ಬಿಡುಗಡೆಗೆ ವಾರವಿರುವಾಗಲೇ ಶಶಿಕಲಾ ಆರೋಗ್ಯದಲ್ಲಿ ಏರುಪೇರು!

shashikla heakth
Published on

ಬೆಂಗಳೂರು: ಜನವರಿ 27ರಂದು ಬೆಂಗಳೂರಿನ ಪರಪ್ಪನ ಅಗ್ರಹಾರದಿಂದ ಬಿಡುಗಡೆಯಾಗಲಿರುವ ಶಶಿಕಲಾ ಆರೋಗ್ಯದಲ್ಲಿ ಮಂಗಳವಾರ ರಾತ್ರಿ ಏರುಪೇರು ಉಂಟಾಗಿದೆ. ಉಸಿರಾಟದ ತೊಂದರೆ ಕಾಣಿಸಿಕೊಂಡಿದ್ದು, ಬುಧವಾರ ಬೆಳಗ್ಗೆಯೇ ವಿಶೇಷ ವೈದ್ಯರ ತಂಡ ಜೈಲಿಗೆ ತೆರಳಿದ್ದು ಚಿಕಿತ್ಸೆ ನೀಡಲಾಗುತ್ತಿದೆ.

ಶಶಿಕಲಾಗೆ ಉಸಿರಾಟದಲ್ಲಿ ತೊಂದರೆ ಉಂಟಾಗಿರುವುದಾಗಿ ತಿಳಿಸಲಾಗಿದೆ. ವೈದ್ಯೆ ಉಮಾ ಒಳಗೊಂಡಿರುವ ನಾಲ್ಕು ಜನರ ವೈದ್ಯರ ತಂಡ ಶಶಿಕಲಾಗೆ ಚಿಕಿತ್ಸೆ ನೀಡಲು ಪರಪ್ಪನ ಅಗ್ರಹಾರಕ್ಕೆ ತೆರಳಿದೆ. ತೀವ್ರ ಉಸಿರಾಟದ ತೊಂದರೆ ಆಗಿರುವುದರಿಂದ ಬೇರೆ ಆಸ್ಪತ್ರೆಗೆ ಶಿಫ್ಟ್ ಮಾಡುವ ಸಾಧ್ಯತೆಯಿದೆ ಎನ್ನಲಾಗಿದೆ. ಈ ಕುರಿತು ಜೈಲಿನ ಅಧಿಕಾರಿಗಳ ಸಭೆ ನಡೆಸಿದ್ದು, ಸಭೆಯ ನಂತರ ತೀರ್ಮಾನ ತೆಗೆದುಕೊಳ್ಳುವುದಾಗಿ ತಿಳಿಸಲಾಗಿದೆ.

ತಮಿಳುನಾಡು ಮಾಜಿ ಸಿಎಂ ದಿ ಜಯಲಲಿತಾ ಅಪ್ತೆ ಶಶಿಕಲಾ ಕಳೆದ ನಾಲ್ಕು ವರ್ಷದಿಂದ ಜೈಲು ವಾಸ ಅನುಭವಿಸುತ್ತಿದ್ದಾರೆ. ಅಕ್ರಮ ಆಸ್ತಿಗಳಿಕೆ ಪ್ರಕರಣದಲ್ಲಿ ಶಿಕ್ಷೆಗೆ ಗುರಿಯಗಿರುವ ಶಶಿಕಲಾ ಅವರು ಜನವರಿ 27ರಂದು ಬಿಡುಗಡೆಯಾಗಲಿದ್ದಾರೆ ಎಂದು ಪರಪ್ಪನ ಅಗ್ರಹಾರದ ಅಧಿಕಾರಿಗಳು ದೃಢಪಡಿಸಿದ್ದಾರೆ. ಸಿನಿಮಾ ಸ್ಟೈಲ್​ನಲ್ಲಿ ಚಿನ್ನಮ್ಮ ಸ್ವಾಗತಕ್ಕೆ ಅಭಿಮಾನಿಗಳು ಸಜ್ಜಾಗಿದ್ದಾರೆ. ಪರಪ್ಪನ ಅಗ್ರಹಾರದಿಂದ ಮೆರವಣಿಗೆಯಲ್ಲಿ ಕರೆದೊಯ್ಯುಲು ಸಿದ್ಧತೆ ನಡೆಸಿದ್ದರು. ಐದು ಸಾವಿರ ಕಾರುಗಳ ಮೆರವಣಿಗೆಯಲ್ಲಿ ಕರೆದೊಯ್ಯಲು ಫ್ಲಾನ್ ಮಾಡಲಾಗಿತ್ತು. ಆದರೆ ಭದ್ರತೆಯ ಕಾರಣದಿಂದಾಗಿ ಯಾವುದೇ ಮೆರವಣಿಗೆ ಅವಕಾಶ ನೀಡಿಲ್ಲ. ಪರಪ್ಪನ ಅಗ್ರಹಾರದಿಂದ ಅತ್ತಿಬೆಲೆ ಗಡಿ ವರೆಗೂ ಅವಕಾಶ ನೀಡದಿರಲು ಕರ್ನಾಟಕ ಪೊಲೀಸರು ತೀರ್ಮಾನ ತೆಗೆದುಕೊಂಡಿದ್ದಾರೆ. (ದಿಗ್ವಿಜಯ ನ್ಯೂಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net