ಮಳೆಗಾಲ ಆರಂಭವಾಗುವ ಮುನ್ನವೇ ಕಾಮಗಾರಿ ಪೂರ್ಣಗೊಳಿಸಬೇಕು. ಅಡ್ಡಿಯಾಗುವ ರಸ್ತೆ ಅಂಚಿನಲ್ಲಿರುವ ಮರಗಳು ಮತ್ತು ವಿದ್ಯುತ್ ಕಂಬಗಳನ್ನು ತೆರವು ಮಾಡಲು ಅರಣ್ಯ ಹಾಗೂ ವಿದ್ಯುತ್ ಇಲಾಖೆ ಅಧಿಕಾರಿಗಳ ಜತೆ ಚರ್ಚಿಸಲಾಗುವುದು ಎಂದರು.
ಪಿಡಬ್ಲುೃಡಿ ಇಂಜಿನಿಯರ್ ಶಿವಕುಮಾರ್, ಮನೋಜ್, ಮುಖಂಡರಾದ ಗಣಪತಿ, ಎಂ.ಡಿ.ಶೇಖರ್, ನೆಹರು, ಬಸವರಾಜ್, ಹೂವಪ್ಪ, ಬಂಗಾರಪ್ಪ, ಅಬ್ದುಲ್ ರಶೀದ್, ಶಿವಪ್ಪ, ಶ್ರೀಧರ್, ಗುತ್ತಿಗೆದಾರ ಹನುಮಂತಪ್ಪ ಇತರರಿದ್ದರು.