More

    ಹೊಸಬರ ಹೊಸ ಪ್ರೇಮಕಥೆ; ಶಶಾಂಕ್ ಹೊಸ ಚಿತ್ರ ಲವ್ 360

    ಬೆಂಗಳೂರು: ಹೊಸ ಹುಡುಗ ಪ್ರವೀಣ್ ಅಭಿನಯದಲ್ಲಿ ಚಿತ್ರವೊಂದನ್ನು ನಿರ್ದೇಶಿಸುತ್ತಿರುವುದಾಗಿ ಶಶಾಂಕ್, ಏಪ್ರಿಲ್​ನಲ್ಲೇ ಹೇಳಿಕೊಂಡಿದ್ದರು. ಬಹುಶಃ ಲಾಕ್​ಡೌನ್ ಇಲ್ಲದಿದ್ದರೆ ಇಷ್ಟರಲ್ಲಿ ಚಿತ್ರೀಕರಣವೇ ಮುಗಿದಿರುತ್ತಿತ್ತೇನೋ? ಆದರೆ, ಲಾಕ್​ಡೌನ್​ನಿಂದ ಚಿತ್ರೀಕರಣ ಆಗಸ್ಟ್​ಗೆ ಹೋಗಿದ್ದು, ಅದಕ್ಕೂ ಮುನ್ನ ಶುಕ್ರವಾರ ಬೆಳಗ್ಗೆ ಚಿತ್ರದ ಶೀರ್ಷಿಕೆ ಬಿಡುಗಡೆಯಾಗಿದೆ. ಶಶಾಂಕ್ ತಮ್ಮ ಹೊಸ ಚಿತ್ರಕ್ಕೆ ‘ಲವ್ 360’ ಎಂಬ ಹೆಸರನ್ನು ಇಟ್ಟಿದ್ದಾರೆ. ಚಿತ್ರ ಕನ್ನಡ ಮತ್ತು ತೆಲುಗಿನಲ್ಲಿ ಬಿಡುಗಡೆ ಯಾಗುತ್ತಿದ್ದು, ಎರಡೂ ಭಾಷೆಗಳಿಗೆ ಸಲ್ಲುವಂತೆ ‘ಲವ್ 360’ ಎಂಬ ಹೆಸರನ್ನು ಇಡಲಾಗಿದೆ.

    ಈ ಕುರಿತು ‘ವಿಜಯವಾಣಿ’ ಜತೆಗೆ ಮಾತನಾಡಿದ ಅವರು, ‘ನಾಯಕ, ನಾಯಕಿಯನ್ನು ಎಷ್ಟು ಪ್ರೀತಿಸುತ್ತಾನೆ ಎಂದು ಹೇಳುವುದಕ್ಕೆ ಈ ಹೆಸರು ಇಡಲಾಗಿದೆ. ಈ ಚಿತ್ರದ ಮೂಲಕ ಹೊಸಪೇಟೆಯ ಪ್ರವೀಣ್ ಎಂಬ ಹೊಸ ಹುಡುಗನನ್ನು ಚಿತ್ರರಂಗಕ್ಕೆ ಪರಿಚಯಿಸುತ್ತಿದ್ದೇನೆ. ಎಂಬಿಬಿಎಸ್ ಮಾಡಿರುವ ಪ್ರವೀಣ್​ಗೆ ನಟನೆಯ ಬಗ್ಗೆ ಆಸಕ್ತಿ’ ಎನ್ನುತ್ತಾರೆ. ಪ್ರವೀಣ್ ಎದುರು ಹೊಸ ನಾಯಕಿಯ ಹುಡುಕಾಟ ನಡೆದಿದೆಯಂತೆ. ಸದ್ಯದಲ್ಲೇ ನಾಯಕಿಯನ್ನು ಆಯ್ಕೆ ಮಾಡಿ, ನಾಯಕ-ನಾಯಕಿಗೆ ಸ್ಕ್ರಿಪ್ಟ್ ರಿಹರ್ಸಲ್ ಮುಗಿಸಿ, ಆಗಸ್ಟ್​ನಿಂದ ಚಿತ್ರೀಕರಣ ಪ್ರಾರಂಭಿಸುವುದು ಅವರ ಐಡಿಯಾ.

    ಬೆಂಗಳೂರಲ್ಲದೆ ಕರಾವಳಿ ಭಾಗದಲ್ಲಿ ಚಿತ್ರೀಕರಣ ನಡೆಯಲಿದೆ. ಚಿತ್ರಕ್ಕೆ ಅಭಿಲಾಷ್ ಕಲತ್ತಿ ಛಾಯಾಗ್ರಹಣ ಮಾಡಿದರೆ, ಅರ್ಜುನ್ ಜನ್ಯ ಸಂಗೀತ ಸಂಯೋಜಿಸುತ್ತಿದ್ದಾರೆ. ಅಂದಹಾಗೆ, ಉಪೇಂದ್ರ ಅಭಿನಯದಲ್ಲಿ ಶಶಾಂಕ್ ಒಂದು ಚಿತ್ರ ನಿರ್ದೇಶಿಸಬೇಕಿತ್ತು. ಆ ಚಿತ್ರವನ್ನು ನವೆಂಬರ್​ನಲ್ಲಿ ಶುರು ಮಾಡುತ್ತಾರಂತೆ ಅವರು. ಎರಡು ತಿಂಗಳಲ್ಲಿ ‘ಲವ್ 360’ ಚಿತ್ರವನ್ನು ಒಂದೇ ಹಂತದಲ್ಲಿ ಚಿತ್ರೀಕರಣ ಮುಗಿಸಿ, ಆ ನಂತರ ಉಪೇಂದ್ರ ಚಿತ್ರ ಎನ್ನುತ್ತಾರೆ ಶಶಾಂಕ್.

    ದೇಶದ ಒಟ್ಟು ಕೋವಿಡ್​ ಪ್ರಕರಣಗಳಲ್ಲಿ ಅರ್ಧಕ್ಕೂ ಹೆಚ್ಚು ಇವೆರಡು ರಾಜ್ಯಗಳಲ್ಲೇ ಇವೆ!

    ಪ್ರಾಣಿಗಳ ಥರ ಕಾಡಿದ್ರು, ಒಬ್ರೂ ನೆರವಿಗೆ ಬರಲಿಲ್ಲ; ಇದು ಕೋಟ್ಯಧಿಪತಿ ಉದ್ಯಮಿಯ ಸಂಕಟದ ಕಥೆ..

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts