More

  ಕೇರಳ ರಾಜ್ಯಪಾಲರ ವಾಹನದ ಮೇಲೆ ದಾಳಿ: ಕಮ್ಯುನಿಸ್ಟ್ ಆಡಳಿತದ ವಿರುದ್ಧ ಶಶಿ ತರೂರ್ ವಾಗ್ದಾಳಿ -‘ಇಂಡಿಯಾ’ದಲ್ಲಿ ಮತ್ತೆ ಒಡಕು..

  ನವದೆಹಲಿ: ಕೇರಳ ರಾಜ್ಯಪಾಲ ಆರಿಫ್ ಮೊಹಮ್ಮದ್ ಖಾನ್ ಅವರ ವಾಹನದ ಮೇಲೆ ದಾಳಿ ನಡೆಸಿದ ಸಿಪಿಎಂ ವಿದ್ಯಾರ್ಥಿ ಘಟಕದ ಬಗ್ಗೆ ಕಾಂಗ್ರೆಸ್ ನಾಯಕ ಶಶಿ ತರೂರ್ ಕಿಡಿ ಕಾರಿದ್ದು, ಕಮ್ಯುನಿಸ್ಟ್ ಆಡಳಿತದದಲ್ಲಿ ಪೊಲೀಸರು “ಅರಾಜಕತೆಯ ಏಜೆಂಟ್‌ಗಳಾಗಿದ್ದಾರೆ” ಎಂದು ಟೀಕಿಸಿದರು.

  ಇದನ್ನೂ ಓದಿ: ಗಣರಾಜ್ಯೋತ್ಸವ ಅತಿಥಿಯಾಗಿ ಜೋ ಬಿಡನ್​ಗೆ ಆಹ್ವಾನ: ಭಾಗವಹಿಸುವರೇ ದೊಡ್ಡಣ್ಣ?
  ಈ ಕುರಿತು ಮಂಗಳವಾರ ‘X'(ಎಕ್ಸ್‌)ನಲ್ಲಿ ಟ್ವೀಟ್​ ಮಾಡಿರುವ ಅವರು, ಇದು ಆಡಳಿತ ಪಕ್ಷದ “ಕೆಟ್ಟ ಮತ್ತು ಮಿತಿಮೀರಿದ” ವರ್ತನೆಯಾಗಿದೆ. ಇದರಲ್ಲಿ ಮುಖ್ಯಮಂತ್ರಿ ಭಾಗಿಯಾಗಿದ್ದಾರೆ ಎಂದು ಹೇಳಿದ್ದಾರೆ. ರಾಜ್ಯಪಾಲ ಆರಿಫ್ ಮೊಹದ್ ಖಾನ್ ಅವರ ಕಾರನ್ನು ಎಸ್‌ಎಫ್‌ಐ ಗೂಂಡಾಗಳು ತಡೆದು ಅದರ ಮೇಲೆ ದಾಳಿ ಮಾಡಿರುವುದು ನಾಚಿಕೆ ಗೇಡಿನ ಕೆಲಸವಾಗಿದೆ. ಇದು ಅವಮಾನಕರ ವರ್ತನೆ. ರಾಜ್ಯಪಾಲರ ಕೋಪವು ಸಂಪೂರ್ಣವಾಗಿ ಅರ್ಥವಾಗುವಂತಹದ್ದಾಗಿದೆ ಎಂದು ತರೂರ್ ತಿಳಿಸಿದ್ದಾರೆ.

  “ಕಮ್ಯುನಿಸ್ಟ್ ಆಡಳಿತದಲ್ಲಿ ಪೊಲೀಸರು ಕಾನೂನುಬಾಹಿರತೆಯ ಏಜೆಂಟ್ ಆಗಿದ್ದಾರೆ, ಆಡಳಿತ ಪಕ್ಷದ ಕೆಟ್ಟ ಮಿತಿಮೀರಿದ ವರ್ತನೆಯಲ್ಲಿ ಅವರು ಭಾಗಿದಾರರಾಗಿದ್ದಾರೆ ಎಂದು ಅವರು ತಿಳಿಸಿದ್ದಾರೆ.

  ಸೋಮವಾರ ಸಿಪಿಎಂನ ವಿದ್ಯಾರ್ಥಿ ಘಟಕವಾಗಿರುವ ಭಾರತೀಯ ವಿದ್ಯಾರ್ಥಿ ಫೆಡರೇಶನ್ (ಎಸ್‌ಎಫ್‌ಐ) ಕಾರ್ಯಕರ್ತರು ನವದೆಹಲಿಗೆ ತೆರಳಲು ರಾಜ್ಯಪಾಲರು ತಿರುವನಂತಪುರಂ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ತೆರಳುತ್ತಿದ್ದಾಗ ರಾಜ್ಯಪಾಲರ ವಾಹನದ ಮೇಲೆ ದಾಳಿ ನಡೆಸಿದ್ದಾರೆ ಎಂದು ಆರೋಪಿಸಲಾಗಿದೆ.

  ಘಟನೆಯ ಬಳಿಕ ಕೆರಳಿದ ರಾಜ್ಯಪಾಲ ಖಾನ್ ಅವರು ಕೇರಳ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದರು. ಕೇರಳ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಅವರು ನನ್ನ ಮೇಲೆ ಹಲ್ಲೆಗೆ ಗೂಂಡಾಗಳನ್ನು ಕಳುಹಿಸಿದ್ದಾರೆ ಎಂದು ಆರೋಪಿಸಿದ್ದರು.

  ಕಾಂಗ್ರೆಸ್ ಮತ್ತು ಸಿಪಿಎಂ ‘ಇಂಡಿಯಾ’ ಒಕ್ಕೂಟದ ಭಾಗವಾಗಿದ್ದರೂ ಕಾಂಗ್ರೆಸ್ ಪ್ರಧಾನ ವಿರೋಧ ಪಕ್ಷವಾಗಿದ್ದು ಕೇರಳದಲ್ಲಿ ಕಮ್ಯೂನಿಸ್ಟರ ವಿರೋಧಿಗಳಾಗಿದ್ದಾರೆ. ಮಧ್ಯಪ್ರದೇಶ, ರಾಜಸ್ಥಾನ ಮತ್ತು ಛತ್ತೀಸ್‌ಗಢದಲ್ಲಿ ಕಾಂಗ್ರೆಸ್‌ನ ಸೋಲಿನ ನಂತರ ಮುಖ್ಯಮಂತ್ರಿ ವಿಜಯನ್ ಕಾಂಗ್ರೆಸ್​ನ್ನು ಟೀಕಿಸಿದ್ದಾರೆ. “ದುರಾಸೆ ಮತ್ತು ಅಧಿಕಾರದ ಲಾಲಸೆಯಿಂದ” ಪಕ್ಷವು ಸೋತಿದೆ ಎಂದು ಹೇಳಿದ್ದರು. ಇದೆಲ್ಲ ಬೆಳವಣಿಗೆಗಳು ‘ಇಂಡಿಯಾ’ದಲ್ಲಿ ಬಿರುಕು ಸೃಷ್ಟಿಯಾಗಿರುವುದಕ್ಕೆ ನಿದರ್ಶನವಾಗಿವೆ.

  ‘ನನ್ನ ಮೇಲೆ ದೈಹಿಕ ಹಲ್ಲೆಗೆ ಮುಖ್ಯಮಂತ್ರಿ ಪಿಣರಾಯಿ ಸಂಚು’: ಕೇರಳ ರಾಜ್ಯಪಾಲರ ಗಂಭೀರ ಆರೋಪ

  ಸಿನಿಮಾ

  ಲೈಫ್‌ಸ್ಟೈಲ್

  ಟೆಕ್ನಾಲಜಿ

  Latest Posts