ಶೌರ್ಯ ವಿಪತ್ತು ಘಟಕದಿಂದ ಶ್ರಮದಾನ

New Project (9)
Published on

ಬಂಟ್ವಾಳ: ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಶೌರ್ಯ ವಿಪತ್ತು ನಿರ್ವಹಣಾ ಘಟಕ ಕಾಡಬೆಟ್ಟು ವತಿಯಿಂದ ಕಾಡಬೆಟ್ಟು ದ್ವಾರದಿಂದ ವಗ್ಗ ಜಂಕ್ಷನ್‌ವರೆಗೆ ರಸ್ತೆಯ ಇಕ್ಕೆಲಗಳಲ್ಲಿ ಬೆಳೆದ ಹುಲ್ಲು ಗಿಡಗಂಟಿಗಳನ್ನು ಕಡಿದು ಇತ್ತೀಚೆಗೆ ಸ್ವಚ್ಛಗೊಳಿಸಲಾಯಿತು.

ಬಂಟ್ವಾಳ ತಾಲೂಕು ಶೌರ್ಯ ವಿಪತ್ತು ನಿರ್ವಹಣಾ ಘಟಕದ ಕ್ಯಾಪ್ಟನ್ ಪ್ರಕಾಶ್ ಭೇಟಿ ನೀಡಿ ಪ್ರೋತ್ಸಾಹಿಸಿದರು. ಶೌರ್ಯ ಘಟಕ ಸಂಯೋಜಕಿ ರೇಖಾ ಪಿ, ಘಟಕ ಪ್ರತಿನಿಧಿ ಪ್ರವೀಣ್, ಸದಸ್ಯರಾದ ಸಂಪತ್ ಶೆಟ್ಟಿ, ಮಹಾಬಲ ರೈ, ಅಶೋಕ ಬೊಲ್ಮರ್, ರೋಹಿತ್, ಜನಾರ್ದನ, ಅಶೋಕ್, ಪವಿತ್ರ, ನಾರಾಯಣ ಶೆಟ್ಟಿ, ವಿನೋದಾ, ಶಶಿಕಲಾ, ಆನಂದ, ಪ್ರಮೀಳಾ, ರಮೇಶ್ ಮೊದಲಾದವರು ಭಾಗವಹಿಸಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net