ಶೇವಿಂಗ್​, ಕಟಿಂಗ್​... ಈ ಎಮ್ಮೆಗೆ ಮಾಡುವ ಆರೈಕೆ ನೋಡಿದ್ರೆ ಅಬ್ಬಬ್ಬಾ! ಇಲ್ಲಿದೆ ವೈರಲ್ ವಿಡಿಯೋ.. ​| Buffalo

dk - 2025-07-11T085810.790
Published on

Buffalo: 'ಗಿಲ್ ಮುರ್ರಾ ಫಾರ್ಮ್' ಎಂಬ ಇನ್‌ಸ್ಟಾಗ್ರಾಮ್ ಖಾತೆಯಲ್ಲಿ ಎಮ್ಮೆಗಳಿಗೆ ಸಂಬಂಧಿಸಿದ ಹಲವು ಆಸಕ್ತಿದಾಯಕ ವೀಡಿಯೊಗಳನ್ನು ಪೋಸ್ಟ್ ಮಾಡಲಾಗಿದೆ. ಕೆಲವು ದಿನಗಳ ಹಿಂದೆ, ಎಮ್ಮೆಯನ್ನು ಅಲಂಕರಿಸುವ ಮತ್ತು ಅಂದಗೊಳಿಸುವ ವೀಡಿಯೊವನ್ನು ಹಂಚಿಕೊಳ್ಳಕೊಂಡಿದ್ದು, ಇದೀಗ ಈ ವಿಡಿಯೋ ಭಾರೀ ವೈರಲ್​ ಆಗಿದೆ.

ಹೌದು, ಹಸು, ಎಮ್ಮೆ ಸೇರಿದಂತೆ ಸಾಕುಪ್ರಾಣಿಗಳನ್ನು ಪ್ರೀತಿಸುವರು ಅವುಗಳ ಆರೈಕೆ ತಮಗಿಂತ ಅದ್ಭುತವಾಗಿ ನೋಡಿಕೊಳ್ಳತ್ತಾರೆ. ಅಲ್ಲದೆ, ಅದನ್ನು ಮಾರುಕಟ್ಟೆಗೆ ತಂದು ಮಾರೊಲೋ ಅಥಾವ ಪ್ರದರ್ಶಿಸಲು ಮುಂದಾಗುತ್ತಾರೆ. ಇದೀಗ ಅಂಥದ್ದೇ ಗಿಲ್ ಮುರ್ರಾ ಫಾರ್ಮ್ ತಳಿಯ ಎಮ್ಮೆಗೆ ಶೆವಿಂಗ್​, ಕಟ್ಟಿಂಗ್​ ಮಾಡುವ ವಿಡಿಯೋ ನೋಡಿದ್ರೆ ಅಚ್ಚರಿಪಡ್ತಿರಾ!

ವೈರಲ್​ ವಿಡಿಯೋದಲ್ಲೇನಿದೆ?

ಮೊದಲನೆಯದಾಗಿ, ಎಮ್ಮೆಯ ಮುಖದ ಕೂದಲನ್ನು ಬ್ಲೇಡ್‌ನಿಂದ ಸ್ವಚ್ಛಗೊಳಿಸಲಾಗುತ್ತಿರುವುದು ವಿಡಿಯೋದಲ್ಲಿ ಕಾಣಬಹುದು. ಬಳಿಕ ಅದರ ದೇಹದ ಮೇಲೆ ಸೋಪ್ ಹಚ್ಚುವ ಮೂಲಕ ಕೂದಲನ್ನು ತೆಗೆಯಲಾಗುತ್ತಿದೆ. ಕೂದಲಿಗೆ ವಿಶೇಷ ವಿನ್ಯಾಸವನ್ನು ನೀಡಲಾಗುತ್ತಿದೆ. ಇದು ಇಲ್ಲಿಗೆ ನಿಲ್ಲಲಿಲ್ಲ, ಅವರು ಅದರ ಕೊಂಬನ್ನು ಉಜ್ಜಿ ನಯವಾಗಿಸಿದರು, ನಂತರ ಕಲರ್​ ಸಿಂಪಡಿಸಿತ್ತಾರೆ. ಅದರ ದೇಹವನ್ನು ವಿವಿಧ ಬಣ್ಣಗಳಲ್ಲಿ ಚಿತ್ರಿಸಿರುವುದನ್ನು ಸಹ ಕಾಣಬಹುದು. ವೀಡಿಯೊದ ಕೊನೆಯಲ್ಲಿ, ಎಮ್ಮೆ ಮನುಷ್ಯನಿಗೆ ಹೋಲಿಸಿದರೆ ತುಂಬಾ ಸುಂದರವಾಗಿ ಮತ್ತು ಬುದ್ಧಿವಂತವಾಗಿ ಕಾಣುತ್ತದೆ!

ಇನ್ನು ಈ ವಿಡಿಯೋ ಇದುವರೆಗೂ 1 ಕೋಟಿಗೂ ಹೆಚ್ಚು ಜನರು ವೀಕ್ಷಿಸಿದ್ದಾರೆ. ಈ ವಿಡಿಯೋಗೆ ಅನೇಕ ಜನರು ಕಾಮೆಂಟ್ ಮಾಡುವ ಮೂಲಕ ತಮ್ಮ ಪ್ರತಿಕ್ರಿಯೆಗಳನ್ನು ಹಂಚಿಕೊಂಡಿದ್ದಾರೆ.(ಏಜೆನ್ಸೀಸ್​​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net