ಕುಕ್ಕೆ ಕ್ಷೇತ್ರಕ್ಕೆ ಶಿರೂರು ಶ್ರೀ ಪುರಪ್ರವೇಶ : ದೇವಳದ ವತಿಯಿಂದ ಸ್ವಾಗತ : ಭವ್ಯ ಮೆರವಣಿಗೆ

New Project (17)
Published on

ಸುಬ್ರಹ್ಮಣ್ಯ: ಉಡುಪಿ ಶಿರೂರು ಮಠದ ಶ್ರೀ ವೇದವರ್ಧನ ತೀರ್ಥ ಸ್ವಾಮೀಜಿಯವರು ಪರ್ಯಾಯ ಪೂರ್ವಭಾವಿಯಾಗಿ ಮಂಗಳವಾರ ಕುಕ್ಕೆ ಸುಬ್ರಹ್ಮಣ್ಯ ಕ್ಷೇತ್ರಕ್ಕೆ ಪುರ ಪ್ರವೇಶಿಸಿದರು.

ಕಾಶಿಕಟ್ಟೆಗೆ ಆಗಮಿಸಿದ ಅವರನ್ನು ದೇವಳದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಹರೀಶ್ ಎಸ್.ಇಂಜಾಡಿ ಸ್ವಾಗತಿಸಿದರು. ಬಳಿಕ ಶ್ರೀಗಳು ಕಾಶಿಕಟ್ಟೆ ಮಹಾಗಣಪತಿ ದರ್ಶನ ಮಾಡಿ ಪ್ರಸಾದ ಸ್ವೀಕರಿಸಿದರು.

ಕಾಶಿಕಟ್ಟೆಯಿಂದ ದೇವಳದ ಆನೆ ಯಶಸ್ವಿ, ಮಂಗಳವಾದ್ಯ, ಪೂರ್ಣಕುಂಭ, ಋತ್ವಿಜರ ಮಂತ್ರಘೋಷದೊಂದಿಗೆ ಕುಕ್ಕೆ ದೇವಸ್ಥಾನಕ್ಕೆ ಶ್ರೀಗಳನ್ನು ಕರೆದೊಯ್ಯಲಾಯಿತು. ದೇವರ ದರ್ಶನ ಮಾಡಿದ ಶ್ರೀಗಳಿಗೆ ಅರ್ಚಕರು ಮಹಾಪ್ರಸಾದ ನೀಡಿದರು. ಶ್ರೀಗಳು ಲ ಮಂತ್ರಾಕ್ಷತೆ ನೀಡಿ ಹರಸಿದರು. ಸಹಾಯಕ ಕಾರ್ಯನಿರ್ವಹಣಾಧಿಕಾರಿ ಯೇಸುರಾಜ್, ಕ್ಷೇತ್ರ ಪುರೋಹಿತ ಮಧುಸೂದನ ಕಲ್ಲೂರಾಯ, ಪುರೋಹಿತ ಕುಮಾರ ಬೈಪಡಿತ್ತಾಯ, ವ್ಯವಸ್ಥಾಪನಾ ಸಮಿತಿ ಸದಸ್ಯ ಅಶೋಕ್ ನೆಕ್ರಾಜೆ, ಮಾಸ್ಟರ್ ಪ್ಲಾನ್ ಸಮಿತಿ ಸದಸ್ಯ ಲೋಲಾಕ್ಷ ಕೈಕಂಬ ಮತ್ತಿತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net