ಮನರಂಜಿಸಿದ 'ಶರಸೇತು ಬಂಧ' ತಾಳಮದ್ದಳೆ...

Yakshagana
Published on

ಸೌಖ್ಯವನ ಪರೀಕದಲ್ಲಿ ಮೇರು ಕಲಾವಿದರಿಂದ ಅರ್ಥಗಾರಿಕೆ

ವಿಜಯವಾಣಿ ಸುದ್ದಿಜಾಲ ಉಡುಪಿ

ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಯೋಗ ಮತ್ತು ಪ್ರಕೃತಿ ಚಿಕಿತ್ಸಾ ಆಸ್ಪತ್ರೆಯ ಸೌಖ್ಯವನ ಪರೀಕದಲ್ಲಿ ಜುಲೈ 31ರಂದು ಸಂಜೆ ಮಹಾಭಾರತದ ಆಯ್ದ ಭಾಗದ ಶರಸೇತು ಬಂಧ ಯಕ್ಷಗಾನ ತಾಳಮದ್ದಳೆ ಯಶಸ್ವಿಯಾಗಿ ಜರುಗಿತು.

ಹನುಮಗಿರಿ ಮೇಳದ ಪ್ರಸಿದ್ಧ ಯುವ ಭಾಗವತ ಚಿನ್ಮಯ ಭಟ್​, ಚೆಂಡೆಯಲ್ಲಿ ಸೀತಾರಾಮ ತೋಳ್ಪಾಡಿತ್ತಾಯ, ಮೃದಂಗದಲ್ಲಿ ಜನಾರ್ದನ ತೋಳ್ಪಾಡಿತ್ತಾಯ ಹಿಮ್ಮೇಳದಲ್ಲಿದ್ದರು. ಮುಮ್ಮೇಳದಲ್ಲಿ ಅರ್ಜುನನಾಗಿ ಸುಣ್ಣಂಬಳ ವಿಶ್ವೇಶ್ವರ ಭಟ್​, ಹನುಮಂತನಾಗಿ ಜಬ್ಬಾರ್​ ಸಮೋ ಸಂಪಾಜೆ ಹಾಗೂ ಶ್ರೀಕೃಷ್ಣನಾಗಿ ಪವನ್​ ಕಿರಣಕೆರೆ ಪಾಲ್ಗೊಂಡಿದ್ದರು. ನಿರರ್ಗಳ, ಅರ್ಥಗರ್ಭಿತ ಮಾತುಗಳಿಂದ ಸಭಿಕರ ಮನಗೆದ್ದರು. ವೈದ್ಯಾಧಿಕಾರಿಗಳು, ಸಿಬ್ಬಂದಿ ಪಾಲ್ಗೊಂಡಿದ್ದರು.

ಸೌಖ್ಯವನದಲ್ಲಿ ಪ್ರತಿವರ್ಷವೂ ಆಷಾಢ ಮಾಸದಲ್ಲಿ ನಿರಂತರ ಯಕ್ಷಗಾನ ಆಯೋಜಿಸಲಾಗುತ್ತಿದೆ. ಈ ಬಾರಿ ಸಹಕಾರ ನೀಡಿದ ಉಡುಪಿಯ ಗುತ್ತಿಗೆದಾರ ನಂದಕುಮಾರ್​ ಅವರು ಕಾರ್ಯಕ್ರಮದ ಕೊನೆಯಲ್ಲಿ ಎಲ್ಲ ಕಲಾವಿದರನ್ನೂ ಸನ್ಮಾನಿಸಿದರು. ಆಸ್ಪತ್ರೆಯ ವ್ಯವಸ್ಥಾಪಕ ಪ್ರವೀಣಕುಮಾರ್​ ಸ್ವಾಗತಿಸಿ, ಕಾರ್ಯಕ್ರಮ ನಿರೂಪಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net