ಶಿವಮೊಗ್ಗದಲ್ಲಿ ಸಾವಿನ ಮನೆಯ ಕದ ತಟ್ಟಿದ ಖಾಸಗಿ ಆಸ್ಪತ್ರೆ ವೈದ್ಯ! ಕಾರಣ?

dr lolith
Published on

ಶಿವಮೊಗ್ಗ: ನಗರ ಖಾಸಗಿ ಆಸ್ಪತ್ರೆಯ ವೈದ್ಯರೊಬ್ಬರು ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡ ಘಟನೆ ಸಂಭವಿಸಿದೆ.

ಡಾ. ಬಿ.ಲೋಲಿತ್ ಮೃತ ದುರ್ದೈವಿ. ಗೋಪಾಳದಲ್ಲಿರುವ ತಮ್ಮ ನಿವಾಸ ಬುಧವಾರ ರಾತ್ರಿ ಮಲಗಿದ್ದರು. ಗುರುವಾರ ಬೆಳಗ್ಗೆ ಲೋಲಿತ್ ನೇಣುಬಿಗಿದ ಸ್ಥಿತಿಯಲ್ಲಿ ಗೆ ಶರಣಾಗಿದ್ದಾರೆ.

ಕಳೆದ ವರ್ಷ ಡಾ.ಲೋಲಿತ್​ಗೆ ಮದುವೆ ಆಗಿತ್ತು. ಆತ್ಮಹತ್ಯೆಗೆ ನಿಖರ ಕಾರಣ ತಿಳಿದುಬಂದಿಲ್ಲ. ಖಾಸಗಿ ಆಸ್ಪತ್ರೆಯಲ್ಲಿ‌ ಮಕ್ಕಳ ತಜ್ಞರಾಗಿ ಕೆಲಸ ಮಾಡುತ್ತಿದ್ದರು. ತುಂಗಾನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net