

ರಿಪ್ಪನ್‌ಪೇಟೆ: ಹೊಲದಲ್ಲಿ ಬೆಳೆದ ಸಮೃದ್ಧ ಭತ್ತದ ಬೆಳೆ ಭೂತಾಯಿ ವರಪ್ರಸಾದ ಎಂದು ಹೊಂಬುಜ ಜೈನಮಠದ ಸ್ವಸ್ತಿಶ್ರೀ ದೇವೇಂದ್ರಕೀರ್ತಿ ಭಟ್ಟಾರಕ ಸ್ವಾಮೀಜಿ ಹೇಳಿದರು.
ಸಮೀಪದ ಹೊಂಬುಜ ಜೈನಮಠದಲ್ಲಿ ಶ್ರೀ ಮಹಾವೀರ ಶಕವರ್ಷ 2552 ವಿಶ್ವಾವಸು ಸಂವತ್ಸರ ಪ್ರಯುಕ್ತ ಕ್ಷೇತ್ರದ ಕೃಷಿ ಭೂಮಿಯಲ್ಲಿ ಶಾಸೋಕ್ತವಾಗಿ ಪೂರ್ವಪರಂಪರೆಯಂತೆ ಹೊಸ ಭತ್ತದ ಪೈರು ಕಟಾವು ನೆರವೇರಿಸಿ ಶ್ರೀ ಪದ್ಮಾವತಿ ದೇವಿ ಸನ್ನಿಧಿಗೆ ಸಮರ್ಪಿಸಿ ಆಶೀರ್ವಚನ ನೀಡಿದ ಅವರು, ಭತ್ತ ಆಹಾರದ್ರವ್ಯವಾಗಿ ಬಳಸುವುದರಿಂದ ಅನ್ನಪ್ರಸಾದ ರೂಪವಾಗಿ ಶರೀರ ಪೋಷಣೆ ಆಗುತ್ತದೆ. ಭಕ್ತರಿಗೆ ನಿರಂತರ ಅನ್ನಪ್ರಸಾದ ಲಭಿಸುತ್ತಿದೆ. ಕೃಷಿ ಚಟುವಟಿಕೆಯಲ್ಲಿ ಭಾಗಿಯಾದವರಿಗೆ ಮಹಾಮಾತೆ ಇಷ್ಟಾರ್ಥ ಸತ್ಫಲ ನೀಡಲಿ ಎಂದು ಆಶಿಸಿದರು.