

ರಿಪ್ಪನ್‌ಪೇಟೆ: ಮಲೆನಾಡಿನ ರೈತರು ಅಡಕೆ ತೋಟದಲ್ಲಿ ಬಹುಬೆಳೆ ಅಥವಾ ಮಿಶ್ರಬೆಳೆಯಿಂದ ಹೆಚ್ಚಿನ ಲಾಭ ಗಳಿಸಲು ಸಾಧ್ಯ ಎಂದು ಕೃಷಿ ಮತ್ತು ತೋಟಗಾರಿಕಾ ವಿಶ್ವವಿದ್ಯಾಲಯದ ವಿಜ್ಞಾನಿ ಡಾ. ರವಿಕುಮಾರ್ ಹೇಳಿದರು.
ಗ್ರಾಪಂ ಸಭಾಂಗಣದಲ್ಲಿ ಕೃಷಿ ಮತ್ತು ತೋಟಗಾರಿಕೆ ವಿವಿ, ಕೃಷಿ ಇಲಾಖೆಯಿಂದ ಆಯೋಜಿಸಿದ್ದ ವಿಕಸಿತ ಕೃಷಿ ಅಭಿಯಾನ ಕಾರ್ಯಕ್ರಮದಲ್ಲಿ ಮಾತನಾಡಿ, ಅಡಕೆಯೊಂದಿಗೆ ಒಂದೇ ಬೆಳೆಯನ್ನು ಮಿಶ್ರವಾಗಿ ಬೆಳೆದು ನೈಸರ್ಗಿಕ ಸಂಪನ್ಮೂಲಗಳ ಸಮರ್ಪಕ ಬಳಕೆ ಸಾಧ್ಯ ಇಲ್ಲದಿರುವುದರಿಂದ ಅಡಕೆ ಜತೆ ಒಂದಕ್ಕಿಂತ ಹೆಚ್ಚು ಬೆಳೆ ಬೆಳೆಯುವ ಪದ್ಧತಿ ರೂಢಿಗೆ ಬಂದಿದೆ. ಅಡಕೆ ಜತೆಯಲ್ಲಿ ಬಾಳೆ, ಕಾಳುಮೆಣಸು, ಜಾಯಿಕಾಯಿ ಹೀಗೆ ವಿವಿಧ ಬೆಳೆಗಳನ್ನು ಒಟ್ಟಿಗೆ ಬೆಳೆದಾಗ ಆದಾಯ ದುಪ್ಪಟ್ಟಾಗಲಿದೆ ಎಂದರು.
ಗ್ರಾಪಂ ಅಧ್ಯಕ್ಷೆ ಧನಲಕ್ಷ್ಮೀ, ಉಪಾಧ್ಯಕ್ಷ ಸುಧೀಂದ್ರ ಪೂಜಾರಿ, ತಾಲೂಕು ಕೃಷಿ ಸಮಾಜದ ಎ.ವಿ.ಮಲ್ಲಿಕಾರ್ಜುನ, ರೋಗ ಶಾಸ್ತ್ರದ ವಿಜ್ಞಾನಿ ಡಾ. ನರಸಿಂಹಮೂರ್ತಿ, ಮಣ್ಣು ವಿಜ್ಞಾನಿ ಡಾ. ಅಂಜಲಿ, ಕೃಷಿ ವಿಸ್ತರಣಾ ವಿಜ್ಞಾನಿ ಡಾ. ಬಿ.ಮಂಜುನಾಥ, ತಾಲೂಕು ಕೃಷಿ ಸಹಾಯಕ ನಿರ್ದೇಶಕ ಸಚಿನ್ ಹೆಗಡೆ, ಕೃಷಿ ಅಧಿಕಾರಿ ಸುಶಾಂತ್, ತೋಟಗಾರಿಕ ಅಧಿಕಾರಿ ಕರಿಬಸಪ್ಪ ಇತರರಿದ್ದರು.