ಬಿ.ಎಸ್.ಯಡಿಯೂರಪ್ಪ ಉತ್ತಮ ಆಡಳಿತಗಾರ

27 TTH 02
ಮಾಜಿ ಸಿಎಂ ಬಿಎಸ್‌ವೈ ಜನ್ಮದಿನದ ಅಂಗವಾಗಿ ಬಿಜೆಪಿ ಮಂಡಲದಿಂದ ತೀರ್ಥಹಳ್ಳಿಯ ಜೆಸಿ ಆಸ್ಪತ್ರೆ ಒಳರೋಗಿಗಳಿಗೆ ಹಣ್ಣು-ಬ್ರೆಡ್ ವಿತರಿಸಲಾಯಿತು. ಆರಗ ಜ್ಞಾನೇಂದ್ರ, ನವೀನ್, ಪ್ರಶಾಂತ್, ನಂದನ್ ಇತರರಿದ್ದರು.
Published on

ತೀರ್ಥಹಳ್ಳಿ: ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರು ರಾಜ್ಯ ಕಂಡ ಅತ್ಯಂತ ಅಪರೂಪದ ಮತ್ತು ದಕ್ಷ ರಾಜಕಾರಣಿ ಎಂದು ಶಾಸಕ ಆರಗ ಜ್ಞಾನೇಂದ್ರ ಹೇಳಿದರು.

ಬಿ.ಎಸ್.ಯಡಿಯೂರಪ್ಪ ಜನ್ಮದಿನದ ಅಂಗವಾಗಿ ಬಿಜೆಪಿ ತಾಲೂಕು ಮಂಡಲದಿಂದ ಜೆಸಿ ಆಸ್ಪತ್ರೆ ಒಳರೋಗಿಗಳಿಗೆ ಹಣ್ಣು-ಬ್ರೆಡ್ ವಿತರಿಸಿ ಮಾತನಾಡಿ, ಬಿಎಸ್‌ವೈ ಅವರ ಉತ್ತಮ ಆಡಳಿತದಿಂದ ಸಮಾಜದ ಎಲ್ಲ ವರ್ಗದ ಜನರ ಬದುಕಿಗೆ ಸರ್ಕಾರದ ನೆರವು ತಲುಪಿದೆ ಎಂದು ತಿಳಿಸಿದರು.

ಮಂಡಲ ಅಧ್ಯಕ್ಷ ಹೆದ್ದೂರು ನವೀನ್,ಪ್ರಶಾಂತ್ ಕುಕ್ಕೆ, ಹಸಿರುಮನೆ ನಂದನ್, ಸಂತೋಷ್ ದೇವಾಡಿಗ, ರಕ್ಷಿತ್ ಮೇಗರವಳ್ಳಿ, ಪ್ರಮೋದ್, ನಿಖಿಲ್ ಕಾಮತ್ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net