ಗಣಿ ಕಂಪನಿಯ ಷೇರುಗಳ ಬೆಲೆ ಅಪ್ಪರ್​ ಸರ್ಕ್ಯೂಟ್​ ಹಿಟ್​: ಈ ಸುದ್ದಿಯೇ ಇದಕ್ಕೆ ಕಾರಣ…

1 Min Read
ಗಣಿ ಕಂಪನಿಯ ಷೇರುಗಳ ಬೆಲೆ ಅಪ್ಪರ್​ ಸರ್ಕ್ಯೂಟ್​ ಹಿಟ್​: ಈ ಸುದ್ದಿಯೇ ಇದಕ್ಕೆ ಕಾರಣ…

ಮುಂಬೈ: ಮಂಗಳವಾರ ಹೂಡಿಕೆದಾರರು ಷೇರು ಮಾರುಕಟ್ಟೆಯಲ್ಲಿ ಲಿಸ್ಟೆಡ್ ಕಂಪನಿಯಾದ ಗ್ಯಾಲಂಟ್ ಇಸ್ಪಾತ್ ಷೇರುಗಳ ಮೇಲೆ ಮುಗಿಬಿದ್ದರು. ವಾರದ ವಹಿವಾಟಿದನ ಎರಡನೇ ದಿನದಂದು, ಈ ಕಂಪನಿಯ ಷೇರುಗಳ ಬೆಲೆ 5% ಏರಿಕೆ ಕಂಡು ಅಪ್ಪರ್ ಸರ್ಕ್ಯೂಟ್ ಹಿಟ್​ ಆಯಿತು. ಈ ಮೂಲಕ ಷೇರು ಬೆಲೆ ರೂ 333.25 ತಲುಪಿತು. ಇದು ಈ ಷೇರಿನ 52 ವಾರಗಳ ಗರಿಷ್ಠ ಬೆಲೆ ಆಗಿದೆ.

ಕಂಪನಿಯು ಸಾಧಿಸಿದ ದೊಡ್ಡ ಯಶಸ್ಸಿನ ಕಾರಣದಿಂದಾಗಿ ಷೇರುಗಳ ಈ ಏರಿಕೆಯು ಬಂದಿದೆ. ರಾಜಸ್ಥಾನದ ಕರೌಲಿಯಲ್ಲಿರುವ ತೊಡುಪುರ ಕಬ್ಬಿಣದ ಅದಿರು ಬ್ಲಾಕ್‌ಗೆ ಗ್ಯಾಲಂಟ್ ಇಸ್ಪಾತ್ ಕಡಿಮೆ ಬಿಡ್‌ದಾರನಾಗಿ ಹೊರಹೊಮ್ಮಿದೆ.

ಗ್ಯಾಲಂಟ್ ಇಸ್ಪಾತ್ ರಾಜಸ್ಥಾನದ ಕಬ್ಬಿಣದ ಅದಿರು ಬ್ಲಾಕ್ ಹರಾಜಿನಲ್ಲಿ ಗರಿಷ್ಠ 175 ಪ್ರತಿಶತದಷ್ಟು ಅಂತಿಮ ಬಿಡ್ ಅನ್ನು ಸಲ್ಲಿಸುವ ಮೂಲಕ ಗೆದ್ದಿದೆ ಎಂದು ಷೇರು ಮಾರುಕಟ್ಟೆಗೆ ಆ ಕಂಪನಿ ತಿಳಿಸಿದೆ. ಲೆಟರ್ ಆಫ್ ಇಂಟೆಂಟ್ ಮತ್ತು ಎಲ್ಲಾ ಅಗತ್ಯ ಅನುಮೋದನೆಗಳನ್ನು ಪಡೆಯಲು ಕಂಪನಿಯು ಈಗ ಟೆಂಡರ್ ದಾಖಲೆಗಳಲ್ಲಿ ಅಗತ್ಯ ಕ್ರಮಗಳನ್ನು ಮುಂದುವರಿಸುತ್ತಿದೆ.

ಇದರ ನಂತರ, ಗಣಿಗಾರಿಕೆ ಕಾರ್ಯಾಚರಣೆಗಳನ್ನು ಪ್ರಾರಂಭಿಸಲು ಗುತ್ತಿಗೆ ಪತ್ರ ಮತ್ತು ಗಣಿ ಅಭಿವೃದ್ಧಿ ಮತ್ತು ಉತ್ಪಾದನಾ ಒಪ್ಪಂದವನ್ನು (MDPA) ಅಂತಿಮಗೊಳಿಸಬಹುದು. ರಾಜ್ಯದಲ್ಲಿ ಕಬ್ಬಿಣದ ಅದಿರಿನ ನಿಕ್ಷೇಪಗಳು ಸರಿಸುಮಾರು 85.42 ಮಿಲಿಯನ್ ಟನ್‌ಗಳಾಗಿದ್ದು, ಇದು 260.71 ಹೆಕ್ಟೇರ್ ಪ್ರದೇಶದಲ್ಲಿ ಹರಡಿದೆ. ಗ್ಯಾಲಂಟ್ ಇಸ್ಪತ್ ತನ್ನ ಗುಜರಾತ್​ ಸ್ಟೀಲ್ ಘಟಕಕ್ಕೆ ರಾಜಸ್ಥಾನದ ಕಬ್ಬಿಣದ ಅದಿರು ಬ್ಲಾಕ್ ಅನ್ನು ಮಂಜೂರು ಮಾಡಿದೆ.

ಕಂಪನಿಯ ಷೇರುಗಳು ವರ್ಷದ ಆರಂಭದಿಂದಲೂ ಉತ್ತಮ ಪ್ರದರ್ಶನ ನೀಡುತ್ತಿದ್ದು, ಷೇರು ಮಾರುಕಟ್ಟೆಯಲ್ಲಿ ಶೇ. 85ರಷ್ಟು ಲಾಭ ಗಳಿಸಿವೆ. ಈ ಕಂಪನಿಯಲ್ಲಿ ಶೇ. 68.93 ರಷ್ಟು ಪಾಲು ಪ್ರವರ್ತಕರ ಬಳಿ ಇದೆ. ಶೇ. 31.07 ಪಾಲನ್ನು ಸಾರ್ವಜನಿಕ ಷೇರುದಾರರು ಹೊಂದಿದ್ದಾರೆ.

See also  'ಮುಸುಕು ತೆಗೆದು ಆಖಾಡಕ್ಕೆ ಇಳಿಯಿರಿ...ನೇರವಾಗಿ ಚುನಾವಣೆಯಲ್ಲಿ ಸ್ಪರ್ಧಿಸಿ' ಆರ್​ಎಸ್​ಎಸ್​ ಮುಖ್ಯಸ್ಥ ಮೋಹನ್​ ಭಾಗವತ್​ಗೆ ಭೀಮ್ ಆರ್ಮಿ ಮುಖ್ಯಸ್ಥನಿಂದ ಸವಾಲು

ಕುಸಿತ ಕಂಡಿದೆ ಪಿಎಸ್​ಯು ಷೇರು ಬೆಲೆ: ಮತ್ತೆ ಏರಲಿದೆ ಎನ್ನುತ್ತಾರೆ ತಜ್ಞರು

Share This Article