ಫೋನ್​​ನಲ್ಲಿ ಕೇಳಿಬರುವ ಕರೊನಾ ಕಾಲರ್​ ಟ್ಯೂನ್​ಗೆ ಕನ್ನಡದಲ್ಲಿ ಧ್ವನಿ ಕೊಟ್ಟವರು ಇವರೇ ನೋಡಿ...

Lady
Published on

ಮಂಗಳೂರು: ಕರೊನಾ ಮಹಾಮಾರಿ ದಾಂಗುಡಿ ಇಟ್ಟ ಮೇಲೆ ಅದರಷ್ಟೇ ಸುದ್ದಿಯಾಗಿದ್ದು, ಮೊಬೈಲ್​, ಫೋನ್​ಗಳಲ್ಲಿ ಬರುತ್ತಿದ್ದ ಕರೊನಾ ಕಾಲರ್​ ಟ್ಯೂನ್​.

ಯಾರಿಗಾದರೂ ಫೋನ್​ ಮಾಡಿದರೆ, ಅವರ ಫೋನ್​ ರಿಂಗಾಗಲು ಈ ಕಾಲರ್​ ಟ್ಯೂನ್​ ಮುಗಿಯವ ತನಕ ಕಾಯಲೇಬೇಕಿತ್ತು. ಪ್ರತಿಸಲ ಫೋನ್​ ಮಾಡಿದಾಗಲೂ ಇದನ್ನು ಕೇಳಿಕೇಳಿ ಅನೇಕ ಜನ ಬೇಸತ್ತು ಹೋಗಿದ್ದೂ ಉಂಟು.

ಹಾಗೇ, ಕರೊನಾ ಕಾಲರ್​ ಟ್ಯೂನ್​​ನಲ್ಲಿ ಕನ್ನಡದಲ್ಲಿ ಮೂಡಿಬರುತ್ತಿದ್ದ ಧ್ವನಿ ಯಾರದ್ದಿರಬಹುದು ಎಂಬ ಕುತೂಹಲವೂ ಅದೆಷ್ಟೋ ಜನರಲ್ಲಿ ಹುಟ್ಟಿರಬಹುದು. ಅದಕ್ಕೆ ಉತ್ತರ ಈಗ ಸಿಕ್ಕಿದೆ...

ಕಾಲರ್​ ಟ್ಯೂನ್​ಗೆ ಕನ್ನಡದ ಧ್ವನಿ ಕೊಟ್ಟಿದ್ದು ಮಂಗಳೂರಿನ ಬಹುಮುಖ ಪ್ರತಿಭೆ ಡಾರೆಲ್​ ಜೆಸಿಕಾ ಫರ್ನಾಂಡೀಸ್​ ಎಂಬುವರು. ಪ್ರಸ್ತುತ ದೆಹಲಿಯಲ್ಲಿ ಶಿಕ್ಷಕಿಯಾಗಿದ್ದಾರೆ. ಇವರು ಮಂಗಳೂರಿನ ಪಡೀಲ್​ ನಿವಾಸಿಯಾಗಿರುವ ದಿ ವೆಲೆರಿಯನ್​ ಫರ್ನಾಂಡೀಸ್​ ಮತ್ತು ಲವಿನಾ ಫರ್ನಾಂಡೀಸ್ ಅವರ ಪುತ್ರಿ.

ಜಗತ್ತಿಗೇ ಬಾಧಿಸಿದ ಕರೊನಾ ವೈರಸ್ ಬಗ್ಗೆ ಅರಿವು ಮೂಡಿಸುವಲ್ಲಿ ಕರಾವಳಿಯ ಯುವತಿಯ ಪಾತ್ರವೂ ಇದೆ ಎನ್ನುವುದು ವಿಶೇಷ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net