

ಮುಂಬೈ ಬೊರೊಸಿಲ್ ರಿನ್ಯೂವಬಲ್ಸ್ (Borosil Renewables) ಷೇರುಗಳು ಬುಧವಾರದ ಆರಂಭದಲ್ಲಿ 11% ಕ್ಕಿಂತ ಹೆಚ್ಚು ಏರಿಕೆ ಕಂಡವು. 632 ರೂಪಾಯಿ ತಲುಪುವ ಕಂಪನಿಯ ಷೇರುಗಳ ಬೆಲೆಯು 52 ವಾರಗಳ ಹೊಸ ಗರಿಷ್ಠ ಮಟ್ಟವನ್ನು ಮುಟ್ಟಿತು. ಬುಧವಾರ ಅಂತ್ಯಕ್ಕೆ ಷೇರು ಬೆಲೆ 609 ರೂಪಾಯಿಗೆ ತಲುಪಿತು.
ಸೋಲಾರ್ ಗ್ಲಾಸ್ ತಯಾರಿಕೆ ಕಂಪನಿ ಬೊರೊಸಿಲ್ ರಿನ್ಯೂವಬಲ್ಸ್ ಷೇರುಗಳು ಮಂಗಳವಾರದ ದಿನದ ವಹಿವಾಟಿನಲ್ಲಿ ಶೇ.19ರಷ್ಟು ಏರಿಕೆ ಕಂಡಿದ್ದು ವಿಶೇಷ.
ಕಳೆದ ಕೆಲವು ವರ್ಷಗಳಲ್ಲಿ ಬೊರೊಸಿಲ್ ರಿನ್ಯೂವಬಲ್ಸ್ ಷೇರುಗಳು ಸಾಕಷ್ಟು ಆದಾಯವನ್ನು ನೀಡಿವೆ. ಈ ಕಂಪನಿಯ ಷೇರುಗಳು 17 ಪೈಸೆಯಿಂದ 600 ರೂಪಾಯಿ ಏರುವ ಮೂಲಕ ದೀರ್ಘಾವಧಿ ಹೂಡಿಕೆದಾರರಿಗೆ ಅಪಾರ ಲಾಭ ತಂದುಕೊಟ್ಟಿವೆ.
ಪ್ರಧಾನಿ ನರೇಂದ್ರ ಮೋದಿ ಅವರು ಮಹತ್ವದ ಘೋಷಣೆ ಮಾಡಿದ ನಂತರ ಈ ಕಂಪನಿಯ ಷೇರುಗಳ ಬೆಲೆ ಗಗನಮುಖಿಯಾಗಿದೆ. 1 ಕೋಟಿ ಮನೆಗಳ ಮೇಲ್ಛಾವಣಿಯ ಮೇಲೆ ಸರ್ಕಾರವು ಸೋಲಾರ್ ಪ್ಯಾನಲ್ಗಳನ್ನು ಅಳವಡಿಸಲಿದೆ ಎಂದು ಅವರು ಹೇಳಿದ್ದಾರೆ. ಇದಕ್ಕಾಗಿ ಪ್ರಧಾನಮಂತ್ರಿ ಸೂರ್ಯೋದಯ ಯೋಜನೆ ಆರಂಭಿಸಲಾಗುವುದು ಎಂದು ಪ್ರಧಾನಿ ಮೋದಿಯವರ ಘೋಷಣೆಯ ನಂತರ, ಸೋಲಾರ್ ಕಂಪನಿಗಳ
ಷೇರುಗಳಲ್ಲಿ ಭಾರಿ ಏರಿಕೆ ಕಂಡುಬಂದಿದೆ.
ಬೊರೊಸಿಲ್ ರಿನಿವೇಬಲ್ಸ್ ರೀತಿಯಲ್ಲಿ ವೆಬ್ಸಾಲ್ ಎನರ್ಜಿ ಸಿಸ್ಟಮ್ಸ್, ಸ್ಟರ್ಲಿಂಗ್ & ವಿಲ್ಸನ್ ರಿನ್ಯೂವಬಲ್ ಎನರ್ಜಿ, ವರಿ ರಿನ್ಯೂವಬಲ್ಸ್ ಟೆಕ್ನಾಲಜೀಸ್ ಮತ್ತು ಟಾಟಾ ಪವರ್ ಷೇರುಗಳಲ್ಲಿ ಉತ್ತಮ ಏರಿಕೆ ಕಂಡುಬಂದಿದೆ.
ಕಳೆದ ಕೆಲವು ವರ್ಷಗಳಲ್ಲಿ ಬೊರೊಸಿಲ್ ರಿನ್ಯೂವಬಲ್ಸ್ ಷೇರುಗಳು ಕ್ಷಿಪ್ರ ಏರಿಕೆ ಕಂಡಿವೆ. ಈ ಕಂಪನಿಯ ಷೇರುಗಳ ಬೆಲೆ 22 ಜನವರಿ 2004 ರಂದು ಕೇವಲ 17 ಪೈಸೆ ಇತ್ತು.
ಸೌರಶಕ್ತಿ ಉದ್ಯಮಕ್ಕೆ ಸಂಬಂಧಿಸಿದ ಈ ಕಂಪನಿಯ ಷೇರುಗಳು 24 ಜನವರಿ 2024 ರಂದು ರೂ 608 ತಲುಪಿದೆ. ಈ ಅವಧಿಯಲ್ಲಿ ಬೊರೊಸಿಲ್ ಷೇರುಗಳು 3,60,000 ಕ್ಕಿಂತ ಹೆಚ್ಚು ಜಿಗಿತ ಕಂಡಿವೆ. ಕಳೆದ 10 ವರ್ಷಗಳಲ್ಲಿ ಈ ಮಲ್ಟಿಬ್ಯಾಗರ್ ಕಂಪನಿಯ ಷೇರುಗಳು ಶೇಕಡಾ 6300 ಕ್ಕಿಂತ ಹೆಚ್ಚು ಏರಿವೆ. 2014ರ ಜನವರಿ 31ರಂದು 9.59 ರೂ.ನಲ್ಲಿದ್ದ ಷೇರುಗಳು ಈಗ 608 ರೂ.ಗೆ ತಲುಪಿವೆ.