ಮಂಗಳೂರು, ನಗರದ ಫಳ್ನೀರ್‌ನ ಸೈಂಟ್ ಮೇರಿಸ್ ವಿದ್ಯಾ ಸಂಸ್ಥೆಯ 2ನೆ ತರಗತಿಯ ವಿದ್ಯಾರ್ಥಿನಿ ಶರಣ್ಯ ಶರತ್ ಯೋಗಾಸನದ ಕಪೋತಾಸನದ ಭಂಗಿಯಲ್ಲಿ ಇಂಡಿಯಾ ಬುಕ್ ಆಫ್ ರೆಕಾರ್ಡ್ ಮತ್ತು ವರ್ಲ್ಡ್ ವೈಡ್ ಬುಕ್ ಆಫ್ ರೆಕಾರ್ಡ್‌ನಲ್ಲಿ ದಾಖಲೆ ನಿರ್ಮಿಸಿದ್ದಾರೆ.
ಶರಣ್ಯ ಶರತ್‌ರವರು ತಮ್ಮ ಸಾಧನೆಯ ಮೂಲಕ ಸದ್ಯ ತಮಿಳುನಾಡಿನ ಹರಿಣಿತ ಬಿ.ಎಸ್. ಅವರ ಹೆಸರಿನಲ್ಲಿ ಇದ್ದ 15 ನಿಮಿಷಗಳ ಕಪೋತಾಸನದ ದಾಖಲೆ ಮುರಿದು ಒಂದು ಗಂಟೆ ಎರಡು ನಿಮಿಷದ ಅವಧಿಗೆ ಕಪೋತಾಸನದ ಹೊಸ ದಾಖಲೆ ನಿರ್ಮಿಸಿದ್ದಾರೆ ಎಂದು ಹವ್ಯಾಸಿ ಈಜುಗಾರ ಎ. ಚಂದ್ರಹಾಸ ಶೆಟ್ಟಿ ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ತಿಳಿಸದರು.
ಅಂತಾರಾಷ್ಟ್ರೀಯ ಯೋಗ ಪಟು ಕವಿತಾ ಅಶೋಕ್‌ರವರು ಶರಣ್ಯಗೆ ತರಬೇತಿ ನೀಡುತ್ತಿದ್ದಾರೆ. ಮಂಗಳೂರು ಮಹಾನಗರ ಪಾಲಿಕೆಯ ಈಜುಕೊಳದ ವ್ಯವಸ್ಥಾಪಕ ರಮೇಶ್ ಬಿಜೈ ಮತ್ತು ಈಜುಗಾರ ಚಂದ್ರಶೇಖರ್ ಸೂರಿಕುಮೇರ್ ಅವರೂ ಬಾಲಕಿಯ ಸಾಧನೆಗೆ ಸಹಕರಿಸುತ್ತಿದ್ದಾರೆ ಎಂದು ಅವರು ತಿಳಿಸಿದರು.
ಸೈಂಟ್ ಮೇರಿಸ್ ವಿದ್ಯಾ ಸಂಸ್ಥೆಯ ಪ್ರಾಂಶುಪಾಲೆ ಸಿ.ಮೇಝಿ ಎ.ಸಿ. ಉಪ ಪ್ರಾಂಶುಪಾಲೆ ಸಿ. ಸಂತೋಷ್ ಮೇರಿ, ಸೋನಿಯಾ ಜೆ., ಬಾಲಕಿ ಶರಣ್ಯ ಶರತ್, ಯೋಗ ಶಿಕ್ಷಕಿ ಕವಿತಾ ಅಶೋಕ್ ಉಪಸ್ಥಿತರಿದ್ದರು.
ಶರಣ್ಯ ಶರತ್ ಯೋಗಾಸನದ ಕಪೋತಾಸನದ ಭಂಗಿಯಲ್ಲಿ ಇಂಡಿಯಾ ಬುಕ್ ಆಫ್ ರೆಕಾರ್ಡ್

You Might Also Like
ಮಳೆಗಾಲದಲ್ಲಿ ಈ ಪದಾರ್ಥಗಳನ್ನು ನಿಮ್ಮ ಆಹಾರದಲ್ಲಿ ಬಳಸಿ ರೋಗನಿರೋಧಕ ಶಕ್ತಿಯನ್ನು ಬಲಪಡಿಸಿಕೊಳ್ಳಿ! rainy season
rainy season: ಮಳೆಗಾಲದಲ್ಲಿ ಬ್ಯಾಕ್ಟೀರಿಯಾ, ವೈರಸ್‌ಗಳು ಅಥವಾ ಇತರ ಶಿಲೀಂಧ್ರ ಸೋಂಕುಗಳು ಸುಲಭವಾಗಿ ಹರಡುತ್ತವೆ. ಮಳೆಗಾಲದಲ್ಲಿ…
ಸಣ್ಣ ತೂಕ ಎತ್ತಿದರೂ ಸುಸ್ತಾಗುತ್ತಾ? ಹಾಗಾದರೆ ಈ ಆಹಾರಗಳಿಂದ ನರ ದೌರ್ಬಲ್ಯ ನಿವಾರಿಸಿ… Health Tips
Health Tips : ದೇಹವು ಸರಿಯಾದ ಪೋಷಕಾಂಶಗಳನ್ನು ಪಡೆಯದಿದ್ದರೆ, ಅನೇಕ ರೋಗಗಳಿಗೆ ತುತ್ತಾಗುತ್ತದೆ. ನಿಮ್ಮಲ್ಲಿರುವ ಕೆಟ್ಟ…